5 ರುಚಿಕರ ಅಡುಗೆಗಳ ರೆಸಿಪಿಗಳು ನಿಮಗಾಗಿ..! Simple But Tasty
ಪೂರ್ಣ ರೆಸಿಪಿಯನ್ನು ಓದಲು ಲಿಂಕ್ ಗಳನ್ನು ಕ್ಲಿಕ್ ಮಾಡಿ
ಆಲೂಗಡ್ಡೆ ಸಮೋಸ
ಆಲೂಗಡ್ಡೆ ಸಮೋಸ
ಮಾಡುವ ವಿಧಾನ
ಒಂದು ದೊಡ್ಡ ಪಾತ್ರೆಯಲ್ಲಿ ಮೈದಾ /ಗೋಧಿ ಹಿಟ್ಟನ್ನು ತೆಗೆದುಕೊಳ್ಳಿ. ಅದಕ್ಕೆ ಎರಡು ಚಮಚ ತುಪ್ಪ, ಓಂ ಕಾಳು, ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕಲಸಿ, ಸ್ವಲ್ಪ ಸ್ವಲ್ಪವೇ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ಬಳಿಕ ಹಿಟ್ಟಿಗೆ ಒಂದು ಚಮಚ ಎಣ್ಣೆ ಸವರಿ 15-20 ನಿಮಿಷ ಹಾಗೆ ಬಿಡಿ.
ನಂತರ ಆಲೂಗಡ್ಡೆ ಬೇಯಿಸಿ, ಸ್ಮಾಷ್ ಮಾಡಿಟ್ಟುಕೊಳ್ಳಿ.
ಈಗ ಒಂದು ಬಾಣಲೆಗೆ ಎರಡೂ ಚಮಚ ಎಣ್ಣೆ ಸೇರಿಸಿ ಬಿಸಿ ಮಾಡಿ. ಎಣ್ಣೆ ಕಾದ ಬಳಿಕ ಅದಕ್ಕೆ ಜೀರಿಗೆ, ಸಣ್ಣದಾಗಿ ಕತ್ತರಿಸಿದ ಹಸಿಮೆಣಸಿನ ಕಾಯಿ, ಚಿಕ್ಕದಾಗಿ ಕತ್ತರಿಸಿದ ಶುಂಠಿ, ಕತ್ತರಿಸಿದ ಈರುಳ್ಳಿ, ಬಟಾಣಿ, ಸ್ಮಾಷ್ ಮಾಡಿದ ಆಲೂಗಡ್ಡೆ ಸೇರಿಸಿ. ಒಂದು ನಿಮಿಷ ಹುರಿಯಿರಿ. ಬಳಿಕ ರುಚಿಗೆ ತಕ್ಕಷ್ಟು ಉಪ್ಪು, ಧನಿಯಾ ಪೌಡರ್, ಚಾಟ್ ಮಸಾಲ, ಗರಂ ಮಸಾಲ, ಮೆಣಸಿನ ಪುಡಿ, ಅರಿಶಿನ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ, ಹುರಿಯಿರಿ.
ಬಾಣಲೆಯನ್ನು ಕೆಳಗಿಳಿಸಿ, ಅದಕ್ಕೆ ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸ ಸೇರಿಸಿ ಚೆನ್ನಾಗಿ ಬೆರೆಸಿ.
ನಂತರ ಹಿಟ್ಟನ್ನು ತೆಗೆದುಕೊಂಡು ಸಣ್ಣ ಸಣ್ಣ ಉಂಡೆಗಳನ್ನು ಮಾಡಿ. ತ್ರಿಕೋನ ಆಕಾರದಲ್ಲಿ ಲಟ್ಟಿಸಿ. ಈಗಾಗಲೇ ಮಾಡಿಟ್ಟುಕೊಂಡ ಆಲೂಗಡ್ಡೆ ಮಿಶ್ರಣವನ್ನು ಸೇರಿಸಿ. ನಂತರ ಬೆರಳುಗಳ ಸಹಾಯದಿಂದ ಮುಚ್ಚಿ.
ಬಳಿಕ ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಕಾಯಿಸಿ. ಎಣ್ಣೆ ಕಾದ ನಂತರ ಸಮೋಸವನ್ನು ಎಣ್ಣೆಯಲ್ಲಿ ಬಿಡಿ. ಮಧ್ಯಮ ಉರಿಯಲ್ಲಿ ಎರಡೂ ಬದಿಯನ್ನು ಹೊಂಬಣ್ಣಕ್ಕೆ ಬರುವವರೆಗೆ ಕರಿದು ತೆಗೆಯಿರಿ. ರುಚಿಯಾದ ಬಿಸಿ ಬಿಸಿ ಸಮೋಸ ಸವಿಯಲು ರೆಡಿ.
ಗೋಧಿಹಿಟ್ಟಿನ ಎಗ್ ಲೆಸ್ ಚಾಕೊಲೇಟ್ ಕೇಕ್
ಗೋಧಿಹಿಟ್ಟಿನ ಎಗ್ ಲೆಸ್ ಚಾಕೊಲೇಟ್ ಕೇಕ್
ಮಾಡುವ ವಿಧಾನ
ಮೊದಲು ಹಾಲಿಗೆ ವಿನೆಗರ್ ಸೇರಿಸಿ, ಚೆನ್ನಾಗಿ ಕಲಕಿ 10 ನಿಮಿಷ ಹಾಗೆ ಬಿಡಿ. ನಂತರ ವಿನೆಗರ್ ಸೇರಿಸಿದ ಹಾಲನ್ನು ಒಂದು ಬೌಲ್ ಗೆ ಹಾಕಿ. ಎಣ್ಣೆ, ವೆನಿಲ್ಲಾ ಎಸೆನ್ಸ್, ಸಕ್ಕರೆ ಪುಡಿ ಸೇರಿಸಿ ಚೆನ್ನಾಗಿ ಬೀಟ್ ಮಾಡಿ.
ಈಗ ಇದಕ್ಕೆ ಸ್ವಲ್ಪ ಸ್ವಲ್ಪವೇ ಕೋಕೋ ಪೌಡರ್, ಹಾಲಿನ ಪುಡಿ , ಜರಡಿ ಹಿಡಿದ ಗೋಧಿ ಹುಡಿ, ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ ಹಾಕಿ ನಿಧಾನಕ್ಕೆ ಬೆರೆಸಿ. ನಂತರ ನಿಧಾನವಾಗಿ ಹಾಲನ್ನು ಸೇರಿಸುತ್ತಾ ಎಲ್ಲವನ್ನೂ ಒಂದೇ ದಿಕ್ಕಿನಲ್ಲಿ ಗಂಟಿಲ್ಲದಂತೆ ಕಲಸಿ. ಮಿಶ್ರಣವು ಇಡ್ಲಿ ಹಿಟ್ಟಿನ ಹದಕ್ಕೆ ಬರುವಂತೆ ಕಲಸಿ. ಈಗ ಕೇಕ್ ಮಿಕ್ಸ್ ತಯಾರಾಗಿದೆ.
ಕಡಾಯಿಯ ಒಳಗೆ ರಿಂಗ್ ಇಟ್ಟು, ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿಟ್ಟು ಫ್ರೀ-ಹೀಟ್ ಮಾಡಿ.
ನಂತರ ಕೇಕ್ ಮಾಡುವ ಪಾತ್ರೆ (cake pan) ಗೆ ತುಪ್ಪ ಸವರಿ, ಮೈದಾದಿಂದ ಡಸ್ಟಿಂಗ್ ಮಾಡಿ. ತಯಾರಾದ ಕೇಕ್ ಮಿಕ್ಸ್ ಅನ್ನು ಕೇಕ್ ಪ್ಯಾನ್ ಗೆ ಹಾಕಿ.
ಈಗ ಬಿಸಿಯಾದ ಕಡಾಯಿಯಲ್ಲಿರುವ ರಿಂಗ್ ಮೇಲೆ ಗ್ರೀಸ್ ಮಾಡಿದ ಪಾತ್ರೆಯನ್ನು ಇಡಿ. ಮುಚ್ಚಳ ಮುಚ್ಚಿ ಕಡಿಮೆಯಿಂದ ಮಧ್ಯಮ ಉರಿಯಲ್ಲಿ ಕೇಕ್ ಅನ್ನು 30-35 ನಿಮಿಷ ಬೇಯಿಸಿ.
ಈಗ ಗೋಧಿಹಿಟ್ಟಿನ ಎಗ್ ಲೆಸ್ ಚಾಕೊಲೇಟ್ ಕೇಕ್ ರೆಡಿಯಾಗಿದೆ. ಇದು ತಣ್ಣಗಾದ ಬಳಿಕ ತುರಿದ ಚಾಕೊಲೇಟ್ ಪುಡಿಯಿಂದ ಅಲಂಕರಿಸಿ.
ಗರಿಗರಿಯಾದ ಬೆಳ್ಳುಳ್ಳಿ ಮಂಡಕ್ಕಿ / ಹುರಿಯಕ್ಕಿ
ಗರಿಗರಿಯಾದ ಬೆಳ್ಳುಳ್ಳಿ ಮಂಡಕ್ಕಿ
ಮಾಡುವ ವಿಧಾನ
ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಜೀರಿಗೆ ಸೇರಿಸಿ, ಬಳಿಕ ಜಜ್ಜಿದ ಬೆಳ್ಳುಳ್ಳಿ ಹಾಕಿ ಹುರಿಯಿರಿ. ಅದಕ್ಕೆ ಶೇಂಗಾ ಬೇರೆಸಿ 30 ಸೆಕೆಂಡ್ ಹುರಿಯಿರಿ. ನಂತರ ಹಸಿ ಮೆಣಸು, ಕೊಬ್ಬರಿ ಹಾಕಿ ಹುರಿಯಿರಿ. ಬಳಿಕ ಅದಕ್ಕೆ ಹುರಿಗಡಲೆ ಕರಿಬೇವಿನ ಸೊಪ್ಪು ಸೇರಿಸಿ, ಹುರಿಯಿರಿ. ನಿಂಬೇರಸ ಹಿಂಡಿ. ಈಗ ಮೆಣಸಿನ ಪುಡಿ, ಅರಿಶಿಣ ಪುಡಿ, ಸಕ್ಕರೆ ಪುಡಿ, ಚಾಟ್ ಮಸಾಲಾ, ಉಪ್ಪು ಹಾಕಿ ತಿರುವಿ.
ಈಗ ಅದಕ್ಕೆ ಮಂಡಕ್ಕಿ/ ಹುರಿಯಕ್ಕಿ ಸೇರಿಸಿ ತಿರುವಿ. 2 ನಿಮಿಷ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಗರಿಗರಿಯಾದ ಬೆಳ್ಳುಳ್ಳಿ ಮಂಡಕ್ಕಿ ಸವಿಯಲು ಸಿದ್ಧ.
ಇನ್ನಷ್ಟು ಅಡುಗೆ ರೆಸಿಪಿಗಾಗಿ ಗೂಗಲ್ ನಲ್ಲಿ Saakshatv cooking ಎಂದು ಸರ್ಚ್ ಮಾಡಿ.
ದಿಢೀರ್(instant) ಅವರೆಕಾಯಿ ರವಾ ಪಡ್ಡು
ದಿಢೀರ್(instant) ಅವರೆಕಾಯಿ ರವಾ ಪಡ್ಡು
ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ರವಾ ತೆಗೆದುಕೊಂಡು ಅದಕ್ಕೆ ಮೊಸರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಅದಕ್ಕೆ ಅಗತ್ಯವಿರುವಷ್ಟು ನೀರು ಸೇರಿಸಿ, ಹಿಟ್ಟಿನ ಹದಕ್ಕೆ ಕಲಸಿ. 30 ನಿಮಿಷ ಹಾಗೆ ಬಿಡಿ.
ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಸಾಸಿವೆ ಸೇರಿಸಿ, ಸಾಸಿವೆ ಸಿಡಿದ ಬಳಿಕ ಅದಕ್ಕೆ ಅರಿಶಿನ, ಸಣ್ಣಗೆ ಕತ್ತರಿಸಿದ ಹಸಿಮೆಣಸಿನಕಾಯಿ, ಕರಿಬೇವಿನ ಸೊಪ್ಪು ಸೇರಿಸಿ. ನಂತರ ಸಣ್ಣಗೆ ಹೆಚ್ಚಿಟ್ಟುಕೊಂಡ ಈರುಳ್ಳಿ ಸೇರಿಸಿ ಕೆಂಪಗಾಗುವವರೆಗೆ ಹುರಿಯಿರಿ. ಬಳಿಕ ಬೇಯಿಸಿದ ಅವರೆಕಾಯಿ ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿ.
ಅದಕ್ಕೆ ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು, ತೆಂಗಿನಕಾಯಿ ತುರಿ ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಬೆರೆಸಿ.
ಈಗ ರವಾ ಹಿಟ್ಟಿಗೆ ಈ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಬೇಕಾದಷ್ಟು ನೀರು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿ. ಬೇಕಿದ್ದರೆ ಉಪ್ಪು ಸೇರಿಸಿ. ನಂತರ ಅಡಿಗೆ ಸೋಡಾ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಸ್ಟೌವ್ ಮೇಲೆ ಪಡ್ಡು ಮಾಡುವ ಪ್ಯಾನ್ ಇಟ್ಟು ಎಲ್ಲ ಅಚ್ಚುಗಳಿಗೆ ಎಣ್ಣೆ ಸವರಿ. ಎಣ್ಣೆ ಬಿಸಿಯಾಗುತ್ತಿದ್ದಂತೆ, ರೆಡಿ ಮಾಡಿಟ್ಟುಕೊಂಡ ಮಿಶ್ರಣವನ್ನು ಎಲ್ಲ ಅಚ್ಚುಗಳಿಗೆ ಹಾಕಿ ಎರಡು ಕಡೆ ಬೇಯಿಸಿ.
ಗೋಲ್ಡನ್ ಬಣ್ಣ ಬರುವವರೆಗೆ ಪ್ರತಿ ಬದಿಯಲ್ಲಿ ಒಂದು ನಿಮಿಷ ಪಡ್ಡುಗಳನ್ನು ಬೇಯಿಸಿ.
ಈಗ ಬಿಸಿ ಬಿಸಿ ಅವರೆಕಾಯಿ ರವಾ ಪಡ್ಡು ಸವಿಯಲು ಸಿದ್ಧ.
ನುಗ್ಗೆ ಸೊಪ್ಪಿನ ಅಕ್ಕಿ ರೊಟ್ಟಿ
ನುಗ್ಗೆ ಸೊಪ್ಪಿನ ಅಕ್ಕಿ ರೊಟ್ಟಿ
ಮಾಡುವ ವಿಧಾನ:
ಮಿಕ್ಸಿಯಲ್ಲಿ ಅನ್ನವನ್ನು ರುಬ್ಬಿ. ನಂತರ ಅದನ್ನು ಒಂದು ಪಾತ್ರೆಯಲ್ಲಿ ಹಾಕಿ.
ಅದಕ್ಕೆ ಅಕ್ಕಿ ಹಿಟ್ಟು, ಹೆಚ್ಚಿದ ನುಗ್ಗೆ ಸೊಪ್ಪು, ಹೆಚ್ಚಿದ ಈರುಳ್ಳಿ, ಹೆಚ್ಚಿದ ಹಸಿಮೆಣಸಿನಕಾಯಿ, ಹೆಚ್ಚಿದ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಎಲ್ಲವನ್ನೂ ಸೇರಿಸಿ, ಚೆನ್ನಾಗಿ ನಾದಬೇಕು.
ಚೆನ್ನಾಗಿ ಮಿಕ್ಸ್ ಆದ ಬಳಿಕ ಅದರಿಂದ ಸಣ್ಣ ಉಂಡೆಗಳನ್ನು ಮಾಡಿ.
ಬಳಿಕ ಬಾಳೆ ಎಲೆಗೆ ಎಣ್ಣೆ ಸವರಿ ರೊಟ್ಟಿ ತಟ್ಟಿ.
ಕಾವಲಿಯನ್ನು ಒಲೆಯ ಮೇಲಿಟ್ಟು ಬಿಸಿ ಮಾಡಿ. ನಂತರ ತಟ್ಟಿದ ರೊಟ್ಟಿಯನ್ನು ಕಾದ ಕಾವಲಿ ಮೇಲೆ ಹಾಕಿ ಎಣ್ಣೆ ಸವರುತ್ತಾ ಎರಡೂ ಬದಿಗಳನ್ನು ಚೆನ್ನಾಗಿ ಬೇಯಿಸಿ.
ಈಗ ರುಚಿಯಾದ ಬಿಸಿ ಬಿಸಿ ನುಗ್ಗೆ ಸೊಪ್ಪಿನ ಅಕ್ಕಿ ರೊಟ್ಟಿ ಸವಿಯಲು ರೆಡಿ.
ಇನ್ನಷ್ಟು ಅಡುಗೆ ರೆಸಿಪಿಗಾಗಿ ಗೂಗಲ್ ನಲ್ಲಿ Saakshatv cooking ಎಂದು ಸರ್ಚ್ ಮಾಡಿ.
ಇನ್ನಷ್ಟು ಅಡುಗೆ ರೆಸಿಪಿಗಾಗಿ ಗೂಗಲ್ ನಲ್ಲಿ Saakshatv cooking ಎಂದು ಸರ್ಚ್ ಮಾಡಿ.