ಮಡಿಕೇರಿ: ಏಷ್ಯನ್ ಮ್ಯಾರಥಾನ್ ಚಾಂಪಿಯನ್ ಶಿಪ್ ನಲ್ಲಿ (Asian Marathon Championships) ಕೊಡಗಿನ ಬಿ. ಬೆಳ್ಳಿಯಪ್ಪ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಹಾಂಗ್ ಕಾಂಗ್ನಲ್ಲಿ ಜ. 21ರಂದು ನಡೆಯಲಿರುವ ಚಾಂಪಿಯನ್ ಶಿಪ್ ನಲ್ಲಿ ಪುರುಷರ ವಿಭಾಗದಲ್ಲಿ ಇಬ್ಬರು ಸ್ಪರ್ಧಿಗಳು ಭಾರತವನ್ನು ಪ್ರತಿನಿಧಿಸುತ್ತಿದ್ದು, ಕರ್ನಾಟಕದ ಬೆಳ್ಳಿಯಪ್ಪ ಅವರೊಂದಿಗೆ ಉತ್ತರಾಖಂಡದ ಸ್ಪರ್ಧಿಯೊಬ್ಬರು ಇದ್ದಾರೆ.
ಹಿಂದಿನ ವರ್ಷ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಮ್ಯಾರಥಾನ್ನಲ್ಲಿ (National Marathon) ಬೆಳ್ಳಿಯಪ್ಪ ಬೆಳ್ಳಿ ಪದಕ ಪಡೆದು ಏಷ್ಯನ್ ಮ್ಯಾರಥಾನ್ ಚಾಂಪಿಯನ್ ಷಿಪ್ನಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದರು. ಸದ್ಯ ಭಾರತೀಯ ಸೇನೆಯಲ್ಲಿ ಇದ್ದು, ಸ್ಪೋರ್ಟ್ಸ್ ಇನ್ಸ್ಟಿಟ್ಯೂಟ್ನಲ್ಲಿದ್ದು ಊಟಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಬೆಳ್ಳಿಯಪ್ಪ ಮೂಲತಃ ಕರ್ನಾಟಕದ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಟಿ.ಶೆಟ್ಟಿಗೇರಿ ಗ್ರಾಮದವರು.