ಸಿದ್ದರಾಮಯ್ಯ – ಧರ್ಮ ವಿಭಜಕ : ಡಿಕೆಶಿ ಧನ ವಿಭಜಕ
ಬೆಂಗಳೂರು : ಸಿದ್ದರಾಮಯ್ಯ – ಧರ್ಮ ವಿಭಜಕ. ಎಂ.ಬಿ.ಪಾಟೀಲ್ – ಜಾತಿ ವಿಭಜಕ. ಡಿ.ಕೆ.ಶಿವಕುಮಾರ್ – ಧನ ವಿಭಜಕ. ಮಲ್ಲಿಕಾರ್ಜುನ ಖರ್ಗೆ – ಮನ ವಿಭಜಕ. ಕಾಂಗ್ರೆಸ್ ನಾಯಕರ ದಂಡು ಎಷ್ಟು ಭಯಾನಕ ಎಂದು ಪ್ರಾಸಬದ್ಧವಾಗಿ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ಟ್ವೀಟಾಸ್ತ್ರ ಪ್ರಯೋಗಿಸಿದೆ.
ಟ್ವಿಟ್ಟರ್ ನಲ್ಲಿ ಬಿಜೆಪಿ – ಕಾಂಗ್ರೆಸ್ ಕಚ್ಚಾಟ ಮುಂದುವರೆದಿದೆ.
ಬಿಜೆಪಿ ಇಂದು ಟ್ವಿಟ್ಟರ್ ನಲ್ಲಿ.. ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್ ಪಕ್ಷ ಎಂದಾದರೂ ಗೌರವ ನೀಡಿದೆಯೇ? ನೀಡಿದ್ದರೆ ಕರ್ನಾಟಕ ಎಂದೋ ದಲಿತ ಮುಖ್ಯಮಂತ್ರಿಯನ್ನು ಕಾಣುತ್ತಿತ್ತು. ಆದರೆ ಕಾಂಗ್ರೆಸ್ ಈ ವಿಚಾರದಲ್ಲಿ ಸಂವಿಧಾನಕ್ಕೆ ದ್ರೋಹ ಎಸಗುತ್ತಲೇ ಬಂದಿದೆ.
ದಲಿತರು ಹಾಗೂ ಹಿಂದುಳಿದ ವರ್ಗದವರಿಗೆ ಕಾಂಗ್ರೆಸ್ ಪಕ್ಷ ಮಾಡಿದ ನಿರಂತರ ದ್ರೋಹಗಳ ಬಗ್ಗೆ ಪಟ್ಟಿ ಮಾಡಿದರೆ ಅವುಗಳ ಸಂಖ್ಯೆ ಅಗಣಿತ. ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಮಾಡಿದ ಐತಿಹಾಸಿಕ ಅನ್ಯಾಯ ನೆನಪಿಸಬೇಕೇ ಎಂದು ಕುಟುಕಿದೆ. SIddaramaih dk shivakumar bjp tweet
ಒಡೆದ ಮನೆ ಕಾಂಗ್ರೆಸ್ ನಲ್ಲಿ ಯಜಮಾನಿಕೆಗೆ ಈಗ ಮತ್ತೊಬ್ಬ ಸದಸ್ಯ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನೇಮಕಗೊಂಡಿರುವ ಎಂ.ಬಿ.ಪಾಟೀಲ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಈಗ ನೇರ ಸವಾಲು. ಒಂದು ಕಡೆ ಸಿದ್ದರಾಮಯ್ಯ, ಮತ್ತೊಂದು ಕಡೆ ಎಂಬಿಪಾ, ಸವಾಲು ಗೆಲ್ಲುವಿರಾ ಡಿಕೆಶಿ ಎಂದು ಪ್ರಶ್ನಿಸಿದೆ.