ತ್ರಿಶಾರೊಂದಿಗೆ ಸಿಂಬು ದಾಂಪತ್ಯ ಪ್ರವೇಶ??
ಚೆನ್ನೈ, ಜುಲೈ 22: ನಟಿ ತ್ರಿಶಾ ಕೃಷ್ಣನ್, ಸಿಂಬು ಅವರನ್ನು ಮದುವೆಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸುದ್ದಿಯನ್ನು ಕೆಲವು ತಮಿಳು ಮಾಧ್ಯಮಗಳು ಬಹಿರಂಗಪಡಿಸಿವೆ. ಆದರೆ, ಇಬ್ಬರೂ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಮತ್ತು ಕೆಲವರು ಇವೆಲ್ಲ ಊಹಾಪೋಹಗಳು ಮತ್ತು ಗಾಸಿಪ್‌ಗಳು ಎಂದು ಹೇಳಿದ್ದಾರೆ.
37 ವರ್ಷದ ತ್ರಿಶಾ ಈ ಹಿಂದೆ ರಾಣಾ ದಗ್ಗುಬತಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದರು ಮತ್ತು ನಂತರ ಬೇರೆಯಾಗಿದ್ದರು. ನಂತರ ಅವರು 2015 ರಲ್ಲಿ ಕೈಗಾರಿಕೋದ್ಯಮಿ ವರುಣ್ ಮಣಿಯನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ಕೆಲವು ಕಾರಣಗಳಿಂದಾಗಿ ಮದುವೆ ರದ್ದುಗೊಂಡಿತು. ಮದುವೆಯ ನಂತರ ತನ್ನ ವೃತ್ತಿಜೀವನವನ್ನು ತ್ಯಜಿಸಬೇಕೆಂದು ವರುಣ್ ಮಣಿಯನ್ ಬಯಸಿದ್ದರಿಂದ ಮದುವೆಯನ್ನು ರದ್ದು ಪಡಿಸಲಾಗಿದೆ ಎಂದು ವದಂತಿಗಳು ಹರಡಿತ್ತು.

ಸಿಂಬು ತಮಿಳು ಚಿತ್ರರಂಗದ ಖ್ಯಾತ ನಟಿಯರೊಂದಿಗೆ ಸಂಬಂಧವನ್ನು ಹೊಂದಿದ್ದರು ಎಂದು ಹೇಳಲಾಗುತ್ತಿದೆ. ಈ ಮೊದಲು ಅವರು ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ನಂತರ ಹನ್ಸಿಕಾ ಮೋಟ್ವಾನಿ ಅವರೊಂದಿಗೆ ಸಂಬಂಧ ಹೊಂದಿದ್ದರು ಎನ್ನಲಾಗಿದೆ
ಸಿಂಬು ಮತ್ತು ತ್ರಿಶಾ 2010 ರಲ್ಲಿ ಗೌತಮ್ ಮೆನನ್ ಅವರ ವಿನ್ನೈಥಾಂಡಿ ವರುವಾಯಾ ಚಿತ್ರದಲ್ಲಿ ನಟಿಸಿದ್ದರು. ಆ ರೋಮ್ಯಾಂಟಿಕ್ ಚಿತ್ರವು ಸೂಪರ್ ಹಿಟ್ ಆಗಿತ್ತು.








