ನೈಸರ್ಗಿಕವಾಗಿಯೇ ಮನೆಯಲ್ಲಿ ಸಿಗುವ ಈ ಪದಾರ್ಥಗಳ ಬಳಕೆಯಿಂದ ತ್ವಚೆಯ ಆರೈಕೆ ಮಾಡಿರಿ..!
ಚರ್ಮದ ಆರೈಕೆ ಎಂದ್ರೆ ಕೇವಲ ಚರ್ಮವನ್ನು ಶುದ್ಧೀಕರಿಸುವುದು ಅಷ್ಟೇ ಅಲ್ಲ.. ಕಾಂತಿಯುಕ್ತ ತ್ವಚೆಗೆ ಆಹಾರ ಪದ್ಧತಿ, ಸರಿಯಾದ ನಿದ್ರೆ, ವ್ಯಾಯಾಮ, ಹಾಗೆಯೇ ಒತ್ತಡದ ಮಟ್ಟವನ್ನು ತಗ್ಗಿಸುವುದು ಬಹಳ ಮುಖ್ಯವಾಗಿರುತ್ತೆ. ಇವೆಲ್ಲದರ ಸರಿಯಾದ ಪ್ರಮಾಣ ನಮ್ಮ ತ್ವಚೆಯ ಮೇಲೆಯೂ ಪರಿಣಾಮ ಬೀರುತ್ತೆ ಎನ್ನುವ ವಿಚಾರ ಅನೇಕರಿಗೆ ಗೊತ್ತಿರುವುದಿಲ್ಲ. ಇದನ್ನ ಅರಿಯದೇ ಸುಂದರ ತ್ವಚೆಗಾಗಿ ಸಾಕಷ್ಟು ಹಣ ಕರ್ಚು ಮಾಡ್ತಾರೆ. ಆದ್ರೆ ನೀವು ಮನೆಯಲ್ಲಿಯೇ ರೋಟಿನ್ ಸ್ಕಿನ್ ಕೇರ್ ಮೂಲಕ ತ್ವಚೆಯ ಕೋಮಲತೆ, ಕಾಂತಿಯತೆಯನ್ನ ಕಾಪಾಡಿಕೊಳ್ಳಬಹುದು. ಅಂಗಡಿಗಳಲ್ಲಿ ಸಿಗುವ ಕಾಸ್ಮಿಕ್ ಗಳು ತುಂಬಾನೆ ದುಬಾರಿ.. ಎಷ್ಟೇ ಕಾಸ್ಟ್ಲಿ ಆದ್ರೂ 100% ಸೇಫಾ ಅನ್ನೋ ಡೌಟ್ ಇರುತ್ತೆ. ಯಾಕಂದ್ರೆ ಅವುಗಳಲ್ಲಿ ನಾನಾ ಕೆಮಿಕಲ್ಸ್ ಇದ್ದು, ತ್ವಚೆಯನ್ನ ಹಾಳು ಮಾಡುತ್ತೆ. ಇದರಿಂದ ಅಡ್ಡ ಪರಿಣಾಮಗಳಾಗೋದು ಹೆಚ್ಚು. ಅಲ್ಲದೇ ಚಿಕ್ಕ ವಯಸ್ಸಿನಲ್ಲೇ ವಯಸ್ಸಾದ ರೀತಿಯಲ್ಲಿ ಮುಖ ಲಕ್ಷಣಗಳು ಕಾಣುವುದು ಉಂಟು. ಹೌದು ಮನೆಯಲ್ಲಿಯೇ ನೈಸರ್ಗಿಕವಾಗಿ ಸ್ಕಿನ್ ಕೇರ್ ರೋಟೀನ್ ಹೇಗೆ ಮಾಡಬಹುದು ಅನ್ನೋದಕ್ಕೆ 5 ಉಪಯುಕ್ತ ರೆಮಿಡೀಸ್ ಇಲ್ಲಿದೆ ನೋಡಿ
1. ಹಸಿ ಆಲೂಗಡ್ಡೆ : ಮುಖದ ಮೇಲೆ ಮೊಡವೆ ಪಿಂಪಲ್ಸ್ ಆಗಿದ್ರೆ, ಅದರ ಮೇಲೆ ಹಸಿ ಹೆಚ್ಚಿದ ಆಲೂಗಡ್ಡೆ ಇಟ್ಟರೆ ಕ್ರಮೇಣ ಪಿಂಪಲ್ ಗಳು ಕಡಿಮೆಯಾಗುತ್ತವೆ. ಅಷ್ಟೇ ಅಲ್ಲ ಮುಖದ ಮೇಲೆ ಆಲೂಗಡ್ಡೆಯನ್ನ ಫೇಸ್ ಮಾಸ್ಕ್ ರೀತಿಯೂ ಉಪಯೋಗಿಸಬಹುದು. ಕ್ರಮೇಣ ತ್ವಚೆ ಕಾಂತಿ ಪಡೆಯುತ್ತಾ ಹೊಗೂತ್ತೆ.
2. ಅರಿಶಿಣ : ಮದುವೆ ಸಂದರ್ಭದಲ್ಲಿ ಅರಿಶಿಣ ಶಾಸ್ತ್ರ ಮಾಡೋದು ನಿಮಗೆಲ್ಲಾ ಗೊತ್ತೇ ಇದೆ. ಆದ್ರೆ ಅನೇಕರಿಗೆ ಇದರ ಸರಿಯಾದ ಅರ್ಥ ಗೊತ್ತಿಲ್ಲ. ಈ ಶಾಸ್ತ್ರ ಮಾಡೋದು ಯಾಕಂದ್ರೆ ಅರಿಶಿನವು ನೈಸರ್ಗಿಕ ಆಂಟಿ-ಆಕ್ಸಿಡೆಂಟ್, ನಂಜುನಿರೋಧಕ ಮತ್ತು ಚರ್ಮದ ಹೊಳಪು ನೀಡುವ ಗುಣಗಳನ್ನು ಹೊಂದಿರುತ್ತದೆ. ಹೀಗೆ ಮದುವೆಯ ಹಿಂದಿನ ದಿನ ಮೈಗೆಲ್ಲ ಅರಿಶಿಣ ಹಚ್ಚುವುದರಿಂದ ಚರ್ಮದ ಕಾಂತಿಯನ್ನ ಹೆಚ್ಚಿಸಿ ಮಧುಮಕ್ಕಳು ಮತ್ತಷ್ಟು ಸುಂದರವಾಗಿ ಕಾಣಿಸುವಂತೆ ಮಾಡುತ್ತೆ. ಹೀಗಾಗಿ ಕಾಂತಿಯುಕ್ತ ತ್ವಚೆಗಾಗಿ ಅರಿಶಿಣ ಹಾಕಿ ಪ್ರತಿನಿತ್ಯ 2 ನಿಮಿಷಗಳ ಕಾಲ ಮಸಜ್ ಮಾಡಿದರೆ ಸ್ಕಿನ್ ಗ್ಲೋ ಬರುವ ಜೊತೆಗೆ ಪಿಂಪಲ್ಸ್ ಕೂಡ ಕಡಿಮೆಯಾಗುತ್ತದೆ. ಆದ್ರೆ ಇದು ಹೆಚ್ಚಾಗಿ ಡ್ರೈ ಸ್ಕಿನ್ ಇರುವವರಿಗೆ ಉತ್ತಮ ರಿಸಲ್ಟ್ ಕೊಡುತ್ತೆ. ಕೆಲ ಆಯಿಲ್ ಸ್ಕಿನ್ ಇರುವವರಿಗೆ ಅಲರ್ಜಿ ಸಹ ಆಗಬಹುದು.ಹೀಗಾಗಿ ಮೊದಲಿಗೆ ಕೈಗೆ ಹಚ್ಚಿ ಪರೀಕ್ಷೆ ಮಾಡುವುದು ಒಳ್ಳೆಯದು.
3. ಹಾಲು ಜೇನುತುಪ್ಪದ ಮಿಶ್ರಣ: ಹಾಲು ಜೊತೆಗೆ ಜೇನು ಬೆರೆಸಿ ಫೇಸ್ ಪಾಕ್ ರೂಪದಲ್ಲಿ ಹಚ್ಚುವುದು. ಇಲ್ಲದೇ ಇದ್ದಲ್ಲಿ, ಈ ಮಿಶ್ರಣದಿಂದ ಮಸಾಜ್ ಮಾಡುವುದುರಿಂದಲೂ ನೀವು ಉತ್ತಮ ಸುಂದರವಾದ ತ್ವಚೆಯನ್ನ ಪಡೆಯಬಹುದು ಜೊತೆಗೆ ಮೊಡವೆಗಳು ಸಹ ಕ್ರಮೇಣ ಕಡಿಮೆಯಾಗುತ್ತವೆ.
4. ಟಮೋಟೋ : ಎಸ್ ದಿನನಿತ್ಯ ಅಡಿಗೆ ಬಳಸುವ ಟೊಮೋಟೋ ನಿಮ್ಮ ತ್ವಚೆಯ ಕಾಂತಿ ಹೆಚ್ಚಿಸುತ್ತೆ ಅಂದ್ರೆ ಆಶ್ಚರ್ಯ ಆಗುತ್ತೆ. ರಿಂಕಲ್ಸ್, ಮೊಡವೆಗಳು ಮುಖದಲ್ಲಿ ಹಳ್ಳಗಳು ಇದ್ರೆ ಅವುಗಳ ಹೋಗಲಾಡಿಸುವಲ್ಲಿ ರಾಮಬಾಣದಂತೆ ಟೊಮೋಟೋ ರಸ ಕೆಲಸ ಮಾಡುತ್ತೆ. ಟೊಮೊಟೋವನ್ನ 2 ಹನಿ ನಿಂಬೆ ರಸದ ಜೊತೆ ಬೆರೆಸಿ ಮುಖಕ್ಕೆ ಹಚ್ಚಿ ಬಳಿಕ ಬೆಚ್ಚಗಿನ ನೀರಿನಿಂದ ಮುಖ ತೊಳೆಯಬೇಕಕು. ಈ ರೀತಿ ನಿಯಮಿತವಾಗಿ ಮಾಡುತ್ತಾ ಬಂದಲ್ಲಿ ನೀವು ಗ್ಲೋಯಿಂಗ್ ಸ್ಕಿನ್ ಪಡೆಎಯೋದ್ರಲ್ಲಿ ಅನುಮಾನವೇ ಇಲ್ಲ.
5. ಕಡಲೆಹಿಟ್ಟು : ನೀವು ಸಾಬೂನಿನ ಬದಲು ಮುಖಕ್ಕೆ ಫೇಸ್ ವಾಸ್ ರೀತಿಯಲ್ಲಿ ಕಡೆಲೆ ಹಿಟ್ಟು ಬಳಸುವುದು ನಿಜಕ್ಕೂ ತುಂಬಾನೆ ಉಪಯೋಗಕಾರಿ. ಯಾಕಂದ್ರೆ ಇದು ಪ್ಯೂರ್ಲಿ ನ್ಯಾಚುರಲ್ ಹಾಗೂ ಇದರ ರಿಸಲ್ಟ್ 100% ಅಕ್ಯುರೇಟ್ ಆಗಿರೋದ್ರಲ್ಲಿ ಅನುಮಾನವೇ ಇಲ್ಲ. ಇನ್ನೂ ಅರಿಶಿಣನ ಜೊತೆಗೆ ಕಡಲೆಹಿಟ್ಟನ್ನ ಮಿಕ್ಸ್ ಮಾಡಿ ಫೇಸ್ ಮಾಸ್ಕ್ ರೀತಿ ಮಾಡಿ ಅಪ್ಲೈ ಮಾಡಿ 5 ನಿಮಿಷಗಳ ಕಾಲ ಬಿಟ್ಟು ಮುಖ ತೊಳೆದ ಬಳಿಕ ನಿಮ್ಮ ತ್ವಚೆಯಲ್ಲಿ ಆಗುವ ಬದಲಾವಣೆಗಳು ನಿಮಗೆ ಆಶ್ಚರ್ಯ ಮೂಡಿಸುತ್ತೆ.