ಲಾಕ್ ಡೌನಲ್ಲಿ ಕಾಂಡೋಮ್ ಮಾರಾಟ ಗಣನೀಯ ಕುಸಿತ – RTI ಮಾಹಿತಿ..
2020-21 ನೇ ಕೋವಿಡ್ ಲಾಕ್ ಡೌನ್ ಸಾಲಿನಲ್ಲಿ ಪ್ರಮುಖ ಗರ್ಭ ನಿರೊಧಕವಾದ ಕಾಂಡೋಮ್ ಗಳ ಮಾರಾಟ ಅತಿ ಗಣನೀಯ ಸಂಖ್ಯೆಯಲ್ಲಿ ಕುಸಿದಿರುವುದರಿಂದ ತೀವ್ರ ಜನಸಂಖ್ಯಾ ಹೆಚ್ಚಳದ ಆತಂಕವನ್ನ ಕೇಂದ್ರ ಆರೋಗ್ಯ ಸಚಿವಾಲಯ ವ್ಯಕ್ತಪಡಿಸಿದೆ. ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಹೇರಲಾದ ವಿವಿಧ ನಿರ್ಬಂಧಗಳಿಂದ ಕಾಂಡೋಮ್ ಮಾರಾಟದಲ್ಲಿ ಇಳಿಕೆಯಾಗಿದೆ.
ಆರ್‌ಟಿಐ ಕಾರ್ಯಕರ್ತ ಚಂದ್ರಶೇಖರ್ ಗೌರ್ ಅವರು ಕೇಳಿದ ಪ್ರಶ್ನೆಗೆ ಉತ್ತರವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಆಶ್ಚರ್ಯಕರ ಮಾಹಿತಿಯನ್ನ ಹೊರಹಾಕಿದೆ. ಭಾರತದಲ್ಲಿ ಕಳೆದ ಐದು ವರ್ಷಗಳಲ್ಲಿಯೇ ಅತಿ ಕಡಿಮೆ ಕಾಂಡೋಮ್‌ಗಳ ಮಾರಾಟ ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಕಂಡುಬಂದಿದೆ.
“2020-21 ರ ಆರ್ಥಿಕ ವರ್ಷದಲ್ಲಿ ಭಾರತವು ಕೇವಲ 244.31 ಮಿಲಿಯನ್ ಕಾಂಡೋಮ್ಗಳ ಮಾರಾಟವನ್ನು ನೋಂದಾಯಿಸಿದೆ, ಈ ಸಮಯದಲ್ಲಿ ಕೋವಿಡ್ -19 ಸಾಂಕ್ರಾಮಿಕದ ಮೊದಲ ಅಲೆಯಿಂದಾಗಿ ದೇಶಾದ್ಯಂತ ಕಠಿಣ ನಿರ್ಬಂಧಗಳನ್ನು ವಿಧಿಸಲಾಯಿತು” ಎಂದು RTI ಕಾರ್ಯಕರ್ತ ಗೌರ್ ಹೇಳಿದ್ದಾರೆ.
ಕಾಂಡೋಮ್ ಮಾರಾಟದಲ್ಲಿ ತೀವ್ರ ಕುಸಿತದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಜನನ ನಿಯಂತ್ರಣ ಸಂಶೋಧಕ ಡಾ.ರಾಜೀವ ರಂಜನ್, ಕಾಂಡೋಮ್ ಗಳ ಮಾರಾಟ ಕಡಿಮೆಯಾಗಿರುವುದು ಕನಿಷ್ಠ 10 ಭಾರಿ ಅನಗತ್ಯ ಗರ್ಭಧಾರಣೆಯನ್ನ ಹೆಚ್ಚಿಸಿರಬಹುದು ಎಂದು ಹೇಳಿದ್ದಾರೆ.