ಕೋವಿಡ್ ನಿಯಂತ್ರಣದಲ್ಲಿ ಎಡವಿದ ಕೇಂದ್ರ , ರಾಜ್ಯ ಸರ್ಕಾರಗಳು – ಸಿದ್ದರಾಮಯ್ಯ
ಬೆಂಗಳೂರು : ಕೊರೊನಾ ನಿರ್ವಹಣೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಡವಿದ್ದಾವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಿಡಿಕಾರಿದ್ದಾರೆ .
ಸರ್ಕಾರಕ್ಕೆ ತಜ್ಙರು ಸಲಹೆ ನೀಡುತ್ತಲೆ ಇರುತ್ತವೆ. ಮೊದಲ ಅಲೆ ಮುಗಿದ ಬಳಿಕ ಗಂಭೀರ ಕ್ರಮಗಳನ್ನ ಕೈ ಬಿಟ್ಟರು. ನವೆಂಬರು 30 2020 ರಲ್ಲಿ ತಾಂತ್ರಿಕ ಸಲಹಾ ಸಮಿತಿ ರಾಜ್ಯ ಸರ್ಕಾರಕ್ಕೆ ವರದಿ ನೀಡಿತ್ತು. ವರದಿಯಲ್ಲಿ ಜನವರಿಯಲ್ಲಿ ಎರಡನೇ ಅಲೆ ಪ್ರಾರಂಭವಾಗಬಹುದು ಎಂದಿತ್ತು. ಆದರೆ ಇವರು ಯಾರು ವರದಿಯನ್ನ ಗಂಭೀರವಾಗಿ ಪರಿಗಣಿಸಲೇ ಇಲ್ಲ. ಆಕ್ಸಿಜನ್, ವೆಂಟಿಲೇಟರ್, ವ್ಯಾಕ್ಸಿನ್ ತಯಾರಿ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ತೀವ್ರತೆ ಬಗ್ಗೆ ಮೊದಲೇ ಹೇಳಿದ್ರೂ ಸಿದ್ದತೆ ಮಾಡಿಕೊಂಡಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಅಲ್ಲದೇ ಫೆಬ್ರವರಿ ಮಾರ್ಚ್ ನಲ್ಲಿ ತಯಾರಿ ಮಾಡಿಕೊಂಡಿಲ್ಲ. ಚುನಾವಣೆಗಳನ್ನ ಆಯೋಗ ಮುಂದೆ ಹಾಕಬೇಕಿತ್ತು. ಈ ಐದು ರಾಜ್ಯಗಳ ಚುನಾವಣೆ ಅಗತ್ಯ ಏನಿತ್ತು. ಪ್ರಧಾನಿ ಜನಸಾಗರ ನೋಡು ಖುಷಿ ಪಟ್ಟು ಜನರ ಜೀವದ ಜೊತೆ ಚಲ್ಲಾಟ ಆಡಿದಾರೆ. ಪ್ರಧಾನಿಗಳು ಒಂದು ರ್ಯಾಲಿಯಲ್ಲಿ ಇಂತಹ ದೊಡ್ಡ ಜನಸಾಗರ ನಾನು ಎಲ್ಲೂ ನೋಡಿಲ್ಲ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ರೋಗ ತಡೆಗಟ್ಟುವುದಕ್ಕಿಂತ ರ್ಯಾಲಿ ಮಾಡುವುದು ಮುಖ್ಯವಾಗಿತ್ತು. ಮದ್ರಾಸ್ ಹೈಕೋರ್ಟ್ ಈಗ ಚುನಾವಣಾ ಆಯೋಗವೇ ಹೊಣೆ ಅಂತಾ ಹೇಳಿದೆ. ಆಯೋಗದ ಮೇಲೆ ಮರ್ಡರ್ ಕೇಸ್ ಏಕೆ ಬುಕ್ ಮಾಡಬಾರದು ಅಂತಾ ಕೇಳಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.








