SL vs AUS : ಟಿ 20 ಕ್ರಿಕೆಟ್ ನಲ್ಲಿ ಚರಿತ್ರೆ ಸೃಷ್ಠಿಸಿದ ಶ್ರೀಲಂಕಾ
ಪಲ್ಲೆಕೆಲೆಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಶ್ರೀಲಂಕಾ ಗೆಲುವು ಸಾಧಿಸಿದೆ.
177 ರನ್ ಗಳ ಗುರಿಯೊಂದಿಗೆ ಕ್ರೀಸ್ ಗೆ ಬಂದ ಶ್ರೀಲಂಕಾ ತಂಡ ಸತತ ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
17 ಓವರ್ ಗಳು ಮುಗಿಯುವಷ್ಟರಲ್ಲಿ ಶ್ರೀಲಂಕಾ ತಂಡ ಆರು ವಿಕೆಟ್ ಕಳೆದುಕೊಂಡು 118 ರನ್ ಗಳಿಸಿತ್ತು.
ಗೆಲ್ಲಲು ಕೊನೆಯ ಮೂರು ಓವರ್ ನಲ್ಲಿ ಲಂಕಾ ತಂಡಕ್ಕೆ 59 ರನ್ ಗಳ ಅವಶ್ಯಕತೆ ಇತ್ತು.
ಈ ಹಿನ್ನೆಲೆಯಲ್ಲಿ ಶ್ರೀಲಂಕಾ ನಾಯಕ ದಸುನ್ ಶನಕ (25 ಎಸೆತಗಳಲ್ಲಿ ಔಟಾಗದೆ 54; 5 ಬೌಂಡರಿ, 4 ಸಿಕ್ಸರ್) ಮಿಂಚಿನ ಬ್ಯಾಟಿಂಗ್‌ನೊಂದಿಗೆ ತಂಡಕ್ಕೆ ಸ್ಮರಣೀಯ ಜಯ ತಂದುಕೊಟ್ಟರು.

ಶ್ರೀಲಂಕಾ 3 ಓವರ್‌ಗಳಲ್ಲಿ ಕ್ರಮವಾಗಿ 22, 18 ಮತ್ತು 19 ರನ್ ಗಳಿಸಿ 4 ವಿಕೆಟ್‌ಗಳ ಜಯ ಸಾಧಿಸಿತು.
ಈ ಮೂಲಕ ಅಂತಾರಾಷ್ಟ್ರೀಯ ಟಿ20ಯಲ್ಲಿ ಶ್ರೀಲಂಕಾ ಹೊಸ ಇತಿಹಾಸ ನಿರ್ಮಿಸಿದೆ.
ಟಿ20 ಕ್ರಿಕೆಟ್ ನಲ್ಲಿ ಕೊನೆಯ ಮೂರು ಓವರ್‌ಗಳಲ್ಲಿ ಅತಿ ಹೆಚ್ಚು ರನ್‌ಗಳನ್ನು ಬೆನ್ನಟ್ಟಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಶ್ರೀಲಂಕಾ ಪಾತ್ರವಾಗಿದೆ.
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತ್ತು.