‘ಅನಾಥ ಮಕ್ಕಳ ತಾಯಿ’ ಸಿಂಧೂತಾಯಿ ಸಪ್ಕಾಲ್ ನಿಧನ

1 min read

‘ಅನಾಥ ಮಕ್ಕಳ ತಾಯಿ’ ಎಂದೇ ಕರೆಸಿಕೊಳ್ತಿದ್ದ ಜನಪ್ರಿಯ ಸಮಾಜ ಸೇವಕಿ , ಸಿಂಧೂತಾಯಿ ಸಪ್ಕಾಲ್ ಅವರು ಪುಣೆಯ ಕಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಂದ ನಿಧನರಾಗಿದ್ದಾರೆ.. 75 ವರ್ಷದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಿಂಧುತಾಯಿ ಸಪ್ಕಾಲ್​ ಅವರು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಒಂದೂವರೆ ತಿಂಗಳ ಹಿಂದೆ ಸಿಂಧುತಾಯಿ ಸಪ್ಕಾಲ್​​​ ಅವರು ಹರ್ಣಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ತುಂಬ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದ್ದರು. ಜ.4ರ ರಾತ್ರಿ 8 ಗಂಟೆ ಹೊತ್ತಿಗೆ ಹೃದಯಾಘಾತದಿಂದ ನಿಧನರಾದರು ಎಂದು ಸಪ್ಕಲ್​ ಅಡ್ಮಿಟ್ ಆಗಿದ್ದ ಮುಂಬೈ ಗೆಲ್ಯಾಕ್ಸಿ ಕೇರ್​ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಶೈಲೇಶ್​   ಪುಂಟಂಬೆಕರ್ ತಿಳಿಸಿದ್ದಾರೆ. ಸಿಂಧು ತಾಯಿ ಸಪ್ಕಾಲ್ ಅವರು 1948ರ ನವೆಂಬರ್​ 14ರಂದು ಮಹಾರಾಷ್ಟ್ರದಲ್ಲಿ ವಾರ್ಧಾ ಜಿಲ್ಲೆಯಲ್ಲಿ ಜನಿಸಿದ್ದರು..

4ನೇ ತರಗತಿಯವರೆಗೆ ಕಲಿತ ನಂತರ ಅನಿವಾರ್ಯವಾಗಿ ಶಾಲೆ ಬಿಡಬೇಕಾಯಿತು.  ಜೀವನದಲ್ಲಿ ಏಳು ಬೀಳುಗಳನ್ನ ಕಂಡು , ಬಡತನದ ಕಷ್ಟ ಅರಿತಿದ್ದ ಸಪ್ಕಾಲ್​ ಅನಾಥ ಮಕ್ಕಳಿಗಾಗಿ ಒಂದು ಅನಾಥಾಶ್ರಮ ಕಟ್ಟಲು ಮುಂದಾಗಿದ್ದರು..   ಆದ್ರೆ  ಅವರಿಗೆ 12ನೇ ವರ್ಷಕ್ಕೆ, 32 ವರ್ಷದ ವ್ಯಕ್ತಿಯನ್ನು ಮದುವೆ ಮಾಡಲಾಯ್ತು. ನಂತರ ಮೂರು ಮಕ್ಕಳಿಗೆ ಜನ್ಮ ಕೊಟ್ಟರು. ಆದರೆ ಈ ಮಧ್ಯೆ ಕೊನೇ ಮಗು ಹೊಟ್ಟೆಯಲ್ಲಿದ್ದಾಗಲೇ ಪತಿ  ಬಿಟ್ಟು ಹೋಗಿದ್ದರು..sindhutayi sapkal saakshatv

ನಂತರ ಸಿಂಧುರಿಗೆ ತಾಯಿ ಕುಟುಂಬದವರು ನೆರವಾಗದೇ  ಹೋದ ನಂತರ ಸಾಕಷ್ಟು ಕಷ್ಟಗಳನ್ನು ಎದುರಿಸಿ,   ಅನಾಥಾಶ್ರಮಗಳಲ್ಲಿ ಕೆಲಸ ಮಾಡಲು ಶುರು ಮಾಡಿದರು.  ನಂತರ ಸುಮಾರು 1050 ಅನಾಥ ಮಕ್ಕಳನ್ನು ಬೆಳೆಸಿದರು. ಈ ಸಾಧನೆಗೇ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿತ್ತು.

ಇನ್ನೂ ಸಿಂಧುತಾಯಿ ನಿಧನಕ್ಕೆ ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಸಿಂಧುತಾಯಿಯವರು ಈ ಸಮಾಜಕ್ಕೆ ಸಲ್ಲಿಸಿದ ಸೇವೆ ಸದಾ ಸ್ಮರಣೀಯ. ಅವರಿಂದಾಗಿ ಅದೆಷ್ಟೋ ಅನಾಥ ಮಕ್ಕಳಿಗೆ ಉತ್ತಮ ಜೀವನ ಸಿಕ್ಕಿತು. ದುರ್ಬಲ ವರ್ಗದವರ ಏಳ್ಗೆಗಾಗಿಯೂ ದುಡಿದರು. ಅವರ ನಿಧನದಿಂದ ಅಪಾರ ನೋವಾಗಿದೆ ಎಂದು ಹೇಳಿದ್ದಾರೆ.

 ರಾಷ್ಟ್ರಪತಿ ರಾಮನಾಥ್  ಕೋವಿಂದ್​ ಅವರು ಸಹ ಟ್ವೀಟ್ ಮಾಡಿ,  ಸಿಂಧುತಾಯಿ ಜೀವನ ಧೈರ್ಯ, ಸಮರ್ಪಣೆ ಮತ್ತು ಸೇವೆಯಿಂದ ಕೂಡಿ, ಸ್ಫೂರ್ತಿದಾಯಕವಾಗಿತ್ತು. ಅನಾಥರು, ಬುಡಕಟ್ಟು ಜನರು ಮತ್ತು ದುರ್ಬಲರನ್ನು ಪ್ರೀತಿಸುತ್ತಿದ್ದರು ಮತ್ತು ಅವರಿಗಾಗಿ ಕೆಲಸ ಮಾಡಿದರು. 2021ರಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದರು. ಅವರ ಸಾವಿನಿಂದ ದುಃಖವಾಗಿದೆ ಎಂದು ಹೇಳಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd