ಕನ್ನಡ ಕಲಿಯುತ್ತೇನೆ… ಚುನಾವಣಾ ಪ್ರಚಾರದಲ್ಲಿ ಮಾತು ಕೊಟ್ಟ  ಮಂಗ್ಲಿ..!

1 min read

ಕನ್ನಡ ಕಲಿಯುತ್ತೇನೆ… ಚುನಾವಣಾ ಪ್ರಚಾರದಲ್ಲಿ ಮಾತು ಕೊಟ್ಟ  ಮಂಗ್ಲಿ..!

ರಾಯಚೂರು : ಬಂಜಾರಾ ಶೈಲಿಯ, ಜಾನಪದ ಸೊಗಡಿನ , ವಿಭಿನ್ನ ಧ್ವನಿಯ ಮೂಲಕ ಎಲ್ಲರ ಮನಸೆಳೆದಿರುವ ಗಾಯಕಿ ಮಂಗ್ಲೀ ರಾತ್ರೋರಾತ್ರಿ ಲಕ್ಷಾಂತರ ಫ್ಯಾನ್ಸ್ ಗಳನ್ನ ಸಂಪಾದನೆ ಮಾಡಿದ್ರು ಎಂದ್ರೆ ತಪ್ಪಾಗೋದಿಲ್ಲ. ರಾಬರ್ಟ್ ಸಿನಿಮಾದ ತೆಲುಗು ವರ್ಷನ್ ನ ಕಣ್ಣೇ ಅದಿರಿಂದಿ ಹಾಡು ಒಂದಕ್ಕೆ ಮಂಗ್ಲೀ ಫೇಮ್ ಗಗನಕ್ಕೇರಿದೆ. ಕನ್ನಡದಲ್ಲಿ ಅಪಾರ ಪ್ರಮಾಣದ ಅಭಿಮಾನಿಗಳನ್ನ ಮಂಗ್ಲಿ ಸಂಪಾದನೆ ಮಾಡಿದ್ದಾರೆ. ಅದ್ರಲ್ಲೂ ರಾಬರ್ಟ್ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಸ್ಟೇಜ್ ಮೇಲೆ ಮಂಗ್ಲಿ ಹಾಡಿದ ಹಾಡು ನಿಜಕ್ಕೂ ಎಲ್ಲರನ್ನ ಮೋಡಿ ಮಾಡಿದೆ. ಒಂದೇ ಒಂದು ಸಾಂಗ್ ನ ಮೂಲಕ ಬಹುತೇಕ ಕನ್ನಡಿಗರಿಗೆ ಯಾರೂ ಅಂತಾನೆ ಗೊತ್ತಿರದ ಮಂಗ್ಲಿ ಸೂಪರ್ ಹಿಟ್ ಆಗಿ ಕನ್ನಡಾಭಿಮಾನಿಗಳ ಮನದಲ್ಲಿ ಜಾಗ ಗಿಟ್ಟಿಸಿಕೊಂಡಿದ್ದಾರೆ.

ಆದ್ರೆ ಮಂಗ್ಲಿಗೆ ಕರ್ನಾಟಕದಲ್ಲಿರುವ ಇದೇ ಕ್ರೇಜ್ ಗಮನಿಸಿರುವ ರಾಜಕಾರಣಿಗಳು ಈಗ ಸ್ಟಾರ್ ಪ್ರಚಾರಕಿಯಾಗಿ ಮಂಗ್ಲಿಯನ್ನೇ ಆಹ್ವಾನಿಸಲು ಆರಂಭಿಸಿದ್ದಾರೆ. ಅದ್ರಂತೆ ರಾಯಚೂರಿನ ಮಸ್ಕಿ  ಉಪ-ಚುನಾವಣೆಗೂ ಬಿಜೆಪಿ ಪರ ಪ್ರಚಾರಕ್ಕೆ ಮಂಗ್ಲಿ ಅವರನ್ನ ಕರೆಸಲಾಗಿತ್ತು. ಈ ವೇಳೆ ಜನರು ಮಂಗ್ಲಿಯವರನ್ನ ಕಂಡು ಫುಲ್ ಖುಷ್ ಆಗಿದ್ದರು. ಮುಖ್ಯವಾಗಿ ಬಂಜಾರ ಸಮುದಾಯದ ಮತಗಳನ್ನ ಸೆಳೆಯಲು ಅದೇ ಸಮುದಾಯದವರಾದ ಮಂಗ್ಲಿಯನ್ನ ಕರೆಸಲಾಗಿತ್ತು ಅನ್ನೋದು ಗಮನಾರ್ಹ.

ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಪರವಾಗಿ ಪ್ರಚಾರಕ್ಕೆ ಆಗಮಿಸಿದ್ದ ಮಂಗ್ಲಿ ಅವರು ಅಡವಿಭಾವಿ ತಾಂಡಾದಲ್ಲಿ ಭರ್ಜರಿ ಪ್ರಚಾರ ನಡೆಸಿದರು. ಮಂಗ್ಲಿ ಅವರು ಗ್ರಾಮ ಪ್ರವೇಶಿಸುತ್ತಿದ್ದಂತೆ ಅವರ ಕಾರಿನ ಮೇಲೆ ಹೂಗಳನ್ನು ಚೆಲ್ಲಿ, ಪಟಾಕಿ ಹೊಡೆದು ಸ್ವಾಗತಿಸಲಾಯಿತು. ಮಂಗ್ಲಿ ಅವರನ್ನು ನೋಡಲು ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರು.

ಪ್ರಚಾರ ರ್ಯಾಲಿಯಲ್ಲಿ ಭಂಜಾರ ಸಮುದಾಯದ ಮಾತೃಭಾಷೆಯಲ್ಲಿಯೇ ಮಾತನಾಡಿದ ಗಾಯಕಿ ಮಂಗ್ಲಿ ಪ್ರತಾಪ್ ಗೌಡ ಪಾಟೀಲ್‌ ಗೆ ಮತ ಹಾಕುವಂತೆ ಮನವಿ ಮಾಡಿದರು. ಕನಿಷ್ಟ 25,000 ಮತಗಳ ಅಂತರದಿಂದ ಜಯಶೀಲರನ್ನಾಗಿಸುವಂತೆ ಕೇಳಿಕೊಂಡರು. ಕನ್ನಡದಲ್ಲಿಯೂ ಒಂದೆರಡು ಮಾತುಗಳನ್ನಾಡಿದ ಮಂಗ್ಲಿ, ಕನ್ನಡ ಕಲಿಯುವುದು ಬಹು ಸುಲಭ ಆದಷ್ಟು ಬೇಗ ಕಲಿಯುತ್ತೇನೆ ಎಂದಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd