ಸ್ಮಾರ್ಟ್ ಫೋನ್ ತಯಾರಿಕೆಯಲ್ಲಿ ಭಾರತ ಮೈಲಿಗಲ್ಲು – ರಪ್ತು 83% ಹೆಚ್ಚಳ
ಚೀನಾ ಮತ್ತು ವಿಯೆಟ್ನಾಂ ವಿಶ್ವದ ಅತಿದೊಡ್ಡ ಸ್ಮಾರ್ಟ್‌ಫೋನ್ ಮಾರಾಟಗಾರರು. ಇವುಗಳನ್ನ ಸ್ಮಾರ್ಟ್ ಫೋನ್ ಉತ್ಪಾದನೆಯ ಕೇಂದ್ರವೆಂದು ಪರಿಗಣಿಸಲಾಗುತ್ತದೆ. ಆದರ ಪರಿಸ್ಥಿತಿ ಈಗ ಬದಲಾಗಿದೆ. ಭಾರತ ಈಗ ಸ್ಮಾರ್ಟ್‌ಫೋನ್‌ಗಳನ್ನು ರಫ್ತು ಮಾಡುವಲ್ಲಿ ಪ್ರಗತಿಯನ್ನ ಸಾಧಿಸುತ್ತಿದೆ.
ಈ ಹಣಕಾಸು ವರ್ಷದಲ್ಲಿ ದೇಶದಿಂದ ಸ್ಮಾರ್ಟ್‌ಫೋನ್ ರಫ್ತಿನಲ್ಲಿ 83% ಜಿಗಿತಗೊಂಡಿದೆ. ಈ ಅಂಕಿ ಅಂಶವು ಈ ವರ್ಷ $ 5.6 ಶತಕೋಟಿ ಅಥವಾ ರೂ 42,000 ಕೋಟಿಗೆ ತಲುಪುವ ನಿರೀಕ್ಷೆಯಿದೆ. ಕಳೆದ ವರ್ಷ 23,000 ಕೋಟಿ ರೂಪಾಯಿ ಮೌಲ್ಯದ ಸ್ಮಾರ್ಟ್‌ಫೋನ್‌ಗಳನ್ನು ದೇಶದಿಂದ ರಫ್ತು ಮಾಡಲಾಗಿತ್ತು.
ಸರ್ಕಾರದ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್‌ಐ) ಯೋಜನೆಯೇ ಇದಕ್ಕೆ ಕಾರಣ ಎನ್ನಲಾಗಿದೆ. ಭಾರತದಲ್ಲಿ ತಯಾರಾದ ಸ್ಮಾರ್ಟ್‌ಫೋನ್‌ಗಳು ಪ್ರಪಂಚದ ಹಲವು ಅಭಿವೃದ್ಧಿ ಹೊಂದಿದ ದೇಶಗಳಿಗೆ ರಫ್ತಾಗುತ್ತಿವೆ.
ಅಮೆರಿಕದ ದೈತ್ಯ ಟೆಕ್ ಕಂಪನಿ ಆಪಲ್ ಮತ್ತು ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್ ಈ ಯೋಜನೆಯಿಂದ ಹೆಚ್ಚು ಲಾಭ ಪಡೆದಿವೆ. ಇದರೊಂದಿಗೆ, ಚೀನಾ ಮತ್ತು ವಿಯೆಟ್ನಾಂ ಜೊತೆಗೆ ಭಾರತವು ವಿಶ್ವದ ಸ್ಮಾರ್ಟ್‌ಫೋನ್ ತಯಾರಿಕೆಯ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದೆ. ನಾಲ್ಕು ವರ್ಷಗಳ ಹಿಂದೆ ಅಂದರೆ 2017-18ರಲ್ಲಿ ದೇಶದಿಂದ ಸ್ಮಾರ್ಟ್ ಫೋನ್ ರಫ್ತು ಕೇವಲ 1,300 ಕೋಟಿ ರೂ. ಇದು 2018-19ರಲ್ಲಿ 11,200 ಕೋಟಿ ರೂ.ಗೆ ಏರಿಕೆಯಾಗಿ 2019-2020ರಲ್ಲಿ 27,200 ಕೋಟಿ ರೂ.
ಆ್ಯಪಲ್ ರಫ್ತು 12,000 ಕೋಟಿ ರೂ
ಭಾರತದಿಂದ ರಫ್ತಾಗುವ ಸ್ಮಾರ್ಟ್‌ಫೋನ್‌ಗಳಲ್ಲಿ ಆಪಲ್ ಮತ್ತು ಸ್ಯಾಮ್‌ಸಂಗ್ ಪಾಲನ್ನು ಹೆಚ್ಚು ಹೊಂದಿದೆ. ಆಪಲ್ ರಫ್ತು 12,000 ಕೋಟಿ ರೂ.ಗೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ನಂಬಲಾಗಿದೆ. ಇದರಲ್ಲಿ, iPhone SE, iPhone 11 ಮತ್ತು iPhone 12 ನಂತಹ ಮಾದರಿಗಳು ಪ್ರಮುಖ ಕೊಡುಗೆಯನ್ನು ಹೊಂದಿವೆ. ಅದೇ ರೀತಿ ಸ್ಯಾಮ್ ಸಂಗ್ ರಫ್ತು ಕೂಡ 20,000 ಕೋಟಿ ರೂ.ಗೆ ಏರಿಕೆಯಾಗುವ ನಿರೀಕ್ಷೆಯಿದೆ.
PLI ಯೋಜನೆ ಎಂದರೇನು?
ಇದರ ಅಡಿಯಲ್ಲಿ, ಕೇಂದ್ರ ಸರ್ಕಾರವು ಹೆಚ್ಚುವರಿ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಮತ್ತು ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ರಫ್ತು ಮಾಡಲು ಕಂಪನಿಗಳಿಗೆ ಅವಕಾಶ ನೀಡುತ್ತದೆ. ಸ್ಪರ್ಧಾತ್ಮಕ ವಾತಾವರಣವನ್ನು ಸೃಷ್ಟಿಸಲು ಹೂಡಿಕೆದಾರರನ್ನು ಪ್ರೋತ್ಸಾಹಿಸುವುದು PLI ಯೋಜನೆಯ ಗುರಿಯಾಗಿದೆ.
Smartphone manufacturing milestone: Smartphone exports in the country grew by 83%,