singapore women passed racist comment on indian women
ಭಾರತೀಯ ಮಹಿಳೆಗೆ ‘ಸ್ಟುಪಿಡ್ ಇಂಡಿಯನ್ಸ್ ’ ಎಂದು ನಿಂದಿಸಿ ಜೈಲು ಪಾಲಾದ ಸಿಂಗಪುರದ ಮಹಿಳೆ..!
ಭಾರತೀಯ ಮಹಿಳೆಗೆ ಸಿಂಗಪುರದ ಮಹಿಳೆಯೊಬ್ಬಳು ‘ಸ್ಟುಪಿಡ್ ಇಂಡಿಯನ್’ ಎಂದು ನಿಂದಿಸಿದ್ದು, ಇದೀಗ ಜೈಲು ಸೇರಿದ್ದಾಳೆ..
ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಭಾರತೀಯ ಮೂಲದ ಮಹಿಳೆ ವಿರುದ್ಧ ಜನಾಂಗೀಯ ಹೇಳಿಕೆ ನೀಡಿದ್ದಕ್ಕಾಗಿ 40 ವರ್ಷದ ಸಿಂಗಪುರದ ಮಹಿಳೆಯೊಬ್ಬರಿಗೆ ನಾಲ್ಕು ವಾರಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಕಳೆದ ವರ್ಷ ಸೆಪ್ಟೆಂಬರ್ 3 ರಂದು ಈ ಘಟನೆ ಸಂಭವಿಸಿದ್ದು, ಆಯಿಷಾ ಜಾಫರ್ ಎಂಬ ಸಿಂಗಪುರದ ಮಹಿಳೆ 33 ವರ್ಷದ ಭಾರತೀಯ ಮಹಿಳೆಯನ್ನು ‘ಸ್ಟುಪಿಡ್ ಇಂಡಿಯನ್’ಎಂದು ಕರೆದಿದ್ದರು.
ಸಂತ್ರಸ್ತ ಮಹಿಳೆಯು ತನ್ನ ಇಯರ್‌ಫೋನ್‌ನಲ್ಲಿ ಸಂಗೀತ ಕೇಳುತ್ತಿದ್ದಳು. ಈ ಸಂದರ್ಭ ಸಿಂಗಪುರದ ಮಹಿಳೆ ಹಲವು ಬಾರಿ ಆಕೆ ಬಗ್ಗೆ ಕಾಮೆಂಟ್ ಮಾಡಿದ್ದಾಳೆ. ‘ನಂತರ ಸಂತ್ರಸ್ತ ಮಹಿಳೆ ಮ್ಯೂಸಿಕ್ ಆಫ್ ಮಾಡಿ ಸಿಂಗಪುರದ ಮಹಿಳೆ ಕಿರುಚಾಡುತ್ತಿದ್ದ್ದನ್ನು ಆಲಿಸಿದ್ದಾರೆ. ಕಪ್ಪು ಚರ್ಮ ಹೊಂದಿರುವ ಭಾರತೀಯಳು. ಸ್ಟುಪಿಡ್ ಇಂಡಿಯನ್ ಎಂದೆಲ್ಲ ನಿಂದಿಸಿರುವುದು ಗಮನಕ್ಕೆ ಬಂದಿದೆ. ಬಳಿಕ, ಸಂತ್ರಸ್ತೆ ತನ್ನ ಮೊಬೈಲ್ ಫೋನ್ ತೆಗೆದುಕೊಂಡು ಘಟನೆಯನ್ನು ಚಿತ್ರೀಕರಿಸಿದ್ದಾರೆ.
ನ್ಯಾಯಾಲಯದಲ್ಲಿ ಪ್ಲೇ ಮಾಡಲಾದ ಎರಡು ವಿಡಿಯೊ ತುಣುಕುಗಳಲ್ಲಿ, ಆಕೆ ಭಾರತೀಯ ಮಹಿಳೆಯನ್ನು ಸನ್ನೆ ಮಾಡಿ ಕೂಗುತ್ತಿರುವುದನ್ನು ಕಾಣಬಹುದು. ಆಕೆಯನ್ನು ಅಲ್ಪಸಂಖ್ಯಾತ ಎಂದೂ ಕರೆದಿರುವುದು ಬೆಳಕಿಗೆ ಬಂದಿದೆ. ನೀನು ಮತ್ತು ನಿನ್ನ ಬ್ಲಾಕ್ ಮ್ಯಾಜಿಕ್ ಮುಖ. ನಿನ್ನ ಹೃದಯವೂ ಕಪ್ಪು ಎಲ್ಲವೂ ಕಪ್ಪು. ಎಂದು ಸಿಂಗಪುರದ ಮಹಿಳೆ ಕಿರುಚಾಡಿರುವುದು ದೃಶ್ಯದಲ್ಲಿದೆ.
ನಿನ್ನ ತವರು ದೇಶ ಭಾರತ, ಸಿಂಗಪುರ ಅಲ್ಲ. ಸ್ಟುಪಿಡ್ ಇಂಡಿಯನ್ಸ್.. ನೀನೊಬ್ಬಳು ಭಾರತೀಯ ಮಹಿಳೆ. ಹಾಗಾಗಿಯೇ ಕಪ್ಪಗಿದ್ದೀಯ. ನಿನ್ನ ಬಣ್ಣವನ್ನು ನಾನು ದ್ವೇಷಿಸುತ್ತೇನೆ. ನಾನು ನಿನ್ನ ಮುಖವನ್ನು ಇಷ್ಟಪಡುವುದಿಲ್ಲ. ದೇಶಬಿಟ್ಟು ತೊಲಗು ಎಂದೆಲ್ಲಾ ಕಿರುಚಾಡಿದ್ದಾಳೆ ಎಂದು ತಿಳಿದುಬಂದಿದೆ..
singapore women passed racist comment on indian women