ADVERTISEMENT
Wednesday, June 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸಿಗಂದೂರು ಚೌಡೇಶ್ವರಿ ದೇವಸ್ಥಾನ ಪೂಜಾ ವಿವಾದ: ಕೋರ್ಟ್ ಮಧ್ಯಸ್ಥಿಕೆಯಲ್ಲಿ ಸಂಧಾನ..!

Kariyappa N by Kariyappa N
October 21, 2020
in Newsbeat, Samagra karnataka, ರಾಜ್ಯ
siganduru temple
Share on FacebookShare on TwitterShare on WhatsappShare on Telegram

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಸುಪ್ರಸಿದ್ಧ ಸಿಗಂದೂರು ಕ್ಷೇತ್ರದ ಚೌಡೇಶ್ವರಿ ದೇವಸ್ಥಾನದಲ್ಲಿ ಉಂಟಾಗಿದ್ದ ಪೂಜಾ ವಿವಾದ ನ್ಯಾಯಾಲಯದ ಮಧ್ಯಸ್ಥಿಕೆಯೊಂದಿಗೆ ತಾತ್ಕಾಲಿಕ ಸುಖಾಂತ್ಯ ಕಂಡಿದೆ.

pooja vivada
ದೇವಸ್ಥಾನದ ಧರ್ಮದರ್ಶಿ ರಾಮಪ್ಪ, ಅವರ ಪುತ್ರ ರವಿಕುಮಾರ್ ಹಾಗೂ ಪ್ರಧಾನ ಅರ್ಚಕ ಶೇಷಗಿರಿ ರಾವ್ ನಡುವೆ ವಿವಾದ ಉಂಟಾಗಿತ್ತು.
ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಲು ಅರ್ಚಕ ಶೇಷಗಿರಿ ಭಟ್ ಅವರಿಗೆ ಅಡ್ಡಿ ಮಾಡದಂತೆ ತಡೆ ಕೋರಿ ಭಕ್ತರಾದ ಸಂದೀಪ್ ಹಾಗೂ ನವೀನ್ ಜೈನ್ ಸಾಗರದ ಜೆಎಂಎಫ್‍ಸಿ ಕೋರ್ಟ್‍ನಲ್ಲಿ ನಿರ್ಬಂಧಕಾಜ್ಞೆ ಕೋರಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯಲ್ಲಿ ಶೇಷಗಿರಿ ಭಟ್ ಅವರನ್ನು ಪ್ರತಿವಾದಿಯನ್ನಾಗಿ ಮಾಡಲಾಗಿತ್ತು. ಕೋರ್ಟ್‍ನ ನ್ಯಾಯಾಧೀಶರಾದ ಫೆಲಿಕ್ಸ್ ಅಲ್ಫಾನ್ಸೋ ಅಂತೋನಿ ರಾಜಿ ಸಂಧಾನದ ಮೂಲದ ವಿವಾದ ಬಗೆಹರಿಸಿಕೊಳ್ಳಲು ಸೂಚಿಸಿದ್ದರು.

Related posts

Iran's 33-year-old goalkeeper Alireza Beirand

ಅಂದು ಕುರಿಗಾಯಿ ಬಾಲಕ.. ಇಂದು ವಿಶ್ವದ ಶ್ರೇಷ್ಠ ಗೋಲು ಕೀಪರ್..!

June 17, 2026
ಆರ್‌ಎಸ್‌ಎಸ್‌ ಹಿಂದೂ ಧರ್ಮದ ಸ್ವತ್ತಲ್ಲ, ಮೋಹನ್‌ ಭಾಗವತ್‌ ವಿರುದ್ಧ ಬಿ ಕೆ ಹರಿಪ್ರಸಾದ್‌ ಕೆಂಡಾಮಂಡಲ: ಸಂಘದ ನೋಂದಣಿ ವಿಚಾರವಾಗಿ ಕಾವೇರಿದ ರಾಜಕೀಯ ಜಟಾಪಟಿ

ಆರ್‌ಎಸ್‌ಎಸ್‌ ಹಿಂದೂ ಧರ್ಮದ ಸ್ವತ್ತಲ್ಲ, ಮೋಹನ್‌ ಭಾಗವತ್‌ ವಿರುದ್ಧ ಬಿ ಕೆ ಹರಿಪ್ರಸಾದ್‌ ಕೆಂಡಾಮಂಡಲ: ಸಂಘದ ನೋಂದಣಿ ವಿಚಾರವಾಗಿ ಕಾವೇರಿದ ರಾಜಕೀಯ ಜಟಾಪಟಿ

June 17, 2026

ramappa siganduru
ಕೋರ್ಟ್ ಸೂಚನೆ ಮೇರೆಗೆ ನ್ಯಾಯಾಲಯಕ್ಕೆ ದೂರುದಾರ ಸಂದೀಪ್, ನವೀನ್ ಜೈನ್, ಅರ್ಚಕ ಶೇಷಗಿರಿ ಭಟ್, ರಾಮಪ್ಪ, ರವಿಕುಮಾರ್ ಹಾಜರಾಗಿದ್ದರು. ಮಧ್ಯಸ್ಥಗಾರರ ಸಮ್ಮುಖದಲ್ಲಿ ಸಂಧಾನದ ಮೂಲಕ ವಿವಾದ ಬಗೆಹರಿಸಿಕೊಳ್ಳಲು ತೀರ್ಮಾನಿಸಲಾಯಿತು.
ದಸರಾ ಅಂಗವಾಗಿ ನವರಾತ್ರಿಯ ದಿನಗಳಂದು ಹೋಮ-ಹವನಗಳನ್ನು ಅರ್ಚಕ ಶೇಷಗಿರಿ ಭಟ್, ಧರ್ಮದರ್ಶಿ ರಾಮಪ್ಪ ಅವರ ಕುಟುಂಬಸ್ಥರ ಸಮ್ಮುಖದಲ್ಲಿ ಕೋವಿಡ್ ಮಾರ್ಗದರ್ಶಿ ಸೂತ್ರಗಳ ಅನ್ವಯ ನಡೆಸಲು ತೀರ್ಮಾನಿಸಲಾಯಿತು.
ಕೊರೊನಾ ಸೋಂಕಿನ ಪಿಡುಗು ಕೊನೆಗೊಂಡ ನಂತರ ರಾಮಪ್ಪ, ರವಿಕುಮಾರ್, ಶೇಷಗಿರಿ ಭಟ್ ಪರಸ್ಪರ ಹೊಂದಾಣಿಕೆ ಮೂಲಕ ದೇವಿಯ ಪೂಜೆ ಹಾಗೂ ಇತರೆ ವಿಧಿವಿಧಾನಗಳನ್ನು ನಡೆಸಲು ಸಮ್ಮತಿ ಸೂಚಿಸಲಾಗಿದ್ದು, ಕೊರೊನಾ ಮುಗಿಯುವವರೆಗೆ ದೇವಸ್ಥಾನದಲ್ಲಿ ಏಕಕಾಲಕ್ಕೆ 40 ಮಂದಿ ಭಕ್ತರ ದರ್ಶನಕ್ಕೆ ಅವಕಾಶ ಹಾಗೂ ಆರತಿ ತಟ್ಟೆಯನ್ನು ಭಕ್ತರ ಬಳಿ ಕೊಂಡೊಯ್ಯದೆ ನಿರ್ಧಿಷ್ಟ ಸ್ಥಳದಲ್ಲಿ ಇಡಬೇಕು. ಕೊರೊನಾ ನಂತರ ರಾಮಪ್ಪ, ರವಿಕುಮಾರ್, ಶೇಷಗಿರಿ ಭಟ್ ಪೂಜೆ ಸೇರಿದಂತೆ ಧಾರ್ಮಿಕ ಚಟುವಟಿಕೆ ಮುಂದುವರೆಸಿಕೊಂಡು ಹೋಗಲು ತೀರ್ಮಾನಿಸಿದ ಹಿನ್ನೆಲೆಯಲ್ಲಿ ದೂರುದಾರರು ಅರ್ಜಿಯನ್ನು ವಾಪಸ್ ಪಡೆದಿದ್ದಾರೆ.
ಹೀಗಾಗಿ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಪೂಜಾ ವಿವಾದಕ್ಕೆ ಸದ್ಯ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.

Tags: Chowdeshwari Templepooja controversyshimogaSigandurtemporary end with the intervention of the court
ShareTweetSendShare
Join us on:

Related Posts

Iran's 33-year-old goalkeeper Alireza Beirand

ಅಂದು ಕುರಿಗಾಯಿ ಬಾಲಕ.. ಇಂದು ವಿಶ್ವದ ಶ್ರೇಷ್ಠ ಗೋಲು ಕೀಪರ್..!

by admin
June 17, 2026
0

ಅಂದು ಕುರಿಗಾಯಿ ಬಾಲಕ.. ಇಂದು ವಿಶ್ವದ ಶ್ರೇಷ್ಠ ಗೋಲು ಕೀಪರ್..! ಸರಿ ಸುಮಾರು 20 ವರ್ಷಗಳ ಹಿಂದೆ ಆತ ಕುರಿಗಾಯಿ ಬಾಲಕ. ಅಲೆಮಾರಿ ಕುಟುಂಬದ ಈ ಹುಡುಗನಿಗೆ...

