ಇದಕ್ಕೆ ಹೇಳೋದು… ಮನುಷ್ಯರಿಗಿಂತ ವಿಷಪೂರಿತ ಪ್ರಾಣಿ ಮತ್ತೊಂದಿಲ್ಲ..! ಹಾವು ಕಚ್ಚಿದ ಸಿಟ್ಟಲ್ಲಿ …ಅದೇ ಹಾವಿಗೆ ಕಚ್ಚಿ ಕೊಂದ ಭೂಪ..!
ಒಡಿಶಾ : ಮನುಷ್ಯರು ಮನುಷ್ಯರ ವಿರುದ್ಧ ಸೇಡು ತೀರಿಸಿಕೊಳ್ಳುವುದಕ್ಕೆ ಯಾವ ಮಟ್ಟಕ್ಕೆ ಬೇಕಾದ್ರೂ ಹೋಗಿರುವ ಸಾಕಷ್ಟು ಉದಾಹರಣೆಗಳು ಕಣ್ಮುಂದಿವೆ.. ಆದ್ರೆ ಪ್ರಾಣಿಗಳ ವಿರುದ್ಧ ಮನುಷ್ಯರು ಸೇಡು ತೀರಿಸಿಕೊಳ್ಳುವ ಕೆಲವೊಂದು ವಿಲಕ್ಷಣ ಘಟನೆಗಳು ನಮ್ಮನ್ನ ಬೆಚ್ಚಿಬೀಳಿಸುತ್ತವೆ..
ಇದೀಗ ಅಂತಹದ್ದೇ ಒಂದು ಘಟನೆ ಒಡಿಶಾದಲ್ಲಿ ಬೆಳಕಿಗೆ ಬಂದಿದೆ.. ಹೌದು ಹಾವೊಂದು ವ್ಯಕ್ತಿಗೆ ಕಚ್ಚಿದ್ದಕ್ಕೆ ಕೋಪಗೊಂಡ ವ್ಯಕ್ತಿ ಅದೇ ಹಾವಿಗೆ ಕಚ್ಚಿ ಸೇಡುತೀರಿಸಿಕೊಂಡಿದ್ದಾನೆ.. 45 ವರ್ಷದ ಬುಡಕಟ್ಟು ಜನಾಂಗದ ವ್ಯಕ್ತಿ ವಿಷ ಜಂತುವನ್ನೇ ಕಚ್ಚಿ ಸೇಡುತೀರಿಸಿಕೊಂಡಿದ್ದಾನೆ..
ಒಡಿಶಾದ ಜಜ್‌ಪುರ್ ಜಿಲ್ಲೆಯ ದೂರದ ಹಳ್ಳಿಯಲ್ಲಿ ಈ ಘಟನೆ ನಡೆದಿದೆ.. ದನಗಡಿ ಬ್ಲಾಕ್ ವ್ಯಾಪ್ತಿಯ ಸಾಲಿಜಂಗಾ ಪಂಚಾಯತ್ ವ್ಯಾಪ್ತಿಯ ಗಂಭರಿಪತಿಯಾ ಗ್ರಾಮದ ಕಿಶೋರ್ ಬದ್ರ ಬುಧವಾರ ರಾತ್ರಿ ತನ್ನ ಗದ್ದೆಯಲ್ಲಿ ಕೆಲಸ ಮಾಡಿ ಮನೆಗೆ ಮರಳುತ್ತಿದ್ದಾಗ ಆತನ ಕಾಲಿಗೆ ಹಾವು ಕಚ್ಚಿದೆ.
ತಕ್ಷಣ ಅದೇ ಹಾವನ್ನ ಹಿಡಿದು ಅದನ್ನ ಕಚ್ಚಿ ಸಾಯಿಸಿದ್ದಾನೆ.. ಈ ಬಗ್ಗೆ ಮಾತನಾಡಿರುವ ಹಾವಿನ ಕಡಿತಕ್ಕೆ ಒಳಗಾದ ಭದ್ರ , ನಿನ್ನೆ ರಾತ್ರಿ ನಾನು ಮನೆಗೆ ನಡೆದುಕೊಂಡು ಹೋಗುವಾಗ ನನ್ನ ಕಾಲಿಗೆ ಏನೋ ಕಚ್ಚಿದಂತೆ ಭಾಸವಾಯ್ತು.. ಏನೆಂದು ನೋಡಿದಾಗ ಅದು ವಿಷಪೂರಿತ ಸರ್ಪ ಕ್ರೈಟ್ ಎಂದು ತಿಳಿಯಿತು. ಸೇಡು ತೀರಿಸಿಕೊಳ್ಳಲು, ನಾನು ಹಾವನ್ನು ನನ್ನ ಕೈಯಲ್ಲಿ ತೆಗೆದುಕೊಂಡು ಪದೇ ಪದೇ ಕಚ್ಚಿದೆ. ಬಳಿಕ ಸ್ಥಳದಲ್ಲೇ ಆ ಹಾವನ್ನ ಕೊಂದೆ ಎಂದಿದ್ದಾರೆ.
ಘಟನೆಯ ನಂತರ ಆತ ಸತ್ತ ಹಾವಿನೊಂದಿಗೆ ತನ್ನ ಗ್ರಾಮಕ್ಕೆ ಮರಳಿ ಬಂದು ತನ್ನ ಪತ್ನಿಗೆ ಸಂಪೂರ್ಣ ಕಥೆಯನ್ನು ತಿಳಿಸಿದ್ದಾನೆ. ಬಳಿಕ ಈ ವಿಚಾರ ಇಡೀ ಗ್ರಾಮಸ್ಥರಿಗೆ ಗೊತ್ತಾಗಿದೆ. ಅಲ್ಲದೇ ಕೆಲವರು ಭದ್ರಾಗೆ ಆಸ್ಪತ್ರೆಗೆ ದಾಖಲಾಗುವಂತೆ ಸಲಹೆ ನೀಡಿದ್ದಾರೆ.. ಆದ್ರೆ ಆ ವ್ಯಕ್ತಿ ಆಸ್ಪತ್ರೆಗೆ ಹೋಗಲು ನಿರಾಕರಿಸಿದ್ದಾರೆ.. ಬದಲಾಗಿ ಸಾಂಪ್ರದಾಯಿಕ ತಾಂಡಾದ ವೈದ್ಯರ ಬಳಿಗೆ ಸಲಹೆ ಕೇಳಲು ತೆರಳಿದ್ದರು ಎನ್ನಲಾಗಿದೆ.
ಅದೃಷ್ಟವೆಂಬಂತೆಯೋ ಪವಾಡವೆಂಬಂತೆಯೋ ಹಾವ ಕಚ್ಚಿದರೂ ಭದ್ರಾ ಮೇಲೆ ಯಾವುದೇ ರೀತಿಯಾದ ಪರಿಣಾಮ ಬೀರಿಲ್ಲ.. ಆದ್ರೆ ಆತ ಕಚ್ಚಿದ ಹಾವು ಮಾತ್ರ ಪ್ರಾಣ ಬಿಟ್ಟಿದೆ.. ಅದಕ್ಕೆ ಹೆಳೋದು ಮನುಷ್ಯರಿಗಿಂತ ವಿಷಪೂರಿದ ಪ್ರಾಣಿ ಮತ್ತೊಂದಿಲ್ಲ ಅಂತ..
ನಾನು ವಿಷಕಾರಿ ಕ್ರೈಟ್ ಅನ್ನು ಕಚ್ಚಿದರೂ, ನನಗೆ ಯಾವುದೇ ತೊಂದರೆಯಾಗಿಲ್ಲ. ನಾನು ಹಳ್ಳಿಯ ಬಳಿ ವಾಸಿಸುವ ಸಾಂಪ್ರದಾಯಿಕ ವೈದ್ಯನ ಬಳಿಗೆ ಹೋಗಿ ಗುಣಮುಖನಾದೆ ಎಂದು ಹೇಳಿಕೊಂಡಿದ್ದಾರೆ ಭದ್ರಾ..