snake in stomach ಈ ಘಟನೆ ಎಂದು ಕಂಡು ಕೇಳರಿಯದ ನಂಭಲು ಅಸಾಧ್ಯವಾದರೂ ನೈಜ್ಯ ಘ ಟನೆ ಇದು ನಡೆದಿದ್ದು ರಷ್ಯಾದ ಡಾಗೆಸ್ಥಾನ್ನ ಲೆವಾಶಿಯಲ್ಲಿ
ಹೌದು ಸುಮಾರು 4 ಅಡಿ ಉದ್ದದ ಹಾವನ್ನು ಮಹಿಳೆಯ ಹೊಟ್ಟೆಯಿಂದ ತೆಗೆಯುವುದನ್ನು ನೀವು ಎಂದಾದರು ನೋಡಿದ್ದಿರಾ …? ಇಲ್ಲವಾದಲ್ಲಿ ಒಮ್ಮೆ ನೋಡಿ
Medics pull out 4 feet Snake from a woman’s throat after the animal crawled into her mouth while she slept.
The incident happened in Russia.#LayconNeedsYou II #BiggieForgiveErica II Adele II #BBTolanibaj pic.twitter.com/kN5bisWrcA
— Ngozi Clara (@ngoziclara) August 31, 2020
ಈ ವಿಡಿಯೋ ನೋಡಿದರೆ ಒಂದು ಕ್ಷಣಕ್ಕೆ ಮೈ ಝುಮ್ ಎನ್ನುತ್ತದೆ . ಒಂದು ಕ್ಷಣ ಹೃದಯ ಬಡಿತವೇ ಹೆಚ್ಚಾಗುತ್ತೆ. ಇಂತಹದ್ದೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಈಗ ಭಾರಿ ಸದ್ದು ಮಾಡುತ್ತಿದೆ .
ಮಹಿಳೆಯ ಹೊಟ್ಟೆಯೊಳಗೆ ಸುಮಾರು 4 ಅಡಿ ಉದ್ದದ ಹಾವು ಪತ್ತೆಯಾಗಿರುವ ವಿಚಿತ್ರ ಘಟನೆ ನಡೆದಿದೆ. ವೈದ್ಯರು ಮಹಿಳೆಯ ಬಾಯಿಯಿಂದ ಬರೋಬ್ಬರಿ ನಾಲ್ಕು ಅಡಿ ಉದ್ದದ ಹಾವನ್ನು ಹೊರ ತೆಗೆದಿದ್ದಾರೆ.
ಮಹಿಳೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದು ಆಸ್ಪತ್ರೆಗೆ ದಾಖಲಿಸಿದ ನಂತರ ವೈದ್ಯರಿಗೆ ಈ ಕುರಿತು ಏನೂ ತಿಳಿಯಲ್ಲಿಲ್ಲ . ನಂತರ ಪರೀಕ್ಷೆ ನಡೆಸಿದಾಗ ಹೊಟ್ಟೆಯಲ್ಲಿ ಏನೋ ಇದೆ ಎಂಬುದು ಅರಿವಾಗಿದೆ.
ಮಹಿಳೆಗೆ ಅರವಳಿಕೆ ನೀಡಿ ಪ್ರಜ್ಞಾಹೀನಗೊಳಿಸಿ ಬಾಯಿಯಿಂದ ಟ್ಯೂಬ್ ಹಾಕಿ ಏನೇ ಇದ್ದರು ಇದರಿಂದ ತೆಗೆಯಬಹುದೇ ಎಂದು ಟ್ಯೂಬ್ ಹಾಕಿ ಪರಿಶೀಲಿಸಿದ್ದಾರೆ.
ಈ ವೇಳೆ ಜೀವಂತ ಹಾವು ಬುಸ್ ಎಂದು ಹೊರ ಬಂದಿದೆ. ಇದನ್ನು ನೋಡಿದ ವೈದ್ಯೆ ಒಂದು ಕ್ಷಣ ಗಾಬರಿಯಾಗಿದ್ದಾರೆ. ಹಾವನ್ನು ಹೊಟ್ಟೆಯಿಂದ ಹೊರ ತೆಗೆಯುವ ಸಂಪೂರ್ಣ ವಿಡಿಯೋ ಮಾಡಲಾಗಿದೆ.
ಹಾವು ಹೊಟ್ಟೆ ಹೊಕ್ಕಿದ್ದು ಹೇಗೆ ಎಂದು ಪರಿಶಿಲಿಸಿದಾಗ ತೋಟದ ಮನೆಯಲ್ಲಿ ಮಹಿಳೆ ಬಾಯಿ ತೆರೆದಿದ್ದು ಮಲಗಿದಾಗ ಸಮೀಪಕ್ಕೆ ಬಂದ ಹಾವು ಬಿಲದಂತೆ ಕಂಡ ಬಾಯಿಯಲ್ಲೇ ಹೊಕ್ಕಿದೆ.
ಮಹಿಳೆ ಎದ್ದ ತಕ್ಷಣ ಭಾರೀ ಪ್ರಮಾಣ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ವೈದ್ಯರು ಹಾವನ್ನು ಹೊರ ತೆಗೆದಿದ್ದಾರೆ.








