Siddaramaih : ಬಿಜೆಪಿ ಮೀನ್ಸ್ ಸುಳ್ಳು , RRR ಭಯೋತ್ಪಾಧನೆಯನ್ನ ಹುಟ್ಟು ಹಾಕೋರು – ಸಿದ್ದರಾಮಯ್ಯ
ತುಮಕೂರಿನಲ್ಲಿ ಅಮುಲ್-ನಂದಿನಿ ವಿಲೀನ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯನವರು ಮಾತನಾಡಿದ್ದಾರೆ. ಪಾಪ ಅಮಿತ್ ಶಾ ಗೆ ಗೊತ್ತಿಲ್ಲಾ.. ನಮ್ಮಲ್ಲಿ 15 ಸಾವಿರ ಮಿಲ್ಕ್ ಸೊಸೈಟಿಗಳಿದೆ.. ದೇಶದಲ್ಲಿ ನಂದಿನಿ 2ನೇ ಸ್ಥಾನದಲ್ಲಿ ಇದೆ..
25 ಲಕ್ಷ ಜನರು ಅವಲಂಬಿತರಾಗಿದ್ದಾರೆ.. ಇದನ್ನ ಅಮುಲ್ ಜೊತೆ ವಿಲೀನ ಮಾಡೋಕೆ ಆಗುತ್ತಾ.. ಬಿಜೆಪಿ ಅವರು ಬಂದ್ಮೇಲೆ 6 ತಿಂಗಳಲ್ಲಿ ಹಾಲು ಉತ್ಪಾಧನೆ ಕಡಿಮೆಯಾಗಿದೆ..
ಕರ್ನಾಟಕ ಮೂಲದ ರಾಷ್ಟ್ರೀಕೃತ ಬ್ಯಾಂಕ್ ಗಳನ್ನ ವಿಲೀನ ಮಾಡಿದ್ರು.. ನಾನು ಅದನ್ನ ತೀವ್ರವಾಗಿ ವಿರೋಧಿಸ್ತೇನೆ..
ಇದೇ ಸಂದರ್ಭದಲ್ಲಿ ಅಭಿವೃದ್ದಿಗಿಂತ ಲವ್ ಜಿಹಾದ್ ವಿರುದ್ದ ಹೋರಾಡಬೇಕು ಅನ್ನೋ ಕಟೀಲ್ ಹೇಳಿಕೆ ವಿಚಾರವಾಗಿ ಮಾತನಾಡ್ತಾ , ದ್ವೇಷದ ರಾಜಕಾರಣ ಬಿಟ್ಟು ಇನ್ನೇನು ಬರುತ್ತೆ ಬಿಜೆಪಿ ಅವರಿಗೆ..
ಮಹಾತ್ಮ ಗಾಂಧಿಯನ್ನ ಕೊಂದವರು ಯಾರು,ಆ ವಂಶಸ್ಥರೇ ಇವರು.. ಸಾವರ್ಕರ್ ಕೂಡಾ ಅದೇ ದಾರಿಯಲ್ಲಿದ್ದವರು..ಮಹಾತ್ಮ ಗಾಂಧಿಯನ್ನ ಕೊಂದ ಗೋಡ್ಸೆಯನ್ನ ಪೂಜೆ ಮಾಡ್ತಾರೆ..
ಸಾವರ್ಕರ್ ದೇವಸ್ಥಾನ ಕಟ್ಟಿಸ್ತಾರೆ.. ಇವರಿಂದ ನಾವು ಪಾಠ ಕಲಿಯಬೇಕಾ..?
ಗೌರಿಲಂಕೇಶನ ಕೊಂದವರ್ಯಾರು,ಸನಾತನ ಧರ್ಮ ಅಂದರೇ ಯಾರು.. ಸನಾತನ ಧರ್ಮ ಆರ್.ಎಸ್.ಎಸ್.. ಆರ್.ಎಸ್.ಎಸ್ ಅವರು ಭಯೋತ್ಪಾಧನೆಯನ್ನ ಹುಟ್ಟು ಹಾಕೋರು..
ಭಯ ಉತ್ಪಾಧನೆ ಮಾಡೋರು ಅವರು..
ನಾವು ಪಿಎಫ್ಐ ಕೇಸು ವಾಪಸ್ ತೆಗೆದುಕೊಂಡಿದ್ದೀವಿ ಅನ್ನೋದು ಸುಳ್ಳು.. ನಾವು ಈ ದೇಶವನ್ನ ಒಗ್ಗೂಡಿಸುವ ಕೆಲಸ ಮಾಡಿದ್ದೀವಿ.. ದ್ವೇಷದ ರಾಜಕಾರಣ ಮಾಡಿ ಹೊಡೆದಾಕ್ಕೀದ್ದೀರಾ ಅಂತಾ ನಾವು ಒಗ್ಗೂಡಿಸೋ ಕೆಲಸ ಮಾಡ್ತೀವಿ.. ಬಿಜೆಪಿ ಮೀನ್ಸ್ ಸುಳ್ಳು.. ಮನುಷ್ಯತ್ವ ಇಲ್ದೇ ಇರೋರು ಅಂದ್ರೆ ಬಿಜೆಪಿ ಅವರು ಎಂದು ಕಿಡಿಕಾರಿದ್ಧಾರೆ..








