ಮೋದಿ ಅಧಿಕಾರವಧಿಯಲ್ಲೇ ದೇಶದಲ್ಲಿ ಗೋವು ರಫ್ತು ಹೆಚ್ಚಳ : ಸಿದ್ದರಾಮಯ್ಯ
ಬೆಂಗಳೂರು: ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಗೋಹಹತ್ಯೆ , ಗೋವು ಸಸಾಗಾಟ ಹೆಚ್ಚಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆರೋಪ ಮಾಡಿದ್ದಾರೆ.. ಗೋಹತ್ಯೆ ನಿಷೇಧ ಕಾಯ್ದೆ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ ಸಿದ್ದರಾಮಯ್ಯನವರು , ಗೋಹತ್ಯೆ ನಿಷೇಧವನ್ನು ದೇಶಾದ್ಯಂತ ಜಾರಿಗೆ ತರಲು ಸಾಧ್ಯವಿಲ್ಲ ಅಂದ ಮೇಲೆ ಕರ್ನಾಟಕದಲ್ಲಿ ಮಾತ್ರ ಯಾಕೆ ಜಾರಿಗೆ ತರಬೇಕು ದೇಶಕ್ಕೆ ಒಂದು ನೀತಿ, ಕರ್ನಾಟಕ, ಉತ್ತರಪ್ರದೇಶಕ್ಕೆ ಒಂದು ನೀತಿ ಯಾಕೆ ಎಂದು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.
ಬೆಂಕಿ ಜತೆ ಆಟ ಆಡಬೇಡಿ ‘ದೀದಿ’ : ಪಶ್ಚಿಮ ಬಂಗಾಳದ ರಾಜ್ಯಪಾಲರ ವಾರರ್ನಿಂಗ್ !
ಇನ್ನೂ ಗೋಹತ್ಯೆ ನಿಷೇಧದಿಂದ ಚರ್ಮೋದ್ಯಮದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ವಿಧೇಯಕದ ಬಗ್ಗೆ ಸಮರ್ಪಕ ಚರ್ಚೆ ನಡೆಸದೇ ಜಾರಿಗೆ ತಂದಿರುವುದು ಸರಿಯಲ್ಲ. ದೇಶದಲ್ಲಿ ಗೋ ಶಾಲೆಗಳನ್ನು ಆರಂಭಿಸುತ್ತೇವೆ. ಗೋಹತ್ಯೆ ನಿಷೇಧಿಸುತ್ತೇವೆ ಎಂದು ಹೇಳುವ ಬಿಜೆಪಿ ನಾಯಕರಲ್ಲಿ ಬಹುತೇಕರು ಗೋ ಮಾಂಸ ರಫ್ತು ಮಾಡುವವರೇ ಇದ್ದಾರೆ. ಮೋದಿಯವರು ಪ್ರಧಾನಿಯಾದ ಮೇಲೆ ದೇಶದಲ್ಲಿ ಗೋ ಮಾಂಸ ರಫ್ತು ಪ್ರಮಾಣ ಹೆಚ್ಚಿದೆ ಎಂದು ಆರೋಪಿಸಿದ್ದಾರೆ. ಇನ್ನೂ ಕಾಯ್ದೆಯ ಸಾಧಕ ಬಾದಕಗಳ ಬಗ್ಗೆ ಚರ್ಚೆ ನಡೆಸದೇ ಏಕಾಏಕಿ ಮಸೂದೆ ಮಂಡಿಸಿರುವುದು ಸರಿಯಲ್ಲ. ಗೋಹತ್ಯೆ ನಿಷೇಧ ವಿಧೇಯಕವನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. ಆದರೆ, ಗೋ ಮಾಂಸ ರಫ್ತಿನ ಬಗ್ಗೆ ನಿಷೇಧ ಹೇರಿಲ್ಲ ಎಂದು ಕಿಡಿಕಾರಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel