ಆರು ಎಸೆತ.. ಆರು ಸಿಕ್ಸರ್… ಈ ಸಾಧನೆ ಮಾಡಿದ 9 ಬ್ಯಾಟ್ಸ್ ಮೆನ್ ಗಳು ಇವ್ರೇ..!
six sixes in an over in top level domestic or international cricket.
ವಿಶ್ವ ಕ್ರಿಕೆಟ್ ನಲ್ಲಿ ಯಾವುದು ಅಸಾಧ್ಯವಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಆಮೆಗತಿಯಲ್ಲಿ ಸಾಗುತ್ತಿದ್ದ ಕ್ರಿಕೆಟ್ ಆಟ ಈಗ ಕ್ಷಣ ಕ್ಷಣಕ್ಕೂ ರೋಚಕತೆಯನ್ನು ಪಡೆದುಕೊಳ್ಳುತ್ತಿದೆ.
ಬ್ಯಾಟ್ ಮತ್ತು ಚೆಂಡಿನ ಸಮರದಲ್ಲಿ ಬ್ಯಾಟ್ಸ್ ಮೆನ್ ಮತ್ತು ಬೌಲರ್ ಗಳ ಕಾದಾಟವನ್ನು ನೋಡುವುದೇ ಚೆಂದ.
ಬೌಲರ್ ನ ಬೆಂಕಿಯ ಎಸೆತಗಳೇ ಇರಲಿ, ಗೂಗ್ಲಿ ಎಸೆತಗಳೇ ಇರಲಿ, ಬುಗರಿ ಎಸೆತಗಳೇ ಇರಲಿ, ಬ್ಯಾಟ್ಸ್ ಮೆನ್ ತನ್ನ ಬುದ್ಧಿವಂತಿಕೆ, ಶಕ್ತಿಯಿಂದ ರನ್ ದಾಖಲಿಸುತ್ತಾನೆ. ಬ್ಯಾಟ್ಸ್ ಮೆನ್ ಗುರಿ ರನ್ ಗಳಿಸುವುದಾದ್ರೆ, ಬೌಲರ್ ನದ್ದು ವಿಕೆಟ್ ಉರುಳಿಸುವುದು. ಆದ್ರೂ ಕ್ರಿಕೆಟ್ ಆಟ ಈಗ ಬ್ಯಾಟ್ಸ್ ಮೆನ್ ಗಳ ಆಟವಾಗಿದೆ.
ಇನ್ನು ಇಲ್ಲಿ ಬೌಂಡರಿ ಮತ್ತು ಸಿಕ್ಸರ್ ದಾಖಲಿಸುವುದು ಅಷ್ಟೊಂದು ಕಷ್ಟವೇನು ಇಲ್ಲ. ಆದ್ರೆ ಆರು ಎಸೆತಗಳನ್ನು ಸತತವಾಗಿ ಆರು ಸಿಕ್ಸರ್ ಗಳು ಸಿಡಿಸುವುದು ಸುಲಭದ ಸಂಗತಿಯಲ್ಲ.
ಈ ಹಿಂದೆ ಅಪರೂಪಕ್ಕೆ ಈ ರೀತಿಯ ದಾಖಲೆಗಳು ಬರುತ್ತಿದ್ದವು. ಇದೀಗ ಆರು ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸುವುದು ಮಾಮೂಲಿಯಾಗುತ್ತಿದೆ.
ಮೊನ್ನೆ ಮೊನ್ನೆ ಕಿರಾನ್ ಪೊಲಾರ್ಡ್ ಶ್ರೀಲಂಕಾ ವಿರುದ್ಧ ಆರು ಸಿಕ್ಸರ್ ಗಳನ್ನು ದಾಖಲಿಸಿದ್ದರು. ಇದೀಗ ಲಂಕಾದ ತಿಸರಾ ಪೆರೆರಾ ಅವರು ದೇಸಿ ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡಿದ್ದಾರೆ.
ಅಂದ ಹಾಗೇ ಈ ಹಿಂದೆ ಗ್ಯಾರಿ ಸೋಬರ್ಸ್ ಮತ್ತು ರವಿಶಾಸ್ತ್ರಿ ದೇಶಿ ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡಿದ್ದರು.
ಬಳಿಕ ಏಕದಿನ ಕ್ರಿಕೆಟ್ ನಲ್ಲಿ ಹರ್ಷೆಲ್ ಗಿಬ್ಸ್ ಮತ್ತು ಟಿ-ಟ್ವೆಂಟಿಯಲ್ಲಿ ಯುವರಾಜ್ ಸಿಂಗ್ ಹಾಗೂ ಏಕದಿನ ಕ್ರಿಕೆಟ್ ನಲ್ಲಿ ಕಿರಾನ್ ಪೊಲಾರ್ಡ್ ಈ ಸಾಧನೆ ಮಾಡಿದ್ದರು.
ಒಟ್ಟು 9 ಮಂದಿ ಆಟಗಾರರು ಆರು ಎಸೆತಗಳನ್ನು ಸಿಕ್ಸರ್ ಆಗಿ ಮಾರ್ಪಡು ಮಾಡಿದ್ದರು. ಇನ್ನುಳಿದ ಆರು ಮಂದಿ ದೇಸಿ ಕ್ರಿಕೆಟ್ ನಲ್ಲಿ ಮಾಡಿದ್ದಾರೆ.
ಆಗಸ್ಟ್ 31, 1968
ಗ್ಯಾರಿಫೀಲ್ಡ್ ಸೋಬರ್ಸ್ – ನಾಟಿಂಗ್ ಹ್ಯಾಮ್ ಶೈರ್ ಪರ ಆಡಿದ್ದ ಸೋಬರ್ಸ್ ಗ್ಲಾಮೊರ್ಗಾನ್ ತಂಡದ ಮಾಲ್ಕಮ್ ನಾಶ್ ಅವರ ಆರು ಎಸೆತಗಳಿಗೆ ಸತತ ಆರು ಸಿಕ್ಸರ್. ಈ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟ್ಸ್ ಮೆನ್
————————-
ಜನವರಿ 19-1985
ರವಿಶಾಸ್ತ್ರಿ – ಬರೋಡಾ ವಿರುದ್ಧ ತಿಲಕ್ ರಾಜ್ ಅವರ ಆರು ಎಸೆತಗಳಿಗೆ ಸತತ ಆರು ಸಿಕ್ಸರ್ – ಈ ಸಾಧನೆ ಮಾಡಿದ ವಿಶ್ವದ ಎರಡನೇ ಬ್ಯಾಟ್ಸ್ ಮೆನ್
——————–
ಮಾರ್ಚ್ 16, 2007 ಏಕದಿನ ವಿಶ್ವಕಪ್
ಹರ್ಷೆಲ್ ಗಿಬ್ಸ್ – ನೆದರ್ಲೆಂಡ್ ವಿರುದ್ಧ – ಏಕದಿನ ಪಂದ್ಯದಲ್ಲಿ ಗಿಬ್ಸ್ ಡಾನ್ ವಾನ್ ಬುಂಗೆ ಅವರ ಆರು ಎಸೆತಗಳನ್ನು ಸತತವಾಗಿ ಸಿಕ್ಸರ್ ಬಾರಿಸಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡಿದ್ದ ಮೊದಲ ಬ್ಯಾಟ್ಸ್ ಮೆನ್ .ಒಟ್ಟಾರೆಯಾಗಿ ಮೂರನೇ ಆಟಗಾರ.
——————-
ಸೆಪ್ಟಂಬರ್ 19, 2007ರ ಟಿ-ಟ್ವೆಂಟಿ ವಿಶ್ವಕಪ್-
ಯುವರಾಜ್ ಸಿಂಗ್ – 2007ರ ಚೊಚ್ಚಲ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ವಿರುದ್ಧ ಯುವರಾಜ್ ಸಿಂಗ್ ಸ್ಟುವರ್ಟ್ ಬ್ರಾಡ್ ಅವರ ಆರು ಎಸೆತಗಳನ್ನು ಸಿಕ್ಸರ್ ಗೆ ಅಟ್ಟಿದ್ದರು. ಟಿ-ಟ್ವೆಂಟಿ ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ್ದ ಮೊದಲ ಆಟಗಾರ ಹಾಗೂ ವಿಶ್ವದ ನಾಲ್ಕನೇ ಬ್ಯಾಟ್ಸ್ ಮೆನ್
———————-
ಜುಲೈ 2017- ದೇಸಿ ಟಿ-ಟ್ವೆಂಟಿ ಕ್ರಿಕೆಟ್
ವಾರ್ಕ್ಸ್ಟೈರ್ ಶೈರ್ ತಂಡದ ರಾಸ್ ವೈಟ್ಲಿ ಅವರು ಯಾರ್ಕ್ ಶೈರ್ ನ ಸ್ಪಿನ್ನರ್ ಕಾರ್ಲ್ ಕಾರ್ವೆರ್ ಅವರ ಆರು ಎಸೆತಗಳನ್ನು ಸಿಕ್ಸರ್ ಆಗಿ ಪರಿವರ್ತಿಸಿದ್ದರು. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ ಐದನೇ ಬ್ಯಾಟ್ಸ್ ಮೆನ್ ಆಗಿ ಹೊರಹೊಮ್ಮಿದ್ದರು.
——————–
ಅಕ್ಟೋಬರ್ 14, 2018 –
ಅಫಘಾನಿಸ್ತಾನ ಪ್ರೀಮಿಯರ್ ಲೀಗ್ -ಟಿ-20 ಕ್ರಿಕೆಟ್
ಹಝ್ರುತುಲ್ಲಾಹ್ ಝಾಝೈ ಅವರು ಅಫಘಾನಿಸ್ತಾನ ಪ್ರೀಮಿಯರ್ ಲೀಗ್ ನಲ್ಲಿ ಅಬ್ದುಲ್ಲಾ ಮಝಾರಿ ಅವರ ಆರು ಎಸೆತಗಳನ್ನು ಸಿಕ್ಸರ್ ಬಾರಿಸಿದ್ದರು. ಈ ಸಾಧನೆ ಮಾಡಿದ ವಿಶ್ವದ ಆರನೇ ಆಟಗಾರ.
———————
ಜನವರಿ 5, 2020 – ನ್ಯೂಜಿಲೆಂಡ್ ದೇಸಿ ಟಿ-20 ಕ್ರಿಕೆಟ್ ಟೂರ್ನಿ
ಲಿಯೋ ಕಾರ್ಟೆರ್ -ನ್ಯೂಜಿಲೆಂಡ್ ನ ಸೂಪರ್ ಸ್ಮಾಶ್ ಕ್ರಿಕೆಟ್ ಟೂರ್ನಿಯಲ್ಲಿ ಕ್ಯಾಂಟರ್ ಬರ್ರಿ ಕಿಂಗ್ಸ್ ತಂಡದ ಪರ ಲಿಯೋ ಕಾರ್ಟೆರ್ ಅವರು ನಾರ್ಥನ್ ಡಿಸ್ಟ್ರೀಕ್ಟ್ಸ್ ತಂಡದ ಆಂಟನ್ ಡೆವಿಸಿಚ್ ಅವರ ಆರು ಎಸೆತಗಳನ್ನು ಸಿಕ್ಸರ್ ಗಟ್ಟಿದ್ದರು. ಈ ಮೂಲಕ ಟಿ-ಟ್ವೆಂಟಿಯಲ್ಲಿ ಈ ಸಾಧನೆ ಮಾಡಿದ ನಾಲ್ಕನೇ ಆಟಗಾರ ಹಾಗೂ ಒಟ್ಟಾರೆಯಾಗಿ ವಿಶ್ವದ ಏಳನೇ ಆಟಗಾರನಾಗಿದ್ದಾರೆ.
======================
ಮಾರ್ಚ್ 17, 2021 -ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್
ಕಿರಾನ್ ಪೊಲಾರ್ಡ್ – ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನ ಕಿರಾನ್ ಪೊಲಾರ್ಡ್ ಅವರು ಧನಂಜಯ ಅವರ ಆರು ಎಸೆತಗಳನ್ನು ಸಿಕ್ಸರ್ ಆಗಿ ಪರಿವರ್ತಿಸಿದ್ದರು. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡಿದ ಮೂರನೇ ಆಟಗಾರ. ವಿಶ್ವದ ಎಂಟನೇ ಆಟಗಾರನಾಗಿದ್ದಾರೆ.
————————-
ಮಾರ್ಚ್ 29, 2021 – ಶ್ರೀಲಂಕಾದ ದೇಸಿ ಕ್ರಿಕೆಟ್ ಟೂರ್ನಿ
ಲಂಕಾ ಆರ್ಮಿ ತಂಡದ ತಿಸೆರಾ ಪಿರೇರಾ ಅವರು ಬ್ಲೂಮ್ ಫೀಲ್ಡ್ ಕ್ರಿಕೆಟ್ ಮತ್ತು ಅಥ್ಲೆಟಿಕ್ಸ್ ಕ್ಲಬ್ ತಂಡದ ದಿಲ್ಷಾನ್ ಕುರೇಯ್ ಅವರ ಆರು ಎಸೆತಗಳನ್ನು ಸಿಕ್ಸರ್ ಆಗಿ ದಾಖಲಿಸಿದ್ದರು. ಈ ಮೂಲಕ ಈ ಸಾಧನೆ ಮಾಡಿದ್ದ ಪಿರೇರಾ ಅವರು ವಿಶ್ವದ 9ನೇ ಆಟಗಾರನಾಗಿದ್ದಾರೆ. –