ಅಮೇಥಿಯಲ್ಲಿ ಭೂಮಿ ಖರೀದಿಸಿ ಕಾಂಗ್ರೆಸ್ ಗೆ ಟಾಂಗ್ ಕೊಟ್ಟ ಕೇಂದ್ರ ಸಚಿವೆ ಸ್ಮೃತಿ ಇರಾನಿ

1 min read
Smriti Irani

ಅಮೇಥಿಯಲ್ಲಿ ಭೂಮಿ ಖರೀದಿಸಿ ಕಾಂಗ್ರೆಸ್ ಗೆ ಟಾಂಗ್ ಕೊಟ್ಟ ಕೇಂದ್ರ ಸಚಿವೆ ಸ್ಮೃತಿ ಇರಾನಿ

ಅಮೇಥಿ, ಫೆಬ್ರವರಿ23: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ತಮ್ಮ ಲೋಕಸಭಾ ಕ್ಷೇತ್ರ ಅಮೇಥಿಯೊಂದಿಗಿನ ಸಂಬಂಧವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಅಮೇಥಿಯಲ್ಲಿ ಭೂಮಿಯನ್ನು ಖರೀದಿಸಿದ್ದಾರೆ. ಅಲ್ಲಿಯೇ ಅವರು ತಮ್ಮ ಮನೆಯನ್ನು ನಿರ್ಮಿಸಲಿದ್ದಾರೆ.
Smriti Irani

ಖರೀದಿಯ ಔಪಚಾರಿಕತೆಯನ್ನು ಪೂರ್ಣಗೊಳಿಸಲು ಇರಾನಿ ಸೋಮವಾರ ಅಮೇಥಿಗೆ ಬಂದಿದ್ದಾರೆ. 2019 ರ ಲೋಕಸಭಾ ಚುನಾವಣೆಯಲ್ಲಿ ಅಂದಿನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಅವರು ಸೋಲುಣಿಸಿದ್ದರು.

ಅವರು ಅಂದಿನ ಚುನಾವಣಾ ಪ್ರಚಾರದ ವೇಳೆ ಇಲ್ಲಿ ಮನೆ ಕಟ್ಟಿ, ಇಲ್ಲಿಂದಲೇ ಸಂಸದೀಯ ಕೆಲಸ ಮಾಡುತ್ತೇನೆ ಎಂದು ಕ್ಷೇತ್ರದ ಜನತೆಗೆ ಭರವಸೆ ನೀಡಿದ್ದರು. ತಾವು ನೀಡಿದ ಭರವಸೆಯಂತೆ ಸ್ಥಳೀಯ ನಿವಾಸಿ ಫೂಲ್ಮತಿ ದೇವಿಯಿಂದ 11 ಬಿಸ್ವಾ ಭೂಮಿಯನ್ನು ₹ 12.11 ಲಕ್ಷಕ್ಕೆ ಸಚಿವೆ ಸ್ಮೃತಿ ಇರಾನಿ ಖರೀದಿಸಿದ್ದಾರೆ.

ಅಮೇಥಿ ಮತ್ತು ರೇ ಬರೇಲಿಯ ಪ್ರತಿ ಹಳ್ಳಿಯ ಜನರನ್ನು ಭೂಮಿ ಪೂಜೆ ಸಮಾರಂಭಕ್ಕೆ ಆಹ್ವಾನಿಸಲಾಗುವುದು ಎಂದು ಅವರು ಘೋಷಿಸಿದ್ದು, ಅದರ ದಿನಾಂಕವನ್ನು ಇನ್ನೂ ನಿರ್ಧರಿಸಲಾಗಿಲ್ಲ ಎಂದು ಹೇಳಿದ್ದಾರೆ.

ಈ ಹಿಂದೆ ಕಾಂಗ್ರೆಸ್‌ ನಾಯಕರು ಅನೇಕ ಬಾರಿ ಇಲ್ಲಿಂದ‌ ಆಯ್ಕೆಯಾಗಿದ್ದಾರೆ. ಆದರೆ ಯಾವ ಸಂಸದರೂ ಅಮೇಥಿಯಲ್ಲಿ ಮನೆ ಹೊಂದಿಲ್ಲ ಎಂದು ಸಚಿವೆ ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟರು.
Smriti Irani

ಅಮೇಥಿ ಜನರು ಯಾವಾಗಲೂ ಸಂಸದರು ನಮಗೆ ಸಿಗುತ್ತಾರಾ ಎಂಬ ನಿರೀಕ್ಷೆಯಲ್ಲಿದ್ದರು. ನನಗೆ ನನ್ನ ಮೇಲೆ ಪ್ರೀತಿ ಮತ್ತು ಆಶೀರ್ವಾದಗಳನ್ನು ತೋರಿಸಿರುವ ಜನರ ಈ ನಿರೀಕ್ಷೆ ಪೂರ್ತಿಗೊಳಿಸಿದ ಸಮಾಧಾನ ಇದೆ. ಕೊರೋನಾ ಕಾಲದಲ್ಲಿ, ನಾವು ಜನರೊಂದಿಗೆ ಇ-ಚೌಪಲ್‌ಗಳ ಮೂಲಕ ಸಂಪರ್ಕ ಹೊಂದಿದ್ದೇವೆ ಮತ್ತು ಅದಕ್ಕೂ ಮೊದಲು ನಾನು ದೀದಿ ಆಪ್ಕೆ ದ್ವಾರ್ (ನಿಮ್ಮ ಮನೆ ಬಾಗಿಲಿನಲ್ಲಿರುವ ದೀದಿ) ನಂತಹ ಕಾರ್ಯಕ್ರಮಗಳ ಮೂಲಕ ಅವರನ್ನು ತಲುಪಿದೆ ಎಂದು ಸಚಿವೆ ಹೇಳಿದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd