‘ರಾಜಾಹುಲಿ’ ಬಜೆಟ್ ಆರ್ಥಿಕ ದಿವಾಳಿಯಾಗಿರುವುದಕ್ಕೆ ಸಾಕ್ಷಿ ಎಂದ ‘ಹುಲಿಯಾ’..!

1 min read
Siddaramaiah

‘ರಾಜಾಹುಲಿ’ ಬಜೆಟ್ ಆರ್ಥಿಕ ದಿವಾಳಿಯಾಗಿರುವುದಕ್ಕೆ ಸಾಕ್ಷಿ ಎಂದ ‘ಹುಲಿಯಾ’..!

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಈ ಬಾರಿಯ ರಾಜ್ಯ ಬಜೆಟ್ ಮಂಡನೆ ಮಾಡಿದ್ದು, ಬಜೆಟ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಬಹುತೇಕ ಎಲ್ಲಾ ಪ್ರತಿಪಕ್ಷ ನಾಯಕರು ಬಜೆಟ್ ವಿರುದ್ಧ ತೀವ್ರವಾಗಿ ಅಸಮಾಧಾನ ಹೊರಹಾಕಿದ್ದಾರೆ. ಇತ್ತ ರಾಜಾಹುಲಿ ಬಜೆಟ್ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಿಡಿಸಿದ್ದಾರೆ.

ಈ ಸರ್ಕಾರ ಅನೈತಿಕವಾಗಿ ರಚನೆಯಾಗಿದೆ. ಇದೇ ಹಿನ್ನಲೆ ಅನೈತಿಕ ಸರ್ಕಾರದ ಬಜೆಟ್ ಕೇಳಬಾರದು ಎಂದು ನಾವು ಸಭಾತ್ಯಾಗ ಮಾಡಿದ್ದೇವೆ.  ಅಭಿವೃದ್ಧಿಗೆ ಪೂರಕವಾದ ಬಜೆಟ್ ಇದಲ್ಲ. ಯಾವುದೇ ಗೊತ್ತುಗುರಿ ಇಲ್ಲದ ಟೊಳ್ಳು ಬಜೆಟ್ ಇದಾಗಿದೆ. ಯಾವ ಇಲಾಖೆಗೆ ಎಷ್ಟು ಖರ್ಚು ಎಂದು ಹೇಳಿಲ್ಲ. ಬಿಚ್ಚಿಡುವುದಕ್ಕಿಂತ ಮುಚ್ಚಿಡುವ ಕೆಲಸ ಆಗಿದೆ. ಈ ಬಜೆಟ್ನಲ್ಲಿ ಪಾರದರ್ಶಕತೆ ಇಲ್ಲ. ಒಟ್ಟು ಬಜೆಟ್ನ ಶೇ.26ರಷ್ಟು ಸಾಲವಾಗಿದ್ದು, ಆರ್ಥಿಕ ದಿವಾಳಿಯಾಗಿರುವುದಕ್ಕೆ ಇದೇ ಸಾಕ್ಷಿ. ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಬಜೆಟ್ ನಲ್ಲಿ ಹಿಂದಿನ ಖರ್ಚು, ಮುಂದಿನದರ ಬಗ್ಗೆ ತಿಳಿಸಬೇಕು. ಪ್ರತಿ ಇಲಾಖೆಯ ಖರ್ಚು,ವೆಚ್ಚ ವಿವರಿಸಬೇಕು. ಯಾವ ಇಲಾಖೆಗೆ ಎಷ್ಟು ಖರ್ಚು ಮಾಡಲಾಗಿದೆ. ಈ‌ ವರ್ಷ ಏನು‌ ಖರ್ಚು ಮಾಡುತ್ತಿದ್ದಾರೆ. ಇದರ ಬಗ್ಗೆ ವಿವರಿಸಬೇಕು. ಆದರೆ, ಬಜೆಟ್ ನಲ್ಲಿ ಏನೂ ವಿವರಿಸಿಲ್ಲ. ಬಿಚ್ಚಿಡುವುದಕ್ಕಿಂತ ಮುಚ್ಚಿಟ್ಟಿದ್ದೇ ಹೆಚ್ಚು ಎಂದು ಕಿಡಿಕಾರಿದ್ರು.

Karnataka Budget 2021 : ಹಳೆ ಮೈಸೂರು ಭಾಗಕ್ಕೆ ಸಿಕ್ಕಿದ್ದೇನು..?

ಇದೇ ವೇಳೆ ಸಾಲದ ವಿಚಾರವಾಗಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಸಾಲ ತೆಗೆದುಕೊಳ್ಳುವುದಕ್ಕೆ ಹೇಳಿದೆ ಎಂದು ರಾಜ್ಯ ಸರ್ಕಾರ ಸಾಲ ಮಾಡಲು ಹೊರಟಿದೆ. ಸಾಲ ಸಿಗುತ್ತದೆ ಎಂದು ಸಾಲ ತೆಗೆದುಕೊಳ್ಳುವುದಲ್ಲ. ತೀರಿಸುವುದಕ್ಕೆಸಾಮರ್ಥ್ಯವಿರುವಷ್ಟು ಸಾಲ ಮಾಡಬೇಕು. ಸಾಲ ತೆಗೆದುಕೊಳ್ಳಲು ಸರ್ಕಾರ ಮುಂದಾಗಿರುವುದು ರಾಜ್ಯ ದಿವಾಳಿಯಾಗಿರುವುದಕ್ಕೆ ಸಾಕ್ಷಿಯಾಗಿದೆ. ನಮ್ಮ ಅಗತ್ಯಕ್ಕಿಂತ ಖರ್ಚಿನ ಪ್ರಮಾಣ ಹೆಚ್ಚಾಗಿದೆ. ಇದನ್ನ ಯಡಿಯೂರಪ್ಪ ಒಳ್ಳೆಯ ಬಜೆಟ್ ಅಂತಾರಾ. ಯಾವದೃಷ್ಟಿಕೋನದಲ್ಲಿ ಇದು ಒಳ್ಳೆಯ ಬಜೆಟ್. ಈ ವರ್ಷದ ಬಜೆಟ್ ದಿವಾಳಿ ಬಜೆಟ್. ಬಜೆಟ್ನಲ್ಲಿ ಏನಾದರೂ ಅಭಿವೃದ್ಧಿ ಕೆಲಸಕ್ಕೆ ದುಡ್ಡು ಕೊಟ್ಟಿದ್ದಾರಾ ಎಂದು ಸರ್ಕಾರವನ್ನ ಪ್ರಶ್ನೆ ಮಾಡಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd