ಟ್ಯಾಂಕರ್ ನಿಂದ ವಿಷಾನೀಲ ಸೋರಿಕೆ 6 ಮಂದಿ ಸಾವು
ಗುಜರಾತ್ ರಾಜ್ಯದ ಸೂರತ್ ನ ಫ್ಯಾಕ್ಟರಿಯಲ್ಲಿ ಗ್ಯಾಸ್ ಲೀಕ್ ಆಗಿ 6 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. 20ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದು ನಗರದ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಸ್ಪತ್ರೆಯ ಪ್ರಭಾರಿ ಸೂಪರಿಂಟೆಂಡೆಂಟ್ ಡಾ ಓಂಕಾರ್ ಚೌಧರಿ ಹೇಳಿದ್ದಾರೆ.
ರಾಸಾಯನಿಕ ತುಂಬಿದ ಟ್ಯಾಂಕರ್ ಪ್ರಿಂಟಿಂಗ್ ಮಿಲ್ ಬಳಿ ನಿಲ್ಲಿಸಿದ್ದಾಗ ಆಕಸ್ಮಿಕವಾಗಿ ಡ್ರೈನೇಜ್ ಪೈಪ್ ನಿಂದ ಅನಿಲ ಸೋರಿಕೆಯಾಗಿದೆ, ಸುತ್ತಲಿನ ಜನಕ್ಕೆ ಏನಾಗುತ್ತಿದೆ ಎನ್ನುವ ಅರಿವಾಗುವುದರೊಳಗೆ ವಿಷಕಾರಿ ಅನಿಲ ಗಾಳಿಯೊಂದಿಗೆ ಸೇರಿ ಹೋಗಿ ಜನರ ಜೀವಕ್ಕೆ ಅಪಾಯ ಎಸೆಗಿದೆ.
ಸ್ಥಳಿಯರ ಪ್ರಕಾರ ಪೊಲೀಸರು ಮತ್ತು ಅಧಿಕಾರಿಗಳು ಸ್ಥಳದಲ್ಲಿದ್ದು ಇನ್ನೂ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.
Gujarat: Six people died and 20 others were admitted to the civil hospital after gas leakage at a company in Sachin GIDC area of Surat early morning today, says hospital's In Charge Superintendent, Dr Omkar Chaudhary pic.twitter.com/HVnH9CZHYl
— ANI (@ANI) January 6, 2022