ಪತುಮ್ ನಿಸ್ಸಂಕಾ(77*), ಸಮರ ವಿಕ್ರಮ(65*) ಅವರುಗಳ ಭರ್ಜರಿ ಬ್ಯಾಟಿಂಗ್ ಹಾಗೂ ಸಂಘಟಿತ ಬೌಲಿಂಗ್ ದಾಳಿಯ ನೆರವಿನಿಂದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಶ್ರೀಲಂಕಾ ತಂಡದ ಸೆಮೀಸ್ ಕನಸನ್ನ ಜೀವಂತ ಉಳಿಸಿಕೊಂಡಿದೆ.
ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್, ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ 33.2 ಓವರ್‌ಗಳಲ್ಲಿ 156 ರನ್‌ಗಳಿ ಸರ್ವಪತಕ ಕಂಡಿತು. ಈ ಟಾರ್ಗೆಟ್ ಚೇಸ್ ಮಾಡಿದ ಶ್ರೀಲಂಕಾ 25.4 ಓವರ್‌ಗಳಲ್ಲಿ 2 ವಿಕೆಟ್‌ಗೆ 160 ರನ್‌ಗಳಿಸುವ ಮೂಲಕ 8 ವಿಕೆಟ್‌ಗಳ ಗೆಲುವು ಸಾಧಿಸಿತು. ಲಂಕಾ ಪರ ಆರಂಭಿಕ ಬ್ಯಾಟ್ಸ್‌ಮನ್ ಪತುಮ್ ನಿಸ್ಸಂಕಾ(77*) ಹಾಗೂ ಸದೀರ ಸಮರವಿಕ್ರಮ(65*) ರನ್‌ಗಳಿಸುವ ತಂಡದ ಗೆಲುವಿಗೆ ಕಾರಣರಾದರು.
ಇಂಗ್ಲೆಂಡ್ ಬ್ಯಾಟಿಂಗ್ ವೈಫಲ್ಯ:
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡಕ್ಕೆ ಆರಂಭಿಕರಾದ ಬೈರ್ಸ್ಟೋವ್(30) ಹಾಗೂ ಮಲಾನ್(28) ಮೊದಲ ವಿಕೆಟ್‌ಗೆ 45 ರನ್‌ಗಳ ಸಾಧಾರಣ ಆರಂಭ ನೀಡಿದರು. ಆದರೆ ನಂತರ ಕಣಕ್ಕಿಳಿದ ರೂಟ್(3), ಬಟ್ಲರ್(8), ಲಿವಿಂಗ್‌ಸ್ಟೋನ್(1), ಮೊಯಿನ್(15) ಅವರುಗಳು ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಆಲ್ರೌಂಡರ್ ಬೆನ್ ಸ್ಟೋಕ್ಸ್(43) ಉಪಯುಕ್ತ ರನ್‌ಗಳಿಸಿ ತಂಡಕ್ಕೆ ಆಸರೆಯಾದರು. ಆದರೆ ಕೆಳ ಕ್ರಮಾಂಕದಲ್ಲಿ ಬಂದ ಬೌಲರ್‌ಗಳಿಂದಲೂ ನಿರೀಕ್ಷಿತ ಪ್ರದರ್ಶನ ಹೊರಬರಲಿಲ್ಲ. ಪರಿಣಾಮ 33.2 ಓವರ್‌ಗಳಲ್ಲಿ 156 ರನ್‌ಗಳಿಗೆ ಆಲೌಟ್ ಆಯಿತು. ಲಂಕಾ ಪರ ಲಹಿರು ಕುಮಾರ(3/35) ಅದ್ಭುತ ಬೌಲಿಂಗ್ ದಾಳಿ ನಡೆಸಿದರೆ. ಮ್ಯಾಥೀವ್ಸ್ ಹಾಗೂ ರಜಿತ ತಲಾ 2 ವಿಕೆಟ್ ಪಡೆದರೆ. ತೀಕ್ಷಣ 1 ವಿಕೆಟ್ ಪಡೆದುಕೊಂಡರು.
ನಿಸ್ಸಂಕಾ-ಸದೀರ ಆಸರೆ:
ಇಂಗ್ಲೆಂಡ್ ನೀಡಿದ 157 ರನ್‌ಗಳ ಸಾಧಾರಣ ಟಾರ್ಗೆಟ್ ಬೆನ್ನತ್ತಿದ ಶ್ರೀಲಂಕಾ ಕೂಡ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಆರಂಭಿಕನಾಗಿ ಕಣಕ್ಕಿಳಿದ ಕುಸಲ್ ಪೆರೆರಾ(4) ಹಾಗೂ ಮೊದಲ ಕ್ರಮಾಂಕದಲ್ಲಿ ಬಂದ ಕುಸಲ್ ಮೆಂಡಿಸ್(11) ಬಹುಬೇಗನೆ ಔಟಾದರು. ಆದರೆ 3ನೇ ವಿಕೆಟ್‌ಗೆ ಜೊತೆಯಾದ ಪತುಮ್ ನಿಸ್ಸಂಕಾ(77* ರನ್, 83 ಬಾಲ್, 7 ಬೌಂಡರಿ, 2 ಸಿಕ್ಸ್) ಹಾಗೂ ಸಮರವಿಕ್ರಮ(65* ರನ್, 54 ಬಾಲ್, 7 ಬೌಂಡರಿ, 1 ಸಿಕ್ಸ್) ಜವಾಬ್ದಾರಿಯ ಆಟವಾಡಿದರು. ಇಂಗ್ಲೆಂಡ್ ಬೌಲಿಂಗ್ ದಾಳಿಗೆ ಸಮರ್ಥ ಉತ್ತರ ನೀಡಿದ ಈ ಜೋಡಿ 137* ರನ್‌ಗಳ ಅಜೇಯ ಜೊತೆಯಾಟದ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.
ಈ ಗೆಲುವಿನೊಂದಿಗೆ ಶ್ರೀಲಂಕಾ ಆಡಿರುವ 5 ಪಂದ್ಯಗಳಲ್ಲಿ 2 ಗೆಲುವು ಹಾಗೂ 3 ಸೋಲಿನೊಂದಿಗೆ 6 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದರೆ. ಆಡಿರುವ 5 ಪಂದ್ಯಗಳಲ್ಲಿ 1 ಗೆಲುವು, 4 ಸೋಲುಗಳ ಆಘಾತ ಕಂಡಿರುವ ಹಾಲಿ ಚಾಂಪಿಯನ್ ಇಂಗ್ಲೆಂಡ್, ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದು, ಸೆಮೀಸ್ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ.
SL v ENG, CWC 2023, England, Sri Lanka, World Cup