ಸೈನಾ ನೆಹ್ವಾಲ್ ಬಗ್ಗೆ ಕೆಟ್ಟ ಜೋಕ್ – ಪತ್ರ ಬರೆದು ಬಹಿರಂಗವಾಗಿ ಕ್ಷಮೆ ಕೇಳಿದ ಸಿದ್ದಾರ್ಥ್
ತಮಿಳು ಮತ್ತು ತೆಲುಗು ನಟ ಸಿದ್ದಾರ್ಥ, ಸೈನ ನೆಹ್ವಾಲ್ ಕುರಿತು ಮಾಡಿದ್ದ ಅವಹೇಳನಕಾರಿ ಟ್ವಿಟ್ ಕುರಿತಾಗಿ ಕ್ಷಮೆ ಯಾಚಿಸಿದ್ದಾರೆ. ಸಿದ್ದಾರ್ಥ ಇತ್ತೀಚೆಗೆ ತಮ್ಮ ಸಿದ್ದಾಂತದ ಹೇಳಿಕಗಳಿಂದಾಗಿ ಸಾಕಷ್ಟು ವಿರೋಧವನ್ನ ಎದುರಿಸುತ್ತಿದ್ದಾರೆ.
ಬ್ಯಾಂಡ್ಮಿಟನ್ ಆಟಗಾರ್ತಿ ಸೈನ್ ನೆಹ್ವಾಲ್ ಆವರ ಅಭಿಪ್ರಾಯವನ್ನ ವಿರೋಧಿಸುವ ಭರದಲ್ಲಿ ಅಕ್ಷೇಪಾರ್ಹ ಪದಗಳನ್ನ ಒಳಗೊಂಡಿರುವ ಟ್ವೀಟ್ ಮಾಡಿದ್ದರು. ಇದಕ್ಕೆ ಅನೇಕರಿಂದ ಖಂಡನೆ ಸಹ ವ್ಯಕ್ತವಾಗಿತ್ತು.
ಈಗ ಎಚ್ಚೆತ್ತುಕೊಂಡಿರುವ ನಟ ಸಿದ್ದಾರ್ಥ್ ಬಹಿರಂಗವಾಗಿ ಕ್ಷಮೆ ಯಾಚಿಸಿ ಪತ್ರ ಬರೆದಿದ್ದಾರೆ. ಆ ಪತ್ರವನ್ನ ಟ್ವಿಟರರ್ ನಲ್ಲಿ ಹಂಚಿಕೊಂಡಿದ್ದಾರೆ. ಡಿಯರ್ ಸೈನಾ ನಾನು ನಿಮ್ಮ ಕುರಿತಾಗಿ ಕೆಟ್ಟ ಜೋಕ್ ಮಾಡಿದ್ದಕ್ಕೆ ಕ್ಷಮೆ ಕೋರುತ್ತೇನೆ. ನಾನು ಬಳಸಿರುವ ಪದಗಳನ್ನ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಒಂದು ಜೋಕ್ ಅನ್ನ ವಿವರಿಸಬೇಕಾದ ಸಂದರ್ಭ ಬರುತ್ತದೆ ಎಂದರೆ ಅದು ಒಳ್ಳೆಯ ಜೋಕ್ ಅಲ್ಲ. ಇದಕ್ಕಾಗಿ ನಾನು ಕ್ಷಮೆ ಕೇಳುತೇನೆ ಎಂದು ಸಿದ್ದಾರ್ಥ ಟ್ವೀಟ್ ಮಾಡಿದ್ದಾರೆ.
https://twitter.com/Actor_Siddharth/status/1480962679032324097?ref_src=twsrc%5Etfw%7Ctwcamp%5Etweetembed%7Ctwterm%5E1480962679032324097%7Ctwgr%5E%7Ctwcon%5Es1_&ref_url=https%3A%2F%2Ftv9kannada.com%2Fentertainment%2Factor-siddharth-apologises-to-saina-nehwal-over-controversial-tweet-mdn-320995.html
ಪಂಜಾಬ್ ನಲ್ಲಿ ನರೇಂದ್ರ ಮೋದಿಯವರ ಭದ್ರತಾ ಲೋಪದ ಕುರಿತು ಸೈನಾ ನೆಹ್ವಾಲ್ ಕಳವಳ ವ್ಯಕ್ತಪಡಿಸಿದ್ದರು. ಇದಕ್ಕೆ ನಟ ಸಿದ್ದಾರ್ಥ್ ಕೆಟ್ಟ ಅರ್ಥ ಬರುವಂತಹ ಪದಗಳನ್ನ ಬಳಸಿ ಜೋಕ್ ಮಾಡಿದ್ದರು. ಇದಕ್ಕೆ ಕೇಂದ್ರ ಮಹಿಳಾ ಆಯೋಗ ಕೂಡ ವಿರೋಧ ವ್ಯಕ್ತಪಡಿಸಿತ್ತು.
ಇನ್ನೂ ಸೈನಾ ತಂದೆ ಹರ್ವೀರ್ ಸಿಂಗ್ ಸಹ ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ನನ್ನ ಮಗಳು ದೇಶಕ್ಕಾಗಿ ಆಡಿ ಪದಕಗಳನ್ನ ಗೆದ್ದು ತಂದಿದ್ದಾಳೆ . ದೇಶದ ಹೆಮ್ಮೆ ಹೆಚ್ಚಿಸಿದ್ದಾಳೆ. ಈ ನಟ ದೇಶಕ್ಕಾಗಿ ಮಾಡಿರುವುದಾರೂ ಏನೂ ಎಂದು ಕೇಳಿದ್ದಾರೆ. ಅಲ್ಲದೆ ಕ್ಷಮೆ ಯಾಚಿಸಬೇಕು ಅಂತಲೂ ಒತ್ತಾಯಿಸಿದ್ದರು.