ಸ್ಕೇಟಿಂಗ್ ಚಾಂಪಿಯನ್ ಆದ ಯುವಿ ಕ್ರಿಕೆಟರ್ ಆಗಿದ್ದೇಗೆ..?
”ಜೀವನದಲ್ಲಿ ಹೇಗೆ ಹೋರಾಡಬೇಕು ಎಂಬೊದನ್ನ ಕ್ರಿಕೆಟ್ ಕಲಿಸಿದೆ. ಹೀಗಾಗಿಯೇ ನಾನು ಎಂದೂ ವಿಶ್ವಾಸ ಕಳೆದುಕೊಳ್ಳುವುದಿಲ್ಲ. ಕ್ರಿಕೆಟ್ ನನ್ನ ಜೀವನದಲ್ಲಿ ಹೋರಾಡುವುದು.. ಬೀಳುವುದು.. ಎದ್ದು ನಿಲ್ಲುವುದನ್ನ ಕಲಿಸಿದೆ. ನನ್ನ ಉಸಿರು ಇರುವವರೆಗೂ ಆಟಕ್ಕೆ ಒಂದಲ್ಲಾ ಒಂದು ರೂಪದಲ್ಲಿ ಸೇವೆ ಮಾಡುತ್ತಲೇ ಇರುತ್ತೇನೆ ಇದು ಟೀಂ ಇಂಡಿಯಾದ ಸಿಕ್ಸರ್ ಕಿಂಗ್ ಯುವರಾಜ್ ವಿದಾಯದ ವೇಳೆ ಹೇಳಿದ ಮಾತುಗಳು.
ಡಿಸೆಂಬರ್ 12.. ಡಾಷಿಂಗ್ ಆಲ್ರೌಂಡರ್ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಯುವರಾಜ್ ಸಿಂಗ್ ಗೆ ಬರ್ತ್ ಡೇ ಗೆ ವಿಶ್ ಮಾಡುತ್ತಾ ಅವರ ಜೀವನದ ಕೆಲ ಪ್ರಮುಖ ಅಂಶಗಳ ಮೇಲೆ ಬೆಳಕು ಚೆಲ್ಲೋಣ.
19 ವರ್ಷದ ವೃತ್ತಿ ಜೀವನದಲ್ಲಿ ಹೋರಾಟಗಳನ್ನೇ ಹೆಚ್ಚಾಗಿ ನೋಡಿದ ಯುವರಾಜ್ ಸಿಂಗ್’ ಜೀವನ ಎಲ್ಲರಿಗೂ ಆದರ್ಶ ಪ್ರಾಯ.
ಈಗಿನ ಪೀಳಿಗೆಗೆ ಯುವರಾಜ್ ಸಿಂಗ್ ಅಂದ್ರೆ ನೆನಪಿಗೆ ಬರೋದು ಆರು ಎಸೆತಗಳಿಗೆ ಆರು ಸಿಕ್ಸರ್ ಗಳು.. ಡೇರಿಂಗ್ ಆಂಡ್ ಡಾಷಿಂಗ್ ಕ್ರಿಕೆಟರ್.. ಉತ್ತಮ ಆಲ್ರೌಂಡರ್ ಆಗಿ ಮಾತ್ರ. ಇದು ಯುವಿ ಜೀವನದ ಒಂದು ಭಾಗ ಮಾತ್ರ. ಮತ್ತೊಂದು ಕಡೆ ನೋಡಿದ್ರೆ ಯುವಿ ಜೀವನದಲ್ಲಿ ನಮಗೆ ತಿಳಿಯದ ಘಟನೆಗಳು ಬಹಳಷ್ಟಿವೆ.
ಯುವಿ ಚಿಕ್ಕತನದಿಂದ ಅನುಭವಿಸಿದ ಮಾನಸಿಕ ಘರ್ಷಣೆ.. ತಂದೆ ಬಲವಂತದ ಕಾರಣದಿಂದಾಗಿ ನೆಚ್ಚಿನ ಆಟವನ್ನು ಬಿಟ್ಟುಬಿಡುವುದು.. ಕೊಂಚವೂ ಇಷ್ಟವಿಲ್ಲದ ಕ್ರಿಕೆಟ್ ನಲ್ಲಿ ಸಾಧನೆ ಮಾಡುವುದು. ಕ್ಯಾನ್ಸರ್ ಸಮಸ್ಯೆಗೆ ಒಳಗಾಗುವುದು. ಅದರ ಜೊತೆ ಹೋರಾಡಿ ಗೆಲ್ಲುವುದು..
ಯುವರಾಜ್ ಸಿಂಗ್ ಜನಿಸಿದ್ದು ಕ್ರಿಕೆಟ್ ಕುಟುಂಬದಲ್ಲಿ. ಯುವಿ ತಂದೆ ಯೋಗ್ರಾಜ್ ಸಿಂಗ್ ಟೀಂ ಇಂಡಿಯಾದ ಫಾಸ್ಟ್ ಬೌಲರ್. ಯುವಿ ಚಿಕ್ಕತನದಲ್ಲಿಯೇ ತಂದೆ-ತಾಯಿ ಮಧ್ಯೆ ಬಿರುಕು ಮೂಡಿ ದೂರವಾಗಿದ್ದರು. ಆಗ ಯುವಿ ತಾಯಿ ಶಬ್ನಂ ಸಿಂಗ್ ಜೊತೆ ಬಂಗಾರದಂತೆ ಇದ್ದರು. ಟೆನಿಸ್, ಸ್ಕೇಟಿಂಗ್ ಮೇಲೆ ಯುವರಾಜ್ ಗೆ ಹೆಚ್ಚು ಒಲವಿತ್ತು. ಅದರಲ್ಲೂ ಯುವರಾಜ್ ಸಿಂಗ್ ಅಂಡರ್ 14 ನ್ಯಾಷನಲ್ ಸ್ಕೇಟಿಂಗ್ ಚಾಂಪಿಯನ್ಶಿಪ್ ನ ಚಾಂಪಿಯನ್ ಕೂಡ ಆಗಿದ್ದರು.
ಹೀಗಿದ್ದಾಗ ಯುವಿ ಪೋಷಕರು ಮತ್ತೆ ಒಂದಾದರು. ಆಗ ಯುವರಾಜ್ ಸಿಂಗ್ ಜೀವನವೂ ಬದಲಾಯಿತು. ನಾನು ಕ್ರಿಕೆಟರ್ ಆಗಿದ್ದು.. ನನ್ನ ಮಗ ಟೆನ್ನಿಸ್, ಸ್ಕೇಟಿಂಗ್ ಯಾಕೆ ಆಡಬೇಕು. ಯುವರಾಜ್ ಕೂಡ ಕ್ರಿಕೆಟರ್ ಆಗಬೇಕೆಂದು ಯೋಗರಾಜ್ ಭಾವಿಸಿದ್ದರು. ಆದ್ರೆ ಯುವಿಗೆ ಕ್ರಿಕೆಟ್ ಅಂದ್ರೆ ಕೊಂಚವೂ ಇಷ್ಟವಿರಲಿಲ್ಲ. ಒಂದು ದಿನ ಯೋಗರಾಜ್ ಸ್ಕೇಟಿಂಗ್ ನಲ್ಲಿ ಯುವಿ ಗಳಿಸಿದ್ದ ಮೆಡಲ್ ಗಳನ್ನ ಬೀಸಾಕಿ ಇನ್ಮುಂದೆ ನೀನು ಕ್ರಿಕೆಟ್ ಮಾತ್ರ ಆಡಬೇಕು ಎಂದು ಗದರಿಸಿದ್ದರು. ಇದರಿಂದ ತಂದೆ ಮಾತಿನಂತೆ ಯುವ ಕ್ರಿಕೆಟ್ ನತ್ತ ವಾಲಿದರು. ಅಲ್ಲಿಂದ ನಡೆದೆಲ್ಲಾ ಇತಿಹಾಸ.









