ಕೊಂಡೋತ್ಸವ ವೀಕ್ಷಣೆ ವೇಳೆ ಸಜ್ಜೆ ಕುಸಿದು ಮಹಿಳೆ ಸಾವು
ಕೊಂಡೋತ್ಸವ ವೀಕ್ಷಣೆ ವೇಳೆ ಸಜ್ಜೆ ಕುಸಿದುಬಿದ್ದು ಮಹಿಳೆ ದುರ್ಮರಣವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹುಲಗೆರೆಪುರದಲ್ಲಿ ನಡೆದಿದೆ. ಘಟನೆಯಲ್ಲಿ ಹಲವರಿಗೆ ಗಾಯವಾಗಿದೆ. ಸಜ್ಜೆ ಮೇಲೆ ಕುಳಿತು ಕೊಂಡೋತ್ಸವ ವಿಕ್ಷಣೆ ಮಾಡುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.
ಪುಟ್ಟಲಿಂಗಮ್ಮ ಎಂಬುವವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಗಾಯಳುಗಳಿಗೆ ಮದ್ದೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೊಂಡೋತ್ಸವ ನೋಡಲು ಮನೆ ಸಜ್ಜೆ ಮೇಲೆ ಹತ್ತಿದ್ದರು. ಸಜ್ಜೆ ಮೇಲೆ, ಕೆಳಗೆ ನಿಂತಿದ್ದ 40ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ.
ಮಂಡ್ಯ DC, DHO ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ 35 ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಮದ್ದೂರು ತಾಲೂಕು ಆಸ್ಪತ್ರೆಯಲ್ಲಿ 10 ಜನರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಒಬ್ಬರಿಗೆ ಹಾಗೂ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಮತ್ತೊಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಕೊಂಡೋತ್ಸವದ ವೇಳೆ ಸಜ್ಜೆ ಕುಸಿದು ಮಹಿಳೆ ಸಾವು ಹಿನ್ನೆಲೆ, ಹುಲಿಗೆರೆಪುರದ ಬಸವೇಶ್ವರ ದೇವರ ಕೊಂಡೋತ್ಸವ ರದ್ದು ಮಾಡಲಾಗಿದೆ. ಹುಲಿಗೆರೆಪುರ ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ.
slab collapsed wile waching kondotsava in mandya hulugepura