ಆರ್‌ಎಸ್‌ಎಸ್‌ ಹಿಂದೂ ಧರ್ಮದ ಸ್ವತ್ತಲ್ಲ, ಮೋಹನ್‌ ಭಾಗವತ್‌ ವಿರುದ್ಧ ಬಿ ಕೆ ಹರಿಪ್ರಸಾದ್‌ ಕೆಂಡಾಮಂಡಲ: ಸಂಘದ ನೋಂದಣಿ ವಿಚಾರವಾಗಿ ಕಾವೇರಿದ ರಾಜಕೀಯ ಜಟಾಪಟಿ

ಆರ್‌ಎಸ್‌ಎಸ್‌ ಹಿಂದೂ ಧರ್ಮದ ಸ್ವತ್ತಲ್ಲ, ಮೋಹನ್‌ ಭಾಗವತ್‌ ವಿರುದ್ಧ ಬಿ ಕೆ ಹರಿಪ್ರಸಾದ್‌ ಕೆಂಡಾಮಂಡಲ: ಸಂಘದ ನೋಂದಣಿ ವಿಚಾರವಾಗಿ ಕಾವೇರಿದ ರಾಜಕೀಯ ಜಟಾಪಟಿ

by Shwetha
June 17, 2026
0

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ನೋಂದಣಿ ವಿಚಾರವಾಗಿ ದೇಶಾದ್ಯಂತ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಸಂಘಟನೆಯನ್ನು ಹಿಂದೂ ಧರ್ಮಕ್ಕೆ ಹೋಲಿಸಿ...

66 ರೌಡಿಶೀಟರ್‌ಗಳ ಹೆಸರು ಕೈಬಿಟ್ಟ ವಿಚಾರ; ಸೀಮಂತ್ ಕುಮಾರ್ ಸಿಂಗ್ ಸ್ಪಷ್ಟನೆ

66 ರೌಡಿಶೀಟರ್‌ಗಳ ಹೆಸರು ಕೈಬಿಟ್ಟ ವಿಚಾರ; ಸೀಮಂತ್ ಕುಮಾರ್ ಸಿಂಗ್ ಸ್ಪಷ್ಟನೆ

by Shwetha
June 17, 2026
0

ರೌಡಿಪಟ್ಟಿಯಿಂದ 66 ರೌಡಿಶೀಟರ್‌ಗಳ ಹೆಸರನ್ನು ಕೈಬಿಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ಪೊಲೀಸ್...

ನೀಟ್ ಮರುಪರೀಕ್ಷೆಗೆ ಮಿಲಿಟರಿ ಸರ್ಪಗಾವಲು: ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದ ಅಣ್ಣಾಮಲೈ; ವಿದ್ಯಾರ್ಥಿಗಳ ಒತ್ತಡಕ್ಕೆ ಹೊಣೆ ಯಾರು ಎಂದು ಗುಡುಗಿದ ತಮಿಳುನಾಡಿನ ಸಿಂಗಂ

ನೀಟ್ ಮರುಪರೀಕ್ಷೆಗೆ ಮಿಲಿಟರಿ ಸರ್ಪಗಾವಲು: ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದ ಅಣ್ಣಾಮಲೈ; ವಿದ್ಯಾರ್ಥಿಗಳ ಒತ್ತಡಕ್ಕೆ ಹೊಣೆ ಯಾರು ಎಂದು ಗುಡುಗಿದ ತಮಿಳುನಾಡಿನ ಸಿಂಗಂ

by Shwetha
June 17, 2026
0

ಚೆನ್ನೈ: ಮುಂಬರುವ ನೀಟ್ ಯುಜಿ ಮರುಪರೀಕ್ಷೆಗೆ ಕೇಂದ್ರ ಶಿಕ್ಷಣ ಸಚಿವಾಲಯ ಹಾಗೂ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಕೈಗೊಂಡಿರುವ ಅತಿಯಾದ ಭದ್ರತಾ ಕ್ರಮಗಳ ವಿರುದ್ಧ ತಮಿಳುನಾಡಿನ ಪ್ರಭಾವಿ ನಾಯಕ...

ಕರ್ನಾಟಕದಲ್ಲಿ ಮದ್ಯ ಪ್ರಿಯರಿಗೆ ಬಿಗ್ ಶಾಕ್: ವಯಸ್ಸು 21 ಆಗದಿದ್ದರೆ ಎಣ್ಣೆ ಸಿಗುವುದು ಡೌಟು!- ಪ್ರಿಯಾಂಕ್ ಖರ್ಗೆ ವಾರ್ನಿಂಗ್!

RSS ಬಗ್ಗೆ ಪ್ರಿಯಾಂಕ್ ಖರ್ಗೆ ಪ್ರಶ್ನೆ; ಪಾರದರ್ಶಕತೆ ಕುರಿತು ಮಹತ್ವದ ಹೇಳಿಕೆ

by Shwetha
June 17, 2026
0

ಕರ್ನಾಟಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಷ್ಟ್ರೀಯ ಸ್ವಯಂ ಸೇವಕ್ ಸಂಘ ಕುರಿತು ಮಹತ್ವದ ಹೇಳಿಕೆ ನೀಡಿದ್ದು, ಯಾವುದೇ ಸಂಘ-ಸಂಸ್ಥೆ ದೇಶದ ಕಾನೂನು ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಬೇಕು...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram