ಕರ್ನಾಟಕದ ಫೇಮಸ್ ತಿಂಡಿ ಬಿಸಿಬೇಳೆಬಾತ್ ಯಾರಿಗೆ ಇಷ್ಟವಾಗಲ್ಲ ಹೇಳಿ. ನೋಡುತ್ತಿದ್ದಂತೆಯೇ ತಿನ್ನಬೇಕು ಎನಿಸುವಂತ ಸೂಪರ್ ರೈಸ್ ಐಟಂ ಇದಾಗಿದೆ. ಇದರ ಘಮ, ರುಚಿ ಎಷ್ಟೇ ತಿಂದರೂ ಮತ್ತಷ್ಟು ತಿನ್ನಬೇಕು ಎನಿಸುವಂತೆ ಮಾಡುತ್ತದೆ. ಈ ಟಿಪ್ಸ್ ಜೊತೆ ರುಚಿರುಚಿಯಾದ ಬಿಸಿಬೇಳೆಬಾತ್ ಮಾಡಿ ಸವಿಯಿರಿ.ಹೇಗಿದೆ ಅಂತ ಕಮೆಂಟ್ ಮಾಡಿ…
ಬೇಕಾಗುವ ಸಾಮಾಗ್ರಿಗಳು:
– ಅಕ್ಕಿ – 1 ಕಪ್
– ತೊಗರಿಬೇಳೆ – 1 ಕಪ್
– ದನಿಯಾ – ಕಾಲು ಕಪ್
– ಚಕ್ಕೆ – 1 ಇಂಚು
– ಲವಂಗ – ಅರ್ಧ ಟೀ ಸ್ಪೂನ್
– ಕರಿಮೆಣಸು – 7-8
– ಉದ್ದಿನಬೇಳೆ – 2 ಟೀ ಸ್ಪೂನ್
– ಕಡಲೇಬೇಳೆ – 1 ಟೀ ಸ್ಪೂನ್
– ಅಕ್ಕಿ – 1 ಟೀ ಸ್ಪೂನ್
– ಮೆಂತ್ಯೆ – ಅರ್ಧ ಟೀ ಸ್ಪೂನ್
– ಜೀರಿಗೆ – 1 ಟೀ ಸ್ಪೂನ್
– ಒಣಕೊಬ್ಬರಿ – ಕಾಲು ಕಪ್
– ಈರುಳ್ಳಿ – 1
– ಕರಿಬೇವು – ಸ್ವಲ್ಪ
– ಟೊಮೆಟೋ – 1
– ಅಚ್ಚಖಾರದಪುಡಿ – 2 ಟೀ ಸ್ಪೂನ್
– ದನಿಯಾಪುಡಿ- 1 ಟೀ ಸ್ಪೂನ್
– ತುಪ್ಪ – 2 ಟೀ ಸ್ಪೂನ್
– ಗೋಡಂಬಿ – 7-8
– ಕ್ಯಾರೆಟ್ – ಕಾಲು ಕಪ್
– ಬೀನ್ಸ್ – ಕಾಲು ಕಪ್
– ಕ್ಯಾಪ್ಸಿಕಂ – ಕಾಲು ಕಪ್
– ಹಸಿಬಟಾಣಿ – ಕಾಲು ಕಪ್
– ಕಡಲೇಬೀಜ – 1 ಟೀ ಸ್ಪೂನ್
– ಹಸಿಮೆಣಸಿನಕಾಯಿ – 2
– ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
1. ಒಂದು ಕಪ್ ಅಕ್ಕಿಯನ್ನು ಚೆನ್ನಾಗಿ ತೊಳೆದು ನೀರಲ್ಲಿ ಒಂದು ಗಂಟೆಗಳ ಕಾಲ ನೆನೆಸಿಡಿ. ಇದೇ ರೀತಿ ತೊಗರಿಬೇಳೆಯನ್ನು ಸಹ ತೊಳೆದು ನೀರಲ್ಲಿ 1 ಗಂಟೆಗಳ ಕಾಲ ನೆನೆಸಿಡಿ.
