Rohit sharma | ಮೊದಲ ಪಂದ್ಯದಲ್ಲೇ ಕೊಹ್ಲಿಗೆ ರೋಹಿತ್ ವಾರ್ನಿಂಗ್..!
ಟೀಂ ಇಂಡಿಯಾದಲ್ಲಿ ಈಗ ಎಲ್ಲವೂ ಸರಿ ಇಲ್ಲ ಎಂಬುದು ಜಗತ್ ಜಾಹೀರಾಗಿರುವ ವಿಚಾರ. ಕ್ಯಾಪ್ಟನ್ಸಿ ವಿಚಾರವಾಗಿ ಎದ್ದಿರುವ ಬಿರುಗಾಳಿ ತಂಡದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಠಿ ಮಾಡಿದೆ. ಮುಖ್ಯವಾಗಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ ಅನ್ನೋದು ಕೂಡ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿರುವ ಸಂಗತಿ.
ಅಂದಹಾಗೆ ಇದೇ ಮೊದಲ ಬಾರಿಗೆ ವಿರಾಟ್ ಕೊಹ್ಲಿ ಭಾನುವಾರ ರೋಹಿತ್ ಶರ್ಮಾ ಕ್ಯಾಪ್ಟನ್ಸಿಯಲ್ಲಿ ಮೈದಾನಕ್ಕೆ ಇಳಿದಿದ್ದರು. ಅಹ್ಮದಾಬಾದ್ ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದಲ್ಲಿ ರೋಹಿತ್ ಶರ್ಮಾ, ಟೀಂ ಇಂಡಿಯಾವನ್ನು ಮುನ್ನಡೆಸಿದ್ದರು.
ಅಲ್ಲದೇ ಇದೇ ಮೊದಲ ಬಾರಿಗೆ ವಿರಾಟ್ ಕೊಹ್ಲಿ, ರೋಹಿತ್ ನಾಯಕತ್ವದಲ್ಲಿ ಕೇವಲ ಸಾಮಾನ್ಯ ಆಟಗಾರನಾಗಿ ಕಣಕ್ಕಿಳಿದಿದ್ದರು. ಆದ್ರೆ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮಿಂಚಲಿಲ್ಲ. ತಂಡಕ್ಕೆ ರೋಹಿತ್ ಉತ್ತಮ ಆರಂಭ ಕೊಟ್ಟರೂ, ವಿರಾಟ್ ಅದನ್ನು ಮುಂದುವರೆಸಲಿಲ್ಲ. ರೋಹಿತ್ ಔಟ್ ಆಗುತ್ತಿದ್ದಂತೆ ಕ್ರೀಸ್ ಗೆ ಬಂದ ವಿರಾಟ್, ಹಿರಿಯ ಆಟಗಾರನಾಗಿ ಇನ್ನಿಂಗ್ಸ್ ಕಟ್ಟಬೇಕಾಗಿತ್ತು. ಆದ್ರೆ ಕೇವಲ 8 ರನ್ ಗಳಿಗೆ ವಿಕೆಟ್ ಒಪ್ಪಿಸಿದರು.
ಇದು ಹೀಗಿದ್ದರೇ ಪಂದ್ಯದ ಬಳಿಕ ರೋಹಿತ್, ತಂಡದ ಆಟಗಾರರನ್ನು ಉದ್ದೇಶಿಸಿ, ಎಲ್ಲಾ ಅಟಗಾರರಲ್ಲಿ ನಾನು ಕೇಳಿಕೊಳ್ಳುವುದು ಇಷ್ಟೇ. ನಿಮ್ಮ ಸಾಮಥ್ರ್ಯಕ್ಕೆ ನೀವೇ ಸವಾಲುಗಳನ್ನು ಹಾಕಿಕೊಳ್ಳಿ. ಸ್ವಲ್ಪ ಹೊಸತನದ ಬಗ್ಗೆ ಯೋಚಿಸಿ. ವಿಭಿನ್ನವಾಗಿ ಪ್ರಯತ್ನ ಪಡಿ. ಪರಿಸ್ಥಿತಿಗೆ ತಕ್ಕಂತೆ ಆಟವನ್ನಾಡಿ. ಆಟದಲ್ಲಿ ಎಲ್ಲವೂ ಪರ್ಫೆಕ್ಟ್ ಆಗಿರುತ್ತೆ ಅಂತ ಹೇಳುವುದು ಸರಿಯಲ್ಲ. ಯಾಕಂದ್ರೆ ಯಾರು ಕೂಡ ಪರ್ಫೆಕ್ಟ್ ಆಗಿ ಆಡಲು ಸಾಧ್ಯವಿಲ್ಲ. ಆಟದಲ್ಲಿ ಪ್ರತಿಯೊಬ್ಬರ ಬದ್ದತೆ ಮುಖ್ಯವಾಗಿರುತ್ತದೆ ಎಂದು ಸೂಚನೆಗಳನ್ನ ನೀಡಿದ್ದಾರೆ.
ಇದು ಸದ್ಯ ಚೆರ್ಚನೀಯವಾಗಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅವರನ್ನ ಗುರಿಯಾಗಿಸಿಕೊಂಡೇ ಈ ಮಾತುಗಳನ್ನಾಡಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ.