ಜುಲೈ ಒಂದರಿಂದ ಸಿಂಗೇನ ಅಗ್ರಹಾರದ ಸಗಟು ಹಣ್ಣಿನ ಮಾರುಕಟ್ಟೆ ಸ್ಥಗಿತ
ಬೆಂಗಳೂರು, ಜೂನ್ 28 – ಕೋವಿಡ್-19ರ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರಕ್ಕೆ ಹಣ್ಣುಗಳನ್ನು ಒದಗಿಸುತ್ತಿರುವ ಸಿಂಗೇನ ಅಗ್ರಹಾರದ ಸಗಟು ಹಣ್ಣಿನ ಮಾರುಕಟ್ಟೆಯನ್ನು ಜುಲೈ ಒಂದರಿಂದ ಬಂದ್ ಮಾಡಲು ನಿರ್ಧರಿಸಲಾಗಿದೆ.
ನಗರದಲ್ಲಿ ಕೊರೊನಾ ಸೋಂಕು ತೀವ್ರವಾಗಿ ಹಬ್ಬಿರುವ ಹಿನ್ನಲೆಯಲ್ಲಿ ಸಿಂಗೇನ ಅಗ್ರಹಾರದ ಸಗಟು ಹಣ್ಣಿನ ಮಾರುಕಟ್ಟೆಯನ್ನು ಜುಲೈ ಒಂದರಿಂದ ಸ್ಥಗಿತ ಮಾಡಲು ನಿರ್ಧರಿಸಲಾಗಿದೆ.
ನಗರಕ್ಕೆ ಹಣ್ಣುಗಳನ್ನು ಒದಗಿಸುತ್ತಿರುವ ಸಿಂಗೇನ ಅಗ್ರಹಾರದ ಸಗಟು ಹಣ್ಣಿನ ಮಾರುಕಟ್ಟೆಯನ್ನು ಸ್ಥಗಿತಗೊಳಿಸುವ ಹಿನ್ನಲೆಯಲ್ಲಿ ಮುಂದಿನ ವಾರ ನಗರದಲ್ಲಿ ಹಣ್ಣುಗಳ ಪೂರೈಕೆಯಯಲ್ಲಿ ವ್ಯತ್ಯಯ ಉಂಟಾಗಲಿದೆ.
ದಿ ಬೆಂಗಳೂರು ಫ್ರೂಟ್ಸ್ ಕಮಿಷನ್ ಏಜೆಂಟ್ಸ್ ಅಸೋಸಿಯೇಷನ್ ನ ಗೌರವ ಕಾರ್ಯದರ್ಶಿ ವಿ. ಸಿದ್ದಾರೆಡ್ಡಿ ಅವರು ಸಿಂಗೇನ ಅಗ್ರಹಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ವರ್ಗದ ಜನರ ಹಿತದೃಷ್ಟಿಯಿಂದ ಮಾರುಕಟ್ಟೆಯಲ್ಲಿನ ಎಲ್ಲಾ ಮಂಡಿ ಮಾಲೀಕರು ಸ್ವಯಂ ಪ್ರೇರಿತವಾಗಿ ಕೆಲವು ದಿನಗಳ ಕಾಲ ಮಾರಾಟ ವಹಿವಾಟು ಸ್ಥಗಿತಗೊಳಿಸಲು ನಿರ್ಧರಿಸಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.