2. ಬಿಸಿಬೇಳೆ ಬಾತ್ ಪೌಡರ್ ಮಾಡುವ ವಿಧಾನ: ಸ್ಟೌವ್ ಮೇಲೆ ಬಾಣಲಿ ಇಟ್ಟು ಕಾಲು ಕಪ್ ದನಿಯಾ ಹಾಕಿ ಲೋ ಫ್ಲೇಮ್ ನಲ್ಲಿ ಚೆನ್ನಾಗಿ ಫ್ರೈ ಮಾಡಿ ತಣ್ಣಗಾಗಲು ಬಿಡಿ. 7-8 ಒಣಮೆಣಸಿನಕಾಯಿ ಫ್ರೈ ಮಾಡಿ ದನಿಯಾ ಪ್ಲೇಟ್ ಗೆ ಹಾಕಿ. 1 ಇಂಚು ಚಕ್ಕೆ, ಅರ್ಧ ಟೀ ಸ್ಪೂನ್ ಲವಂಗ, 7-8 ಕರಿಮೆಣಸುಕಾಳು ಹಾಕಿ ವಾಸನೆ ಬರುವವರೆಗೂ ಫ್ರೈ ಮಾಡಿ ತಣ್ಣಗಾಗಲು ಬಿಡಿ. 2 ಟೀ ಸ್ಪೂನ್ ಉದ್ದಿನಬೇಳೆ, 1 ಟೀ ಸ್ಪೂನ್ ಕಡಲೇಬೇಳೆ, 1 ಟೀ ಸ್ಪೂನ್ ಅಕ್ಕಿ ಹಾಕಿ ಸ್ವಲ್ಪ ಕೆಂಬಣ್ಣ ಬರುವವರೆಗೂ ಫ್ರೈ ಮಾಡಿ ತಣ್ಣಗಾಗಲು ಬಿಡಿ. ಅರ್ಧ ಟೀ ಸ್ಪೂನ್ ಮೆಂತ್ಯೆ, 1 ಟೀ ಸ್ಪೂನ್ ಜೀರಿಗೆ, ಕಾಲು ಕಪ್ ಒಣಕೊಬ್ಬರಿ ಹಾಕಿ ಫ್ರೈ ಮಾಡಿ ತಣ್ಣಗಾಗಲು ಬಿಡಿ. ತಣ್ಣಗಾದ ಮೇಲೆ ಎಲ್ಲಾ ಪದಾರ್ಥಗಳನ್ನು ಮಿಕ್ಸಿಗೆ ಹಾಕಿ ಪೌಡರ್ ಮಾಡಿ.
3. ಕುಕ್ಕರ್ ನಲ್ಲಿ 1 ಗಂಟೆ ನೆನೆಸಿದ್ದ ಅಕ್ಕಿ, ತೊಗರಿಬೇಳೆ ಹಾಕಿ ಸ್ವಲ್ಪ ಅರಿಶಿಣಪುಡಿ, ನೀರನ್ನು ಹಾಕಿ 3 ವಿಸಿಲ್ ಹಾಕಿಸಿ.
4. ಒಂದು ಬಾಣಲಿ ಇಟ್ಟು 1 ಟೀ ಸ್ಪೂನ್ ತುಪ್ಪ ಹಾಕಿ. ತುಪ್ಪ ಕಾದ ಬಳಿಕ ಸಣ್ಣದಾಗಿ ಉದ್ದಕ್ಕೆ ಹಚ್ಚಿರುವ ಈರುಳ್ಳಿ, ಕರಿಬೇವು ಸ್ವಲ್ಪ, ಉಪ್ಪು ಸ್ವಲ್ಪ ಹಾಕಿ ಫ್ರೈ ಮಾಡಿ. ಈರುಳ್ಳಿ ಹಸಿವಾಸನೆ ಹೋದ ಮೇಲೆ ಸಣ್ಣದಾಗಿ ಕಟ್ ಮಾಡಿರುವ 1 ಟೊಮೆಟೋ, 2 ಟೀ ಸ್ಪೂನ್ ಅಚ್ಚಖಾರದಪುಡಿ, 1 ಟೀ ಸ್ಪೂನ್ ದನಿಯಾಪುಡಿ ಹಾಕಿ ಫ್ರೈ ಮಾಡಿ ಇಟ್ಟುಕೊಳ್ಳಿ.
ಈ ವಿಧಾನವನ್ನು ಅನುಸರಿಸಿ, ನೀವು ಮನೆಯಲ್ಲಿ ಹೋಟೆಲ್ ಸ್ಟೈಲ್ ಬಿಸಿಬೇಳೆ ಬಾತ್ ಸವಿಯಬಹುದು. ಸಖತ್ ಟೇಸ್ಟಿ ಆಗಿರುತ್ತೆ ನೋಡಿ…