ತಲೆ ಹೊಟ್ಟಿನ ಸಮಸ್ಯೆ ಬಹಳಷ್ಟು ಜನರನ್ನು ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ. ಇದನ್ನು ನಿವಾರಿಸಲು ಜನರು ವಿವಿಧ ರೀತಿಯ ರಾಸಾಯನಿಕ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ, ಮನೆಯಲ್ಲಿಯೇ ಸುಲಭವಾಗಿ ತಲೆ ಹೊಟ್ಟನ್ನು ನಿವಾರಿಸಿಕೊಳ್ಳಲು ಕೆಲವು ನೈಸರ್ಗಿಕ ವಿಧಾನಗಳಿವೆ.
ಎಣ್ಣೆ ಮಸಾಜ್: ಸಾಮಾನ್ಯವಾಗಿ ಕೂದಲಿನ ಬುಡ ಒಣಗಿದಾಗ ತಲೆ ಹೊಟ್ಟಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕೂದಲಿಗೆ ಚೆನ್ನಾಗಿ ಎಣ್ಣೆ ಮಸಾಜ್ ಮಾಡುವುದರಿಂದ ತಲೆ ಹೊಟ್ಟು ನಿವಾರಣೆಯಾಗುತ್ತದೆ.
ಮೊಟ್ಟೆಯ ಹಳದಿ ಭಾಗ: ವಾರಕ್ಕೊಮ್ಮೆ ಮೊಟ್ಟೆಯ ಹಳದಿ ಭಾಗವನ್ನು ತಲೆಗೆ ಹಚ್ಚಿಕೊಂಡು 1 ಗಂಟೆಯ ನಂತರ ತೊಳೆಯುವುದರಿಂದ ತಲೆ ಹೊಟ್ಟು ನಿವಾರಣೆಯಾಗುವುದಲ್ಲದೇ ತಲೆ ಕೂದಲೂ ಸಹ ಸೊಂಪಾಗಿ ಬೆಳೆಯುತ್ತದೆ.
ಲೋಳೆ ರಸ: ವಾರಕ್ಕೊಮ್ಮೆ ಲೋಳೆ ರಸವನ್ನು ತಲೆಗೆ ಹಚ್ಚಿ ಶ್ಯಾಂಪೂ ಬಳಸದೇ ಹಾಗೆಯೇ ತೊಳೆಯುವುದರಿಂದಲೂ ಸಹ ತಲೆ ಹೊಟ್ಟು ನಿವಾರಣೆಯಾಗುತ್ತದೆ.
ತೆಂಗಿನಕಾಯಿಯ ರಸ: ತೆಂಗಿನಕಾಯಿಯ ರಸಕ್ಕೆ ಸ್ವಲ್ಪ ಬಿಸಿ ನೀರು ಮತ್ತು ನಿಂಬೆ ರಸವನ್ನು ಬೆರೆಸಿ ಹಚ್ಚುವುದರಿಂದ ತಲೆ ಹೊಟ್ಟು ನಿವಾರಣೆಯಾಗುತ್ತದೆ.
ಮೆಂತ್ಯ ಸೊಪ್ಪಿನ ಪೇಸ್ಟ್: ಮೆಂತ್ಯ ಸೊಪ್ಪಿನ ಪೇಸ್ಟ್ನ್ನು ತಲೆಗೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯುವುದರಿಂದ ತಲೆ ಹೊಟ್ಟು ನಿವಾರಣೆಯಾಗಬಹುದು.
ಅಡುಗೆ ಸೋಡಾ: 1 ಚಮಚ ಅಡುಗೆ ಸೋಡಾವನ್ನು ನೀರಿನಲ್ಲಿ ಬೆರೆಸಿ 5 ನಿಮಿಷದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯುವುದರಿಂದ ತಲೆ ಹೊಟ್ಟು ನಿವಾರಣೆಯಾಗುತ್ತದೆ.
ನಿಂಬೆ ರಸ: ಕೇವಲ ನಿಂಬೆ ರಸವನ್ನು ಕೂದಲ ಬುಡಕ್ಕೆ ಹಚ್ಚಿ ಸ್ನಾನ ಮಾಡುವುದರಿಂದ ತಲೆ ಹೊಟ್ಟು ನಿವಾರಣೆಯಾಗುತ್ತದೆ.
ಮೆಹೆಂದಿ: ತಲೆಕೂದಲಿಗೆ ಮೆಹೆಂದಿ ಹಾಕುವುದರಿಂದಲೂ ತಲೆ ಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ.
ಹುಳಿ ಮೊಸರು: ಹುಳಿ ಮೊಸರನ್ನು ತಲೆಬುಡಕ್ಕೆ ಹಚ್ಚಿ ಅರ್ಧ ಗಂಟೆಯ ನಂತರ ಸ್ನಾನ ಮಾಡುವುದರಿಂದ ತಲೆ ಹೊಟ್ಟು ನಿವಾರಣೆಯಾಗುತ್ತದೆ.
ಸೀಗೆಕಾಯಿ: ತಲೆ ಸ್ನಾನ ಮಾಡುವಾಗ ಶ್ಯಾಂಪೂವನ್ನು ಬಳಸುವುದರ ಬದಲು ಸೀಗೆಕಾಯಿ ಬಳಸುವುದರಿಂದ ತಲೆ ಹೊಟ್ಟು ನಿವಾರಣೆಯಾಗುವುದಲ್ಲದೇ ಅದು ಮತ್ತೆ ಬರದಂತೆ ತಡೆಗಟ್ಟಬಹುದು.
ಬಿಲ್ವಪತ್ರೆ: ಬಿಲ್ವಪತ್ರೆಯ ತಿರುಳನ್ನು ಬೇಯಿಸಿ ತಲೆಗೆ ಹಚ್ಚುವುದರಿಂದ ತಲೆ ಹೊಟ್ಟು ಕಡಿಮೆಯಾಗುತ್ತದೆ.
ದಾಸವಾಳ ಎಲೆ: ಯಾವುದೇ ಬಣ್ಣದ ದಾಸವಾಳ ಎಲೆಯನ್ನು ರುಬ್ಬಿ ಅದಕ್ಕೆ ಮೊಸರು ಹಾಕಿ ಕಲೆಸಿ ಬಳಸುವುದರಿಂದ ಹೊಟ್ಟು ನಿವಾರಣೆಯಾಗುತ್ತದೆ.
ಆಲಿವ್ ಎಣ್ಣೆ: ತಲೆಗೆ ಆಲಿವ್ ಎಣ್ಣೆಯನ್ನು ಬಳಸುವುದರಿಂದ ಕೂದಲು ಮೃದುವಾಗುವುದಲ್ಲದೇ ಹೊಟ್ಟು ನಿವಾರಣೆಯಾಗುತ್ತದೆ.
ಈ ಸರಳ ಮನೆಮದ್ದುಗಳನ್ನು ಪ್ರಯತ್ನಿಸಿ, ತಲೆ ಹೊಟ್ಟಿನ ಸಮಸ್ಯೆಯಿಂದ ಮುಕ್ತವಾಗಿರಿ.