ಆಗಸ್ಟ್ 5ರಂದು ವಿಶ್ವಾದ್ಯಂತ ರಿಲೀಸ್ ಆದ ‘ಸಿತಾರಾಮಂ’ ಸಿನಿಮಾ ಸಾಕಷ್ಟು ವಿವಾದ , ವಿರೋಧಗಳ ನಂತರವೂ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ತಿದೆ..
ಎರೆಡು ಕಾಲಘಟ್ಟದಲ್ಲಿ ನಡೆಯುವ ಸಿನಿಮಾದಲ್ಲಿ ಭಾರತೀಯ ಸೇನೆ , ಪಾಕಿಸ್ತಾನ ಸೇನೆಯನ್ನ ತೋರಿಸಲಾಗಿದೆ.. ಉಗ್ರರರ ಸಂಚುಗಳು , ಪಾಕ್ ಆಕ್ರಮಿತ ಕಾಶ್ಮೀರದ 1965 ರ ಹಾಗೂ 1985ರ ಕಾಲಘಟ್ಟದ ಸ್ಥಿತಿಗತಿಗಳ ಬಗ್ಗೆ ತೋರಿಸಲಾಗಿದೆ..
ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಪವರ್ ಫುಲ್ ಪಾತ್ರದಲ್ಲಿ ಒಂದು ರೀತಿ ಸೇತುಬಂಧುವಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ಧಾರೆ..
ಅವರ ಅಫ್ರೀನಾ ಪಾತ್ರಕ್ಕೆ ಅದರದ್ದೇ ಆದ ಗತ್ತಿದೆ.. ಇನ್ನೂ ದುಲ್ಕರ್ ಸಲ್ಮಾನ್ ಅವರ ಅಭಿನಯದ ಬಗ್ಗೆ ಹೇಳೋದೇ ಬೇಡ.. ಮಲಯಾಳಂನ ಸ್ಟಾರ್ ನಟ ದುಲ್ಕರ್ ವಿಭಿನ್ನ ಹಾಗೂ ಒಂದು ತೂಕವುಳ್ಳ ಪ್ರಾಜೆಕ್ಟ್ ಗಳನ್ನೇ ಆಯ್ಕೆ ಮಾಡ್ತಾರೆ.. ಅಂತೆಯೇ ಈ ಸಿನಿಮಾದ ಕಂಟೆಂಟ್ ನಿಜಕ್ಕೂ ಉತ್ತಮವಾಗಿದೆ..
ಇನ್ನೂ ಮೃಣಾಲ್ ಠಾಕೂರ್ ಸೀತಾ ಪಾತ್ರಕ್ಕೆ ಅಚ್ಚುಕಟ್ಟಾಗಿ ಜೀವ ತುಂಬಿದ್ದಾರೆ.. ಅವರ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ… ಜೊತೆಗೆ ಅವರು ನೃತ್ಯದ ಮೂಲಕವೂ ಅಭಿಮಾನಿಗಳನ್ನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ..,.
ಅಂದ್ಹಾಗೆ ಸೀತಾ ರಾಮಂ ಸಿನಿಮಾ ಕಳೆದ 50 ದಿನಗಳಲ್ಲಿ ಬಾಕ್ಸ್ ಆಫೀಸ್ ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾವಾಗಿದೆ..
ಹನು ರಾಘವಪುಡಿ ಸೀತಾ ರಾಮಂ ಚಿತ್ರವನ್ನು ನಿರ್ದೇಶಿಸಿದ್ದು, ವೈಜಯಂತಿ ಮೂವಿ ನಿರ್ಮಾಣ ಮಾಡಿದ್ದಾರೆ. ಭಾನುವಾರದ ಸೀತಾ ರಾಮಂ ಕಲೆಕ್ಷನ್ US ಬಾಕ್ಸ್ ಆಫೀಸ್ನಲ್ಲಿ, ಶನಿವಾರದ ಕಲೆಕ್ಷನ್ ಗಿಂತಲೂ ಉತ್ತಮವಾಗಿದೆ. ಈಗಾಗಲೇ 400K $ ದಾಟಿದೆ. ಭಾನುವಾರ ಸೀತಾ ರಾಮಂ ಅರ್ಧ ಮಿಲಿಯನ್ ಡಾಲರ್ ಗಡಿ ಮುಟ್ಟಲಿದೆ ಎಂದು ವ್ಯಾಪಾರಿಗಳು ನಿರೀಕ್ಷಿಸಿದ್ದರು.. ಅಂತೆಯೇ ಇದೀಗ ಅರ್ಧ ಮಿಲಿಯನ್ ಡಾಲರ್ ಗಳಿಸುವಲ್ಲಿ ಸಿನಿಮಾ ಯಶಸ್ವಿಯಾಗಿದೆ..
ಕಳೆದ 50 ದಿನಗಳಲ್ಲಿ, ಯಾವುದೇ ಭಾರತೀಯ ಚಿತ್ರ USA ನಲ್ಲಿ 200K ದಾಟಲಿಲ್ಲ ಆದರೆ ದುಲ್ಕರ್ ಸಲ್ಮಾನ್ ಅಭಿನಯದ ಸೀತಾ ರಾಮಂ ಶುಕ್ರವಾರ ಅಂದ್ರೆ ರಿಲೀಸ್ ಆದ ಮೊದಲನೇ ದಿನವೇ ಕಲೆಕ್ಷನ್ ಅಲ್ಲಿ ಈ ರೆಕಾರ್ಡ್ ಮಾಡಿದೆ..
ಈ ಮೂಲಕ ಒಳ್ಳೆಯ ಕಂಟೆಂಟ್ ಸಿನಿಮಾಗೆ ಸೋಲಾಗುವುದಿಲ್ಲ.. ಚಿತ್ರಪ್ರೇಮಿಗಳು ಸದಾ ಉತ್ತಮ ಕಂಟೆಂಟ್ ಇರುವ ಸಿನಿಮಾಗಳನ್ನ ಪ್ರೋತ್ಸಾಹಿಸುತ್ತಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.