Smart Spectacles : ಸ್ಮಾರ್ಟ್ ಕನ್ನಡಕವೂ ಸಿಗಲಿದೆ, ಏನೆಲ್ಲಾ ವಿಶೇಷತೆಗಳಿವೆ..!!
Smart Spectacles : ಸ್ಮಾರ್ಟ್ ವಾಚ್ , ಸ್ಮಾರ್ಟ್ ಬ್ಲೂಟೂತ್ ಈಗೆಲ್ಲಾ ಒಂದ್ ರೀತಿ ಟ್ರೆಂಡ್ , ಫ್ಯಾಷನ್ ಕ್ರೇಜ್ ಆಗಿಬಿಟ್ಟಿದೆ..
ಆದ್ರೀಗ ಸ್ಮಾರ್ಟ್ ಸ್ಪೆಕ್ಸ್ ಕೂಡ ಸಿಗುತ್ತಿದೆ… ಹೌದು..! ಸಾಮಾನ್ಯ ಕನ್ನಡಕಗಳನ್ನು ಹಾಕುವ ಮಾದರಿಯಲ್ಲೇ ಇದನ್ನು ಬಳಸಬಹುದು.
ಐಐಟಿ ಬಾಂಬೆ ಸಹಯೋಗದಲ್ಲಿ ಬೆಂಗಳೂರಿನ ಪುಪಿಲ್ ಮೆಷ್ ನವೋದ್ಯಮ ಕಂಪನಿಯು ಇನ್ನೊಂದು 5 ವರ್ಷಗಳಲ್ಲಿ ಸ್ಮಾರ್ಟ್ ಕನ್ನಡಕ ಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದೆ.
ಆರ್ಮಾರ್ ಆರ್ 30 ಹೆಸರಿನಲ್ಲಿ ಪ್ರಸ್ತುತ ಅಭಿವೃದ್ಧಿಪಡಿಸಿರುವ ಕನ್ನಡಕದ ಗ್ಲಾಸ್ ಗಳನ್ನು ಸೇನೆಯಲ್ಲಿ ದಿಕ್ಕುಗಳನ್ನು ಗುರುತಿಸಲು ಮತ್ತು ನಿಖರ ಗುರಿಗಾಗಿ ಬಳಸಲಾಗುತ್ತಿದೆ.
ಆಟೊಮೊಬೈಲ್ ಉದ್ಯಮಗಳಲ್ಲೂ ಇದನ್ನು ಉಪಯೋಗಿಸಲಾಗುತ್ತಿದೆ. ಯೋಧರು ಹೆಗಲ ಮೇಲೆ ಕ್ಷಿಪಣಿಗಳು ಅಥವಾ ಯಾವುದೇ ಶಸ್ತಾಸ್ತ್ರಗಳ ಮೂಲಕ ದಾಳಿ ನಡೆಸುವ ಸಂದರ್ಭದಲ್ಲಿ ನಿಖರ ಗುರಿಗಾಗಿ ಈ ಗ್ಲಾಸ್ ಗಳ ನೆರವು ಪಡೆಯಲಾಗುತ್ತಿದೆ.
ಹೆಲ್ಮೆಟ್ ನಲ್ಲೂ ಅಳವಡಿಸಲಾದ ಈ ಗ್ಲಾಸ್ ಗಳು ಸುರಕ್ಷಿತ ವ್ಯವಸ್ಥೆಯನ್ನು ಹೊಂದಿವೆ. ವಾಹನಗಳ ಚಲಾಯಿಸುವ ಸಂದರ್ಭದಲ್ಲೂ ಇದನ್ನು ಬಳಸಬಹುದಾಗಿದೆ.
ವಿಶೇಷವಾಗಿ ತಯಾರಿಸಿದ ಈ ಗ್ಲಾಸ್‌ಗಳನ್ನು ಏರೋ ಇಂಡಿಯಾ–2023ರಲ್ಲಿ ಪ್ರದರ್ಶಿಸಲಾಗಿದೆ.
ಸ್ಥಳದ ಮಾಹಿತಿ ಗುರುತಿಸಲು ಇಂತಹ ಗ್ಲಾಸ್ ಗಳು ಬಹಳಷ್ಟು ಪ್ರಯೋಜನವಾಗಿವೆ. ಇದರಿಂದ, ತ್ವರಿತಗತಿಯಲ್ಲಿ ನಿರ್ಧಾರಗಳನ್ನು ಕೈಗೊಳ್ಳಬಹುದಾಗಿದೆ. ಸಮಗ್ರವಾದ ಮಾಹಿತಿ ದೊರೆಯುವುದರಿಂದ ಕಾರ್ಯಾಚರಣೆಯು ಸರಳವಾಗಿಯೂ ಮತ್ತು ಸಮರ್ಥವಾಗಿಯೂ ಕೈಗೊಳ್ಳಬಹುದಾಗಿದೆ ಎಂದು ಕಂಪನಿಯ ಪ್ರದೀಪ್ ಪಾರ್ಥಸಾರಥಿ ವಿವರಿಸಿದರು.
Smart Spectacles , features , look , uses








