Daler Mehndi: ಸಿಂಗರ್ ದಲೇರ್ ಮೆಹಂದಿಗೆ ಜೈಲು ಶಿಕ್ಷೆ… ಏನಿದು ಪ್ರಕರಣ..?
ಖ್ಯಾತ ಗಾಯಕ ದಲೇರ್ ಮೆಹಂದಿಗೆ ನ್ಯಾಯಾಲಯ ಮತ್ತೊಮ್ಮೆ ಜೈಲು ಶಿಕ್ಷೆ ವಿಧಿಸಿದೆ.
2003ರ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಆರೋಪಿಗಳಾದ ದಲೇರ್ ಮೆಹಂದಿ ಮತ್ತು ಅವರ ಸಹೋದರನನ್ನು ಪಟಿಯಾಲ ಜಿಲ್ಲಾ ನ್ಯಾಯಾಲಯವು ದೋಷಿಗಳೆಂದು ಘೋಷಿಸಿದೆ.
ಅಲ್ಲದೆ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
![singer-daler-mehndi-sentenced-jail-2-years saaksha tv](http://saakshatv.com/wp-content/uploads/2022/07/daer-300x231.jpg)
ದಲೇರ್ ಮೆಹಂದಿ ಮತ್ತು ಅವರ ಸಹೋದರ ಶಂಶೇರ್ ಸಿಂಗ್ ಮ್ಯೂಜಿಕಲ್ ಟ್ರೂಪ್ ಹೆಸರಿನಲ್ಲಿ ಕೆಲವರನ್ನು ಅಕ್ರಮವಾಗಿ ವಿದೇಶಕ್ಕೆ ಸಾಗಿಸುತ್ತಿದ್ದಾರೆ ಎಂದು 19 ವರ್ಷಗಳ ಹಿಂದೆಯೇ ಎಫ್ಐಆರ್ ದಾಖಲಾಗಿತ್ತು.
1998 ಮತ್ತು 1999 ರ ವರ್ಷಗಳಲ್ಲಿ, ಇವರು ಸುಮಾರು ಹತ್ತು ಜನರನ್ನು ಅಕ್ರಮವಾಗಿ ಅಮೆರಿಕದಲ್ಲಿ ಬಿಟ್ಟಿದ್ದಾರೆಂದು ಇದಕ್ಕಾಗಿ ದೊಡ್ಡ ಮೊತ್ತದ ಹಣವನ್ನು ಪಡೆದಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಈ ಹಿನ್ನೆಲೆಯಲ್ಲಿ ದಲೇರ್ ವಿರುದ್ಧ 35 ಪ್ರಕರಣಗಳು ದಾಖಲಾಗಿವೆ. ಪ್ರಕರಣದ ತನಿಖೆ ನಡೆಸಿದ ನ್ಯಾಯಾಲಯ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.