ರಿಲಾಯನ್ಸ್ ಜಿಯೋ ಗ್ರಾಹಕರಿಗೆ ಖುಷಿ ಸುದ್ದಿಯೊಂದನ್ನು ನೀಡಿದ್ದು, ಕೆಲ ದೇವಾಲಯಗಳಲ್ಲಿ ನಡೆಯುವ ಆರತಿಯನ್ನು ಜನರು ಮನೆಯಲ್ಲಿ ಕುಳಿತು ನೋಡಬಹುದಾಗಿದೆ. ಇದಕ್ಕಾಗಿ ಜಿಯೋ ಶೀಘ್ರದಲ್ಲೇ ಡಿಜಿಟಲ್ ಪ್ಲಾಟ್‌ಫಾರ್ಮ್ ಸಿದ್ಧಪಡಿಸಲಿದೆ. ಬದ್ರಿನಾಥ್, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿ ಸೇರಿದಂತೆ ಧಾರ್ಮಿಕ ಸ್ಥಳಗಳ ದರ್ಶನ ಭಕ್ತರಿಗೆ ಮನೆಯಲ್ಲೇ ಸಿಗಲಿದೆ. ಪ್ರತಿವರ್ಷ ಲಕ್ಷಾಂತರ ಭಕ್ತರು ಉತ್ತರಾಖಂಡಕ್ಕೆ ಬರುತ್ತಾರೆ. ಆದರೆ ಚಾರ್ ಧಾಮ್ ಯಾತ್ರೆ ಅನೇಕರಿಗೆ ಸಾಧ್ಯವಿಲ್ಲ. ಅಂತಹ ಭಕ್ತರಿಗಾಗಿ ರಾಜ್ಯ ಸರ್ಕಾರ ಜಿಯೋ ಸಹಾಯದಿಂದ ಆನ್‌ಲೈನ್ ವ್ಯವಸ್ಥೆಗಳನ್ನು ಮಾಡ್ತಿದೆ. ಜಿಯೋ ನೇರ ಪ್ರಸಾರದಿಂದಾಗಿ ಪ್ರಪಂಚದಾದ್ಯಂತ ಇರುವ ಭಕ್ತರಿಗೆ ದೇವರ ದರ್ಶನ ಸಿಗಲಿದೆ ಎಂದು ಉತ್ತರಾಖಂಡ ಸರ್ಕಾರ ಖುಷಿ ವ್ಯಕ್ತಪಡಿಸಿದೆ.
ರಾಜ್ಯದಲ್ಲಿ ತಾಪಮಾನ ಕುಸಿತ; ಚಳಿಯೋ ಚಳಿ!!
ಭಾರೀ ಮಳೆಯಿಂದಾಗಿ ತತ್ತರಿಸಿರುವ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ. ರಾಜ್ಯಾದ್ಯಂತ ತಾಪಮಾನ ಕುಸಿತವಾಗಿದ್ದು, ಬರುವ ಕೆಲವು ದಿನಗಳಲ್ಲಿ ಚಳಿ ಹೆಚ್ಚಾಗುವ ಸಾಧ್ಯತೆ ಇದೆ. ಬೆಂಗಳೂರು ಸೇರಿದಂತೆ ಹಲವು...