ಇತ್ತೀಚೆಗಷ್ಟೇ ನಿಧನರಾಗಿರುವ ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರ ನಿವಾಸಕ್ಕೆ ನಟ ಯಶ್ (Yash) ಮತ್ತು ರಾಧಿಕಾ ಪಂಡಿತ್ (Radhika Pandit) ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ದಂಪತಿ, ಎಸ್.ಎಂ. ಕೃಷ್ಣ ಅವರು ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರೊಬ್ಬ ಧೀಮಂತ ವ್ಯಕ್ತಿತ್ವದ ನಾಯಕ. ಪ್ರತಿಯೊಬ್ಬರು ಎಸ್.ಎಂ. ಕೃಷ್ಣರನ್ನು (S M Krishna) ನೆನಪಿಸಿಕೊಳ್ಳಲೇಬೇಕು. ಅವರು ಮಾಡಿರುವ ಕೆಲಸ ನಮ್ಮ ಮುಂದಿದೆ. ಅವರು ಎಷ್ಟು ಅದ್ಭುತವಾದ ಬದುಕನ್ನು ಬದುಕಿದ್ದಾರೆ ಎಂಬುದು ನಮಗೆಲ್ಲಾ ಗೊತ್ತು ಎಂದು ಹೇಳಿದ್ದಾರೆ.
ಅವರು ನಿಧನರಾದ ಸಂದರ್ಭದಲ್ಲಿ ನಾನು ಊರಲ್ಲಿ ಇರಲಿಲ್ಲ. ನಮ್ಮ ಪ್ರತಿ ಕೆಲಸಕ್ಕೂ ಎಸ್.ಎಂ. ಕೃಷ್ಣ ಅವರ ಹಾರೈಕೆ, ಆಶೀರ್ವಾದ ಇತ್ತು ಎಂದು ಯಶ್ ನೆನಪು ಮಾಡಿಕೊಂಡಿದ್ದಾರೆ