Virat Kohli | ಹರಾಜಿಗೆ ಬಂದ ವಿರಾಟ್ ಜೆರ್ಸಿ.. ಬೆಲೆ ಎಷ್ಟು ಗೊತ್ತಾ.. ?
ವಿಶ್ವ ಕ್ರಿಕೆಟ್ ನ ಕಿಂಗ್ ವಿರಾಟ್ ಕೊಹ್ಲಿಗೆ ಇರುವ ಫಾಲೋಯಿಂಗ್ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ.
ಭಾರತ ಕ್ರಿಕೆಟ್ ನಲ್ಲಿ ಸಚಿನ್, ಧೋನಿ ಬಳಿಕ ಆ ಮಟ್ಟಿಗೆ ಅಭಿಮಾನಿಗಳನ್ನು ಗಳಿಸಿರುವ ಕ್ರಿಕೆಟಿಗ ವಿರಾಟ್ ಕೊಹ್ಲಿ.
ಇನ್ನು ಇನ್ ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಪಡೆದಿರುವ ಸೆಲೆಬ್ರೆಟಿಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ವಿರಾಟ್ ಗಿಂತ ಮೊದಲು ಈ ಪಟ್ಟಿಯಲ್ಲಿ ಫುಟ್ ಬಾಲ್ ಆಟಗಾರರಾದ ಕ್ರಿಸ್ಟಿಯಾನೋ ರೋನಾಲ್ಡೋ, ಲಿಯಾನಲ್ ಮೆಸ್ಸಿ ಮೊದಲೆರಡು ಸ್ಥಾನದಲ್ಲಿದ್ದಾರೆ.
ಇನ್ನು ವಿಷಯಕ್ಕೆ ಬಂದ್ರೆ.. ಇಂಗ್ಲೀಸ್ ಕ್ರಿಕೆಟ್ ಮಿಡಿಯಾ ವಿಸ್ಡನ್ ವಿರಾಟ್ ಕೊಹ್ಲಿ ಅವರ ಜೆರ್ಸಿಯನ್ನು ಹರಾಜಾಕಲು ಮುಂದಾಗಿದೆ.
ಕೊಹ್ಲಿ ಸಹಿ ಮಾಡಿದ ಜೆರ್ಸಿಯನ್ನು ಒಂದು ಫೋಟೋ ಫ್ರೇಂನಲ್ಲಿ ಇರಿಸಲಾಗಿದೆ. ಜೆರ್ಸಿ ಜೊತೆಗೆ ವಿರಾಟ್ ಕೊಹ್ಲಿ ಫೋಟೋಗಳು ಕೂಡ ಜೆರ್ಸಿಯಲ್ಲಿವೆ.
ಈ ಜೆರ್ಸಿ ಹರಾಜನ್ನ ಆಫ್ ಲೈನ್ ನಲ್ಲಿ ಅಲ್ಲದೇ ಆಫ್ ಲೈನ್ ನಲ್ಲಿ ನಡೆಸಲಾಗುತ್ತಿದೆ. ಕೊಹ್ಲಿ ಜೆರ್ಸಿ ಗೆಲ್ಲಲು ವಿಸ್ಡನ್ ವೆಬ್‌ಸೈಟ್ ತೆರೆಯಬೇಕು.
ವಿಸ್ಡನ್ ಮೀಡಿಯಾ ಕೊಹ್ಲಿ ಜೆರ್ಸಿಯ ಆರಂಭಿಕ ಬೆಲೆ 2499.99 ಪೌಂಡ್ (ಭಾರತೀಯ ಕರೆನ್ಸಿಯಲ್ಲಿ ಅಂದಾಜು ರೂ. 2.42 ಲಕ್ಷಗಳು). ನಿಗದಿಪಡಿಸಿದೆ.
ಕೊಹ್ಲಿ ಸದ್ಯ ಐಪಿಎಲ್ 2022ರಲ್ಲಿ ಬ್ಯುಸಿಯಾಗಿದ್ದಾರೆ.
ಆರ್‌ಸಿಬಿಯನ್ನು ಪ್ರತಿನಿಧಿಸುತ್ತಿರುವ ಕೊಹ್ಲಿ ಈ ಋತುವಿನಲ್ಲಿ ದಯನೀಯವಾಗಿ ವಿಫಲವಾಗುತ್ತಿದ್ದಾರೆ. ಇದುವರೆಗೆ 9 ಪಂದ್ಯಗಳನ್ನಾಡಿದ್ದು 128 ರನ್ ಮಾತ್ರ ಗಳಿಸಿದ್ದಾರೆ. signed-virat-kohli-framed-india-jersey auction