ಸಿಂಧಿ ಆಲೂ ಟುಕ್ ಚಳಿಗಾಲದ Super Snacks ಮಾಡೋದು ಹೇಗೆ ತಿಳಿಯೋಣ…
ಬೇಕಾಗುವ ಸಾಮಗ್ರಿಗಳು
6 ಬೇಯಿಸಿದ ಬೇಬಿ ಆಲೂಗಡ್ಡೆ
ರುಚಿಗೆ ತಕ್ಕಷ್ಟು ಉಪ್ಪು
1 ಟೀಚಮಚ ಮೆಣಸಿನಪುಡಿ
1 ಟೀಚಮಚ ಅರಿಶಿನ
1 ಟೀಚಮಚ ಕೊತ್ತಂಬರಿ ಪುಡಿ
1 ಟೀಚಮಚ ಜೀರಿಗೆ ಪುಡಿ
1 ಟೀಚಮಚ ಅಮ್ಚೂರ್ (ಹಸಿ ಮಾವಿನ ಪುಡಿ)
ಎಣ್ಣೆ ( ಫ್ರೈ ಮಾಡಲು)
ಮಾಡುವ ವಿಧಾನ:
1. ಆಲೂಗಡ್ಡೆಗಳನ್ನು ಬೇಯಿಸಿ. ನಂತರ ಅದರ ಸಿಪ್ಪೆ ತೆಗೆದು ಅರ್ಧದಷ್ಟು ಕತ್ತರಿಸಿ. ತಣ್ಣನೆಯ ನೀರಿನಲ್ಲಿ ತೊಳೆಯಿರಿ. ಈಗ ಸ್ವಚ್ಛವಾದ ಟವೆಲ್ ನಿಂದ ಒರೆಸಿ
2. ಒಂದೇ ಬಾಣಲಿಯಲ್ಲಿ ಎಣ್ಣೆ ಬಿಸಿ ಮಾಡಿ, ಆಲೂಗಡ್ಡೆಗಳನ್ನು ಮಧ್ಯಮ ತಾಪಮಾನದಲ್ಲಿ ಗೋಲ್ಡ್ ಬಣ್ಣ ಬರುವವರೆಗೆ ಡೀಪ್ ಫ್ರೈ ಮಾಡಿ..
ಹುರಿದ ನಂತರ, ಎಣ್ಣೆ ತೆಗೆಯಲು ಟಿಷ್ಯೂ ಪೇಪರ್ ಮೇಲೆ ಇಡಿ.
3. ಒಂದು ಪ್ಲೇಟ್ ನಲ್ಲಿ ಮೆಣಸಿನಪುಡಿ, ಅರಿಶಿನ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಅಮ್ಚೂರ್ ಪುಡಿ ಮತ್ತು ಉಪ್ಪು ಮಿಶ್ರಣ ಮಾಡಿ.
ಈ ಮಸಾಲೆ ಮಿಶ್ರಣವನ್ನು ಹುರಿದ ಆಲೂಗಡ್ಡೆಗಳ ಮೇಲೆ ಹಚ್ಚಿ ಚೆನ್ನಾಗಿ ಕಲಸಿ.
4. ಹೆಚ್ಚು ರುಚಿಗೆ, ಈ ಸಿಂಧಿ ಆಲೂ ಟುಕ್ ಅನ್ನು ಬಿಸಿ ಬಿಸಿಯಾಗಿ ಅಥವಾ ಸೈಡ್ ಡಿಶ್ ಆಗಿ ಸೇವಿಸಿ.