ಸೂರ್ಯನ ಸುತ್ತ ಬೆಳ್ಳಿ ಉಂಗುರ : ಫೋಟೋಸ್ ವೈರಲ್
ಬೆಂಗಳೂರು : ವಿಜಯಪುರ, ಬೀದರ್ ಭಾಗದಲ್ಲಿ ಸೂರ್ಯ ಸುತ್ತ ಪ್ರಭಾವಳಿ ಗೋಚರವಾಗಿದೆ.
ಈ ಮನಮೋಹಕವಾದ ದೃಶ್ಯಾವಳಿಯನ್ನು ಸ್ಥಳೀಯರು ತಮ್ಮ ಮೊಬೈಲ್ ಗಳಲ್ಲಿ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕಳೆದ ಒಂದು ವಾರದ ಹಿಂದೆಯೂ ಇದೇ ರೀತಿ ದೃಶ್ಯಾವಳಿ ಕಂಡು ಬಂದಿತ್ತು.
ಇಂದು ಕೂಡ ಆಗಸದಲ್ಲಿ ಸೂರ್ಯನ ಸುತ್ತ ಬೆಳ್ಳಿಯ ವೃತ್ತಾಕಾರದ ಮಂಡಲವೊಂದು ಕಾಣಿಸಿಕೊಂಡು ವಿಸ್ಮಯ ಮೂಡಿಸಿದೆ.
ಮೋಡಗಳ ಮಧ್ಯೆ ಸೂರ್ಯ ಆಗಾಗ್ಗೆ ಮಿಂಚಿ ಮರೆಯಾಗುವ ವೇಳೆ ಈ ಉಂಗುರು ಮತ್ತಷ್ಟು ಸ್ಪಷ್ಟವಾಗಿ ಗೋಚರವಾಗಿದೆ.