`ಕೈ’ ತಪ್ಪಿದ ಬಂಗಾರ : ಲಾಂಗ್ ಜಂಪ್ ನಲ್ಲಿ ಭಾರತಕ್ಕೆ ಬೆಳ್ಳಿ
ನೈರೋಬಿ : ಅಂಡರ್ 20 ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ ಲಾಂಗ್ ಜಂಪ್ ನಲ್ಲಿ ಭಾರತಕ್ಕೆ ಚಿನ್ನ ಜಸ್ಟ್ ಮಿಸ್ ಆಗಿದೆ.
ಭಾರತದ ಪ್ರತಿಭಾನ್ವಿತ ಲಾಂಗ್ ಜಂಪರ್ ಶೈಲಿ ಸಿಂಗ್ ಅಂಡರ್ 20 ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿಗೆ ಮುತ್ತಿಟ್ಟಿದ್ದಾರೆ.
ಭಾನುವಾರ ನಡೆದ ಅಂತಿಮ ಹಣಾಹಣಿಯಲ್ಲಿ ಶೈಲಿ ಸಿಂಗ್ ಚಿನ್ನ ಗೆಲ್ಲುವ ಅವಕಾಶವನ್ನು ಕೂದಲೆಳೆಯಂತರದಲ್ಲಿ ಕಳೆದುಕೊಂಡು ಬೆಳ್ಳಿ ಪದಕ ಗೆದ್ದು ದೇಶಕ್ಕೆ ಹೆಮ್ಮೆ ತಂದಿದ್ದಾರೆ. 17 ವರ್ಷದ ಶೈಲಿ 6.59 ಸೆಂಟಿ ಮೀಟರ್ ದೂರ ಜಿಗಿದು ಬೆಳ್ಳಿ ಪದಕ ಗೆದ್ದುಕೊಂಡರು.
ಇತ್ತ ಹಾಲಿ ಯುರೋಪಿಯನ್ ಜೂನಿಯರ್ ಚಾಂಪಿಯನ್ ಆಗಿರುವ ಸ್ವೀಡನ್ ನ ಮಜಾ ಅಸ್ಕಾಗ್ 6.60 ಮೀಟರ್ ಜಿಗಿದು ಚಿನ್ನದ ಪದಕ ಗೆದ್ದರು.
ಭಾರತ ಚಾಂಪಿಯನ್ ಶಿಪ್ ನಲ್ಲಿ 2 ಬೆಳ್ಳಿ ಮತ್ತು 1 ಕಂಚು ಸೇರಿದಂತೆ 3 ಪದಕಗಳೊಡನೆ ತನ್ನ ಅಭಿಯಾನವನ್ನು ಅಂತ್ಯಗೊಳಿಸಿದೆ.