ಪುನೀತ್ ರಾಜ್ ಕುಮಾರ್ ಗೆ ಸಿದ್ಧಶ್ರೀ ಗೌರವ..!
ಬೆಂಗಳೂರು : ಸ್ಯಾಂಡಲ್ ವುಡ್ ನ ‘ಯುವರತ್ನ’ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲ ಅಗಲಿ 1 ತಿಂಗಳೇ ಕಳೆದಿದೆ.. ಆದ್ರೂ ಆ ನೋವು ಇನ್ನೂ ಮಾಸಿಲ್ಲ.. ಆ ಕಹಿ ಸತ್ಯ ಅರಿಗಿಸಿ ಕೊಳ್ಳೋದಕ್ಕೆ ಕುಟುಂಬ ಹಾಗೂ ಕರ್ನಾಟಕದ ಜನರಿಂದ ಸಾಧ್ಯವಾಗ್ತಿಲ್ಲ.. ಆದ್ರೆ ಅಪ್ಪು ಅವರ ಅಗಲಿಕೆ ಕೇವಲ ಸ್ಯಾಂಡಲ್ ವುಡ್ ಅಷ್ಟೇ ಅಲ್ದೇ ಪರ ಭಾಷಾ ಸಿನಿಮಾ ರಂಗದವರಿಗೆ ಆಘಾತ , ನೋವುಂಟುಮಾಡಿದೆ.. ಇತ್ತೀಚೆಗೆ ( ಡಿಸೆಂಬರ್ 2 ) ಕಲಬುರ್ಗಿಯ ಜಿಡಗಾ ನವಕಲ್ಯಾಣ ಮಠದಲ್ಲಿ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ ಸಿದ್ಧಶ್ರೀ ಪ್ರಶಸ್ತಿ ನೀಡುವ ಕಾರ್ಯಕ್ರಮ ನೆರವೇರಿತು.
ಅಪ್ಪು ಅವರು ಬದುಕಿದ್ದಾಗ ಅವರಿಗೆ ಸಿದ್ಧಶ್ರೀ ಪ್ರಶಸ್ತಿ ನೀಡುವುದು ನಿಶ್ಚಯವಾಗಿತ್ತು ಎನ್ನಲಾಗಿದೆ. ಆದರೆ ಅವರು ಇಲ್ಲದಿರುವ ಈ ಹೊತ್ತಿನಲ್ಲಿ ಅವರಿಗೆ ಪ್ರಶಸ್ತಿ ನೀಡುವ ಸಂದರ್ಭ ಬಂದಿರುವುದೇ ಆಯೋಜಕರು ಹಾಗೂ ನೆರೆದಿದ್ದವರನ್ನ ಭಾವುಕರಾಗಿಸಿತು.. ರಾಜ ಸಿಂಹಾಸನ ಮಾದರಿಯ ಕುರ್ಚಿಯ ಮೇಲೆ ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರವನ್ನಿಟ್ಟು ಅದಕ್ಕೆ ರೇಷಿಮೆ ಶಾಲು ಹೊದಿಸಿ, ಹಾರ ಹಾಕಿ, ಚಿತ್ರದ ಮುಂದೆ ಪ್ರಶಸ್ತಿಯೊಂದನ್ನು ಇಡಲಾಗಿತ್ತು.
‘RRR’ ಪ್ರಚಾರ ಬಿಟ್ಟು ಸಚಿವರನ್ನ ಭೇಟಿಯಾದ ‘ಜಕ್ಕಣ್ಣ’..!
ಪುನೀತ್ ರಾಜ್‌ಕುಮಾರ್ ಕುಟುಂಬದವರು ಆಗಮಿಸಿ ಪ್ರಶಸ್ತಿಯನ್ನು ಸ್ವೀಕರಿಸಬೇಕಿತ್ತು ಆದರೆ ಅನಿವಾರ್ಯ ಕಾರಣಗಳಿಂದ ಅವರು ಬರಲಾಗಲಿಲ್ಲ. ಆದರೆ ಕಾರ್ಯಕ್ರಮವನ್ನು ಆನ್‌ಲೈನ್ ವಿಡಿಯೋ ಮೂಲಕ ರಾಘವೇಂದ್ರ ರಾಜ್‌ಕುಮಾರ್ ವೀಕ್ಷಿಸಿದರು. ಆನ್‌ಲೈನ್ ವಿಡಿಯೋ ಮೂಲಕವೇ ಮಾತನಾಡಿದ ರಾಘವೇಂದ್ರ ರಾಜ್‌ಕುಮಾರ್, ‘ನಿಮ್ಮ ಪ್ರೀತಿಯನ್ನು ನಾವು ಎಂದೂ ಮರೆಯುವುದಿಲ್ಲ. ಕೆಲವು ಕಾರಣಗಳಿಂದ ಈ ಬೃಹತ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಿಲ್ಲ ಹಾಗಾಗಿ ನಾವು ಗುರುಗಳ ಬಳಿ ಕ್ಷಮೆ ಕೇಳುತ್ತೇನೆ. ರಾಜ್‌ಕುಮಾರ್ ಕುಟುಂಬದ ಮೇಲೆ ಶ್ರೀಮಠದ ಆಶೀರ್ವಾದ ಹೀಗೆಯೇ ಇರಲಿ’ ಎಂದು ಹೇಳಿದ್ರು..








