Siddaramaiah | ವಿತ್ತೀಯ ಕಲಾಪ ಬಗ್ಗೆ ಸಿದ್ದರಾಮಯ್ಯ ಪಾಠ
ಬೆಂಗಳೂರು : ವಿಪಕ್ಷ ನಾಯಕ ಸಿದ್ದರಾಮಯ್ಯ, ಪರಿಷತ್ ಸದಸ್ಯರಿಗೆ ವಿತ್ತೀಯ ಕಲಾಪದ ಬಗ್ಗೆ ವಿಶೇಷ ಪಾಠ ಮಾಡಿದ್ದಾರೆ. ಪರಿಷತ್ ಅಧ್ಯಕ್ಷ ಬಸವರಾಜ್ ಹೊರಟ್ಟಿ ಅವರು ಪರಿಷತ್ ಸದಸ್ಯರಿಗೆ ಕಾರ್ಯಗಾರ ಆಯೋಜನೆ ಮಾಡಿದ್ದು, ಇಲ್ಲಿ ವಿತ್ತೀಯ ಕಲಾಪದ ಬಗ್ಗೆ ಸಿದ್ದರಾಮಯ್ಯ ಮಾತನಾಡಿದ್ದಾರೆ.
ಕಾರ್ಯಗಾರದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಸವರಾಜ್ ಹೊರಟ್ಟಿ ಏಳು ಬಾರಿ ಪರಿಷತ್ ಸದಸ್ಯರಾಗಿದ್ದು, ಈಗ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕರೆ ಮಾಡಿ ಪರಿಷತ್ ಸದಸ್ಯರಿಗೆ ಕಾರ್ಯಗಾರ ಆಯೋಜಿಸಿದ್ದು, ವಿತ್ತೀಯ ಕಲಾಪ ಬಗ್ಗೆ ಮಾತನಾಡುವಂತೆ ಸೂಚಿಸಿದ್ರು. ನನಗೂ ಹೊರಟ್ಟಿ ಅವರಿಗೂ ಧೀರ್ಘಕಾಲದ ಸ್ನೇಹ.
ಹೀಗಾಗಿ ಅನೇಕ ಸಂದರ್ಭದಲ್ಲಿ ಹೊಗಳಿಕೆ ಹಾಗೂ ತೆಗಳಿಕೆ ಎರಡೂ ಮಾಡ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೊಗಳಿಕೆ ಮತ್ತು ತೆಗಳಿಕೆಯನ್ನ ಸಮಚಿತ್ತವಾಗಿ ಸ್ವೀಕರಿಸಬೇಕು. ಆ ಮಾತ್ರ ರಾಜಕಾರಣದಲ್ಲಿ ಬೆಳೆಯಲು ಸಾಧ್ಯ ಎಂದು ಹೊರಟ್ಟಿ ಅವರ ಜೊತೆಗಿನ ಸ್ನೇಹವನ್ನ ನೆನಸಿಕೊಂಡರು.
ಬಳಿಕ ಮಾತು ಮುಂದುವರೆಸಿ, ರಾಮಕೃಷ್ಣ ಹೆಗಡೆ ಅವರು 13 ವರ್ಷ ಕಾಲ ಬಜೆಟ್ ಮಂಡಿಸಿದ್ರು, ನಾನೂ ಮಂಡಿಸಿದ್ದೆ. 1966-67ರಿಂದ 88ರವರೆಗೂ ರಾಮಕೃಷ್ಣ ಹೆಗಡೆ ಅವರು ಮಂಡಿಸಿದ್ರು. ನಾನು 95-96 _ರಿಂದ ಮಂಡಿಸಲು ಪ್ರಾರಂಭಿಸಿ, 2018ರ ವರೆಗೂ ಮಂಡಿಸಿದ್ದೇನೆ. ನಾನೇ ಹೆಚ್ಚು ಮಂಡಿಸಿದವನೇನು ಅಲ್ಲ. ಸ್ವಾತಂತ್ರ್ಯ ಬಂದ ಬಳಿಕ ಬಜೆಟ್ ಗಾತ್ರ, ಗಣನೀಯವಾಗಿ ಬೆಳೆದಿದೆ. 1953ರಲ್ಲಿ ಕೆಂಗಲ್ ಹನುಮಂತಯ್ಯ ಅವಧಿಯಲ್ಲಿ ಬಜೆಟ್ ಗಾತ್ರ 21ಕೋಟಿ 3ಲಕ್ಷ ಇತ್ತು. ಈಗ 2,46,207 ಕೋಟಿ ತಲುಪಿದೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಇಷ್ಟು ದೊಡ್ಡ ಗಾತ್ರದ ಬಜೆಟ್ ಮಂಡಿಸಿದ್ದೇವೆ. ರಾಜ್ಯಪಾಲರು ನಿಗದಿಪಡಿಸಿದ ದಿನದಂದು ಬಜೆಟ್ ಮಂಡಿಸಬೇಕು. ಸಂವಿಧಾನದ ಪ್ರಕಾರ, ಬಜೆಟ್ ಅನ್ನೋದು ಬಹಳ ಮುಖ್ಯ. ಬಜೆಟ್ ಅಂದ್ರೆ ಫೈನಾನ್ಸಿಯಲ್ ಆನ್ಯುಯಲ್ ಸ್ಟೇಟ್ಮೆಂಟ್ ಈಚ್ ಆಂಡ್ ಎಕ್ಸ್‌ಪೆಂಡೀಚರ್. ಇದನ್ನೇ ಬಸವಣ್ಣನವರು ಕಾಯಕ ಮತ್ತು ದಾಸೋಹ ಅಂತ ಹೇಳಿದ್ರು. ಆಯವ್ಯಯ ವ್ಯಕ್ತಿ, ಕುಟುಂಬ, ಸಂಸ್ಥೆ, ಕಂಪನಿಗಳ ಖರ್ಚು ವೆಚ್ಚಗಳ ವ್ಯವಸ್ಥಿತ ರೂಪು ರೇಷೆ ಮಾಡಿಕೊಳ್ಳಬೇಕು. ಖರ್ಚು ಕಡಿಮೆ ಇದ್ದು, ಆದಾಯ ಹೆಚ್ಚಿದ್ರೆ ಉಳಿತಾಯ ಬಜೆಟ್ ಅಂತ ಕರೀತಾರೆ. ಉಳಿತಾಯ ಹಣದಲ್ಲಿ ಅಭಿವೃದ್ಧಿ ಮಾಡಬಹುದು ಎಂದು ಸಿದ್ದರಾಮಯ್ಯ ತಿಳಿಸಿದರು.
ಬಜೆಟ್ ನಲ್ಲಿ ರೆವಿನ್ಯೂ ರೆಸೀಡ್ಸ್, ಕ್ಯಾಪಿಟಲ್ ರೆಸೀಡ್ಸ್ ಅಂತ ಎರಡು ಭಾಗ ಇದೆ. ಕಮಿಟೆಡ್ ಎಕ್ಸ್ಪೆಂಡೀಚರ್ ಅನ್ನ ಖರ್ಚು ಮಾಡಲೇಬೇಕು. ಯಾವುದು ಅಂದ್ರೆ ಸಂಬಳ, ಪೆನ್‌ಶನ್, ಇತರೆ ಖರ್ಚುಗಳು. ರೆವಿನ್ಯೂ ಆಧಾಯಕ್ಕಿಂತ ಕಮಿಟೆಡ್ ಎಕ್ಸ್‌ಪೆಂಡೀಚರ್ ಹೆಚ್ಚಾದ್ರೆ ಸಾಲ ಮಾಡಿಕೊಳ್ಳಬೇಕಾಗಲಿದೆ. ನಮ್ಮರಾಜ್ಯದ ಮುನ್ನೋಟ ಐದು ವರ್ಷಗಳ ಕಾಲ ಇರಲಿದೆ. ನಾನು ಹಣಕಾಸು ಮಂತ್ರಿ ಆಗಿದ್ದಾಗ ಕಮಿಟೆಡ್ ಎಕ್ಸ್‌ಪೆಂಡೀಚರ್ 80% ಮೀರಿರಲಿಲ್ಲ. ಈಗ ಅದು 102% ಆಗಿದೆ. ಇದನ್ನ ಸರಿಮಾಡಿಕೊಳ್ಳಬೇಕು ಅಂತ ವಿಧಾನಸಭೆಯಲ್ಲಿ ಚರ್ಚೆ ಮಾಡಿದ್ದೇನೆ. ಅನಗತ್ಯ ಖರ್ಚು ಕಡಿಮೆ ಮಾಡಿ, ಕಮಿಟೆಡ್ ಎಕ್ಸ್‌ಪೆಂಡೀಚರ್ ಕಡಿಮೆ ಮಾಡಿಕೊಳ್ಳಬೇಕು. ಇಲ್ಲದೆ ಹೋದ್ರೆ ರಾಜ್ಯದ ಅಭಿವೃದ್ಧಿ ಕುಂಟಿತ ಆಗಲಿದೆ. ಬಜೆಟ್ ಅನ್ನೋದು ಡ್ರೈ ಸಬ್ಜೆಕ್ಸ್, ಆಸಕ್ತಿ ಬಳಸಿಕೊಂಡ್ರೆ ಇಂಟ್ರಸ್ಟಿಂಗ್ ಸಬ್ಕೆಕ್ಟ್ ಆಗಲಿದೆ. ಬಜೆಟ್ ಅಂಕಿ ಅಂಶಗಳು ಅಲಂಕಾರಿಕವಾಗಿ ಇರಬಾರದು. ವಾಸ್ತವಿಕವಾಗಿ ಕೂಡಿದ್ರೆ ಮಾತ್ರ ಉತ್ತಮ ಬಜೆಟ್ ಆಗಲಿದೆ. ತೆರಿಗೆ ಸಂಗ್ರಹ ಸ್ವಾತಂತ್ರ್ಯ ಪೂರ್ವ, ನಂತರವೂ ಇದೆ. ತೆರಿಗೆ ಇಲ್ಲದೆ ಹೋದ್ರೆ ಅಭಿವೃದ್ಧಿ ಸಾಧ್ಯವಿಲ್ಲ.
ವೇದಗಳ ಕಾಲದಲ್ಲಿ ಕರಗಳನ್ನ ಬಲಿ ಅಂತ ಕರೆಯುತ್ತಿದ್ದರು. ಭೂಮಿ ಮೇಲೆ ಹಾಕುವ ಕಂದಾಯ 30% ಇತ್ತು, ಈಗ ಕಡಿಮೆಯಾಗಿದೆ. ತೋಟಗಾರಿಕಾ ಬೆಳೆಗಳ ಮೇಲೆ ಈಗ ಕಂದಾಯ ಇಲ್ಲ, ಭೂಕಂದಾಯ ಈಗ ತೆಗೆಯಲಾಗಿದೆ ಎಂದು ವಿವರಿಸಿದರು.