ಚೆನ್ನೈ: ಸೆಕ್ಸ್ ಗೆ ಕರೆಸಿಕೊಂಡು ಹಣ ಕೇಳಿದ್ದಕ್ಕೆ ಪಾಪಿಯೊಬ್ಬ ಸೆಕ್ಸ್ ವರ್ಕರ್ ಕೊಲೆ ಮಾಡಿರುವ ಘಟನೆ ನಡೆದಿದೆ.
ರಸ್ತೆ ಬದಿ ಸೂಟ್ಕೇಸ್ನಲ್ಲಿ ಮಹಿಳೆಯ ತುಂಡರಿಸಿದ ದೇಹದ ಭಾಗಗಳು ಪತ್ತೆಯಾಗಿರುವ ಘಟನೆ ಚೆನ್ನೈ (Chennai) ತೊರೈಪಾಕ್ಕಂನಲ್ಲಿ ನಡೆದಿತ್ತು. ಇದನ್ನು ಗಮನಿಸಿದ್ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಧಾವಿಸಿದ ಪೊಲೀಸರು (Police), ಮಹಿಳೆಯ ಮೊಬೈಲ್ನ ಕರೆಯ ದಾಖಲೆ ಹಾಗೂ ಸೂಟ್ ಕೇಸ್ ಪತ್ತೆಯಾದ ಪ್ರದೇಶದ ಸುತ್ತ ಮುತ್ತಲಿನ ಸಿಸಿ ಟಿವಿ ಪರಿಶೀಲನೆ ನಡೆಸಿ, ಅದೇ ಪ್ರದೇಶದ ನಿವಾಸಿಯಾಗಿರುವ ಮಣಿಕಂದನ್ (22) ಎಂಬಾತನನ್ನು ಬಂಧಿಸಿದ್ದಾರೆ.
ಕೊಲೆಯಾಗಿರುವ ಮಹಿಳೆ ಚೆನ್ನೈನ ಮಾಧವರಂ ಹತ್ತಿರದ ಪೊನ್ನಿಯಮ್ಮನ್ ಮೇಡು ನಿವಾಸಿಯಾಗಿದ್ದು, ಆಕೆ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಬೇರೆ ವ್ಯಕ್ತಿಯ ಮೂಲಕ ಮಹಿಳೆಯ ಸ್ನೇಹ ಬೆಳೆಸಿದ್ದ ಮಣಿಕಂದನ್, ಆಕೆಯನ್ನು ಸೆಕ್ಸ್ಗಾಗಿ ಮನೆಗೆ ಕರೆಸಿಕೊಂಡಿದ್ದ. ನಂತರ ಹಣದ ವಿಚಾರಕ್ಕೆ ಅವರಿಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಕೊಲೆ ಮಾಡಿದ್ದ ಎನ್ನಲಾಗಿದೆ.