ಚಿಕ್ಕಮಗಳೂರು : ಗೋಹತ್ಯೆ ನಿಷೇಧ ಕಾಯ್ದೆ ವಿಚಾರದಲ್ಲಿ ಸಿದ್ದರಾಮಯ್ಯ ಆಹಾರ ಸಂಸ್ಕೃತಿ ಬಗ್ಗೆ ಮಾತನಾಡುತ್ತಾರೆ. ನಾಳೆ ಮನುಷ್ಯರನ್ನ ತಿನ್ನುವುದೇ ಆಹಾರ ಅಂದ್ರೆ ಸಿದ್ದರಾಮಯ್ಯ ಸಪೋರ್ಟ್ ಮಾಡ್ತಾರಾ ? ಸಿದ್ದು ಕುಲದೈವ ಬೀರೇಶ್ವರ ಸ್ವಾಮಿ ಗೋಹತ್ಯೆಯನ್ನ ಸಮರ್ಥಿಸ್ತಾರಾ ? ಬೀರೇಶ್ವರನ ವಾಹನ ಏನೆಂದು ಸಿದ್ದು ಯೋಚಿಸಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ಇತಿಹಾಸ ಮರೆತಿದ್ದಾರೆ. ಜೋಡೆತ್ತು, ಹಸು-ಕರು ಕಾಂಗ್ರೆಸ್ ಪಕ್ಷದ ಗುರುತಾಗಿತ್ತು. ಅಂಬೇಡ್ಕರ್ ಕೂಡ ಸಂವಿಧಾನದಲ್ಲಿ ಗೋಹತ್ಯೆ ನಿಷೇಧವನ್ನ ಪ್ರಸ್ತಾಪಿಸಿದ್ದಾರೆ. 1951ರಲ್ಲಿ ಸಂವಿಧಾನ ಜಾರಿಗೆ ತರುವಾಗ ಅಂಬೇಡ್ಕರ್‍ಗೆ ಸಲಹೆ ಕೊಟ್ಟಿದ್ದು ಬಿಜೆಪಿ ಅಲ್ಲ, ನರೇಂದ್ರ ಮೋದಿ ಅಲ್ಲ. ಈ ದೇಶದ ಸಂಸ್ಕøತಿ ಗೋವಿಗೆ ಪೂಜ್ಯ ಭಾವನೆ ಮಾತ್ರವಲ್ಲ. ಜತೆಗೆ ದೇಶಕ್ಕೆ ಬಲಕೊಟ್ಟಂತರ ಗೋವಿನ ಜತೆಗೆ ಜೀವನ. ಹೀಗಾಗಿಯೇ ಸಂವಿಧಾನದಲ್ಲಿ ಗೋಹತ್ಯೆಯನ್ನು ಪ್ರಸ್ತಾಪ ಮಾಡಿದ್ದಾರೆ. 1964 ರಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಬಂದಿದೆ. ಅದನ್ನ ಮತ್ತಷ್ಟು ಬಲಗೊಳಿಸುವ ಕೆಲಸ ಈಗ ಆಗಿದೆ. ಆಗ ಇದದ್ದು ಬಿಜೆಪಿ, ಜನಸಂಘದ ಪಕ್ಷವಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಈಗಿನ ಕಾಂಗ್ರೆಸ್ಸಿಗೂ ಹಿಂದಿನ ಕಾಂಗ್ರೆಸ್ಸಿಗೂ ಸಂಬಂಧವಿಲ್ಲ. ಮೂಲ ಸಂಸ್ಕೃತಿ ಯಾವ್ದು, ವೋಟಿಗಾಗಿ ಇರೋ ವಿಚಾರ ಯಾವುದೆಂದು ತಿಳಿಯುತ್ತೆ. ಸಂವಿಧಾನದ ಮೇಲೆ ಶ್ರದ್ಧೆ ಇರೋರು ಗೋಹತ್ಯೆ ನಿಷೇಧ ಕಾಯ್ದೆ ವಿರೋಧಿಸಲ್ಲ ಎಂದು ಸಿ.ಟಿ ರವಿ ಸಮರ್ಥಿಸಿಕೊಂಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel