simple suni
ಇಡೀ ದೇಶದ ಗಮನ ಸೆಳೆದಿರುವ ಐಪಿಎಲ್ ಟೂರ್ನಿಯಲ್ಲಿ ಆರ್ಸಿಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಬದ್ಧವೈರಿಗಳಂತೆ ಬಿಂಬಿತವಾಗಿರುವ ವಿಚಾರ ಹೊಸದೇನಲ್ಲ. ಸ್ಟ್ರಾಂಗೆಸ್ಟ್ ಟೀಂ ಎಂದೇ ಕರೆಸಿಕೊಳ್ತಿದ್ದ ಸಿಎಸ್ ಕೆ ಈ ಬಾರಿಯ ಟೂರ್ನಿ 13ನೇ ಆವೃತ್ತಿಯಲ್ಲಿ ತೀರ ಕಳಪೆ ಆಟದಿಂದ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇತ್ತ ಅದ್ಭುತ ಪ್ರದರ್ಶನದಿಂದ ಆರ್ಸಿಬಿ ಅಗ್ರ ಮೂರನೇ ಸ್ಥಾನದಲ್ಲಿದೆ.
ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಹೀನಾಯ ಸೋಲು ಕಂಡ ಚೆನ್ನೈ ಸೂಪರ್ ಕಿಂಗ್ಸ್ ಅಧಿಕೃತ ಟ್ವಿಟ್ಟರ್ ಖಾತೆ ಆರ್ಸಿಬಿ ತಂಡದ ಬಗ್ಗೆ ಪರೋಕ್ಷವಾಗಿ ಕಾಲೆಳೆದಿದೆ. ಇದು ಆರ್ ಸಿಬಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇತ್ತ ಸಿಂಪಲ್ ಸುನಿ ಸಹ ಟ್ವೀಟ್ ಮೂಲಕ ಸಿ ಎಸ್ ಕೆಗೆ ಸಖತ್ತಾಗಿ ಟಾಂಗ್ ನೀಡಿದ್ದಾರೆ.
ಹೌದು ಸಿಎಸ್ ಕೆ ”ಸದ್ಯ 49ರ ಕೆಟ್ಟ ದಾಖಲೆಯಿಂದ ಪಾರಾದೆವು” ಎಂದು ಆರ್ಸಿಬಿಗೆ ಪರೋಕ್ಷವಾಗಿ ಟಾಂಗ್ ನೀಡಿತ್ತು. ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ ಸಿಎಸ್ಕೆ ಒಂದು ಹಂತದಲ್ಲಿ 3 ರನ್ಗೆ 4 ವಿಕೆಟ್ ಕಳೆದುಕೊಂಡಿತ್ತು. ಅತಿ ಕಡಿಮೆ ರನ್ಗೆ ಸಿಎಸ್ಕೆ ಆಲ್ ಔಟ್ ಆಗಬಹುದು ಎಂದು ಅಂದಾಜಿಸಲಾಗಿತ್ತು. ಆದ್ರೆ, 114 ರನ್ ಬಾರಿಸುವಲ್ಲಿ ಯಶಸ್ವಿಯಾಯಿತು.
ಸಿಎಸ್ ಕೆ ಟ್ವೀಟ್ ಗೆ ಉತ್ತರಿಸಿರುವ ಸಿಂಪಲ್ ಸುನಿ “ಅತಿ ಕಮ್ಮಿ ರನ್ ಹೊಡೆದಿರವುದು ನಾವಿರಬಹುದು.. 49 ನೆನಪಿರಲಿ.. ಆದರೆ ಅತಿ ಹೆಚ್ಚು ರನ್ ಹೊಡೆದಿರುವವರು ನಾವೆನೇ.. 263. ಒಂದು ಪವರ್ ಪ್ಲೇ ನಲ್ಲಿ ಅತಿ ಕಮ್ಮಿ ರನ್ ಗೆ ಕಟ್ಟಿಹಾಕಿರುವುದು ನಾವೆನೇ.. 18 in 6 overs ಸೋಲು ನೋಡಿದ್ದೀವಿ… ಗೆಲುವು ಕಂಡಿದ್ದೀವಿ… ಆದರೆ ಎಂದಿಗೂ ಮೋಸದಾಟದ ಹೆಸರಿಗೆ ಟೂರ್ನಿಯಿಂದಲೇ ನಿರ್ಗಮನ ಹೊಂದಿಲ್ಲ..” ಎಂದು ಸಿಎಸ್ ಕೆಗೆ ಅದರದ್ದೇ ಭಾಷೆಯಲ್ಲಿ ತಿರುಗೇಟು ನೀಡಿದ್ದಾರೆ. ಇನ್ನೂ ಸಿಇಎಸ್ ಕೆ ಟ್ವೀಟ್ ನೋಡಿ ಕೆಂಡಾಮಂಡಲವಾಗಿರು ಅಭಿಮಾನಿಗಳು ತಿರುಗಿಬಿದ್ದಿದ್ದಾರೆ. ಎರೆಡು ವರ್ಷ ಬ್ಯಾನ್ ಆಗಿ ಹೋದ ಮಾನ ಹತ್ತು ಸರಿ ಟ್ರೋಫಿ ಗೆದ್ದರು ಬರಲ್ಲ ನೆನಪಿರಲಿ. ಎಂದು ಸಿಎಸ್ ಕೆ ತಕ್ಕ ಉತ್ತರ ನೀಡ್ತಿದ್ದಾರೆ ಆರ್ ಸಿಬಿ ಫ್ಯಾನ್ಸ್.
ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ನ ಬಲಶಾಲಿ ಟೀಂ ಎಂದೇ ಗುರುತಿಸಿಕೊಂಡಿದ್ದ ತಂಡ. ಆದ್ರೆ 13ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅತ್ಯಂತ ಕಳಪೆ ಆಟ ಪ್ರದರ್ಶಿಸಿದೆ. ಅದರ ಫಲವಾಗಿ ಈಗಾಗಲೇ ಟೂರ್ನಿಯಿಂದಲೇ ಹೊರಗುಳಿಯುವ ಹಂತ ತಲುಪಿದ ಚೆನ್ನೈ ಸೂಪರ್ ಕಿಂಗ್ಸ್. ಶ್ರೇಯಾಂಕ ಪಟ್ಟಿಯಲ್ಲಿ ಈಗಾಗಲೇ ಕೊನೆಯ ಸ್ಥಾನದಲ್ಲಿದೆ ಈ ಮೂಲಕ ಇಷ್ಟು ವರ್ಷದ ಇತಿಹಾಸದಲ್ಲಿ ಇದೇ ಮೊದಲ ಸಲ ಸಿಎಸ್ ಕೆ ತಂಡ ಲೀಗ್ ಹಂತದಿಂದಲೇ ಹೊರಗೆ ಹೋಗುತ್ತಿರೋದು ಚೆನ್ನೈ ಸೂಪರ್ ಕಿಂಗ್ ಅಭಿಮಾನಿಗಳಿಗೆ ಆಘಾತವನ್ನುಂಟುಮಾಡಿದೆ. ಮತ್ತೊಂದೆಡೆ ಈ ಬಾರಿ ಕಪ್ ನಮ್ದೇ ಅಂತ ಬೀಗುತ್ತಿರುವ ಆರ್ ಸಿಬಿ ಅಭಿಮಾನಿಗಳು ಆರ್ ಸಿಬಿ ಗಲುವಿನ ನಿರೀಕ್ಷೆಯಲ್ಲಿದ್ದಾರೆ. ಅಲ್ಲದೇ ಈ ಆವೃತ್ತಿಯಲ್ಲಿ ಅದ್ಭುತ ಆಟ ಪ್ರದರ್ಶಿಸುತ್ತಿರುವ ಾರ್ ಸಿಬಿ ಪ್ಲೇ ಆಫ್ ಪ್ರವೇಶ ಮಾಡುವುದು ಬಹುತೇಕ ಪಕ್ಕಾ ಆಗಿದೆ.
simple suni
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel