ಹ್ಯಾಂಗ್ಝೌ: ಏಷ್ಯನ್ ಗೇಮ್ಸ್ ನ (Asian Games) ಮಹಿಳೆಯರ 60 ಕೆ.ಜಿ ವುಶು (Wushu) ಫೈನಲ್ ನಲ್ಲಿ ದೇಶದ ರೋಶಿಬಾನಾದೇವಿ ನವೋರೆಮ್ ಬೆಳ್ಳಿ ಪದಕ್ಕೆ ಕೊರಳೊಡ್ಡಿದ್ದಾರೆ.
ರೋಶಿಬಿನಾ ದೇವಿ (Roshibina Devi) ಚೀನಾದ ಹೆವಿವೇಟ್ ವು ಕ್ಸಿಯಾವೊಯ್ (Wu Xiaowei of China) ವಿರುದ್ಧ 0-2 ಅಂತರದ ಸೋಲು ಅನುಭವಿಸಿ ಬೆಳ್ಳಿ ಗೆದ್ದಿದ್ದಾರೆ. ಹಾಲಿ ಚಾಂಪಿಯನ್ ವು ಕ್ಸಿಯಾವೊಯಿಗೆ ಕಠಿಣ ಪೈಪೋಟಿ ನೀಡಿದರು. ಈ ಮೂಲಕ ಚೀನಾದ ಆಟಗಾರ್ತಿಗೆ ಬಲವಾದ ಆರಂಭವನ್ನು ಪಡೆಯಲು ಅವಕಾಶ ಮಾಡಿಕೊಟ್ಟರು.
ಎರಡು ಸುತ್ತುಗಳ ನಂತರ ತೀರ್ಪುಗಾರರು ವು ಕ್ಸಿಯಾವೊಯಿ ಅವರನ್ನು ವಿಜೇತರೆಂದು ಘೋಷಿಸಿದರು. ಮೊದಲ ಸುತ್ತಿನಲ್ಲಿ ಭಾರೀ ಪೈಪೋಟಿ ಕಂಡು ಬಂದಿತು. ರೋಶಿಬಿನಾ ಅವರನ್ನು ತಡೆಯಲು ವು ಕ್ಸಿಯಾವೊಯಿ ಪ್ರಾರಂಭಿಸಿದ್ದು, 1-0 ಮುನ್ನಡೆ ಸಾಧಿಸಿದರು. ಎರಡನೇ ಸುತ್ತಿನಲ್ಲಿ ರೋಶಿಬಿನಾ ದೇವಿಯ ಮೇಲೆ ವು ಕ್ಸಿಯಾವೊಯಿ ದಾಳಿ ಮಾಡುವ ಮೂಲಕ ಚಿನ್ನ ಗೆದ್ದರು. ಜಕಾರ್ತದಲ್ಲಿ ನಡೆದ 2018ರ ಆವೃತ್ತಿಯಲ್ಲಿ ರೋಶಿಬಿನಾ ಕಂಚು ಗೆದ್ದಿದ್ದರು. ಈ ಬಾರಿ ಬೆಳ್ಳಿಯ ಸಾಧನೆ ಮಾಡಿದ್ದಾರೆ.