ಒಂದೇ ದಿನಕ್ಕೆ ಕೊರೊನಾ ದೇಣಿಗೆಯಾಗಿ ಕೋಟ್ಯಾಂತರ ರೂಪಾಯಿ ಹಣ ಸಂಗ್ರಹಿಸಿದ ವಿರುಷ್ಕಾ ದಂಪತಿ..!
ದೇಶದಲ್ಲಿ ಕೊರೊನಾ ಹೆಮ್ಮಾರಿಯಿಂದ ನಿತ್ಯ ಸಾವಿರಾರು ಜನರು ಪ್ರಾಣ ಕಳೆದುಕೊಳ್ತಿದ್ದಾರೆ. ಸ್ಯಾಂಡಲ್ ವುಡ್ , ಬಾಲಿವುಡ್ , ಕಾಲಿವುಡ್ , ಮಾಲಿವುಡ್ , ಟಾಲಿವುಡ್ ಸೇರಿ ಸಿನಿಮಾರಂಗದವರು, ಸೆಲೆಬ್ರಿಟಿಗಳು ತಾರೆಯರು ಕೂಡ ಮಹಾಮಾರಿಗೆ ಬಲಿಯಾಗಿದ್ದಾರೆ.
ಈ ನಡುವೆ ಸ್ಯಾಂಡಲ್ ವುಡ್ , ಬಾಲಿವುಡ್ , ಟಾಲಿವುಡ್ , ಕಾಲಿವುಡ್ ನ ಅನೇಕ ಸಿನಿಮಾ ತಾರೆಯರು, ಕ್ರಿಕೆಟಿಗರು , ರಾಜಕಾರಣಿಗಳುಯ , ುದ್ಯಮಿಗಳು , ಸಮಾಜ ಸೇವಕರು ಬಡವರಿಗಾಗಿ, ಕೋವಿಡ್ ಸೋಂಕಿತರಿಗೆ ತಮಗೆ ತೋಚಿದ ಸಹಾಯಗಳನ್ನ ಮಾಡುತ್ತಿದ್ದಾರೆ.
ಇತ್ತೀಚೆಗೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ದಂಪತಿಗಳು ಸಹ ಕೋವಿಡ್ ಸಂಕಷ್ಟದಲ್ಲಿ ಬಡವರಿಒಗೆ ನೆರವಾಗಲು ಮುಂದಾಗಿದ್ದು, ದೇಣಿಗೆ ಸಂಗ್ರಹಕ್ಕಾಗಿ ಅಭಿಯಾನ ಶುರು ಮಾಡಿದ್ಧಾರೆ. ಈ ಅಭಿಯಾದಡಿ ಕೇವಲ ಒಂದೇ ದಿನಕ್ಕೆ ಈ ಜೋಡಿಗೆ ಹಲವರು ದೇಣಿಗೆ ನೀಡಿ ಸಾಥ್ ನೀಡಿದ್ದಾರೆ.
ಕೊರೊನಾ ವಿರುದ್ಧ ಹೋರಾಡಲು ನಿಧಿ ಸಂಗ್ರಹ ಅಭಿಯಾನಕ್ಕೆ ನಿನ್ನೆ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಚಾಲನೆ ನೀಡಿ ಇಬ್ಬರೂ ಸೇರಿ 2 ಕೋಟಿ ರೂಪಾಯಿ ದೇಣಿಗೆ ನೀಡಿದ್ದರು. ಅಭಿಯಾನ ಪ್ರಾರಂಭವಾದ ನಂತರ 24 ಗಂಟೆಗಳ ಒಳಗೆ 3.60 ಕೋಟಿ ರೂಪಾಯಿಯನ್ನು ವಿರಾಟ್-ಅನುಷ್ಕಾ ಸಂಗ್ರಹಿಸಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಟಿ ಅನುಷ್ಕಾ ಶರ್ಮಾ, ನಮ್ಮ ಗುರಿಯ ಅರ್ಧದಷ್ಟನ್ನು ನಾವು ಈಗಾಗಲೇ ಕ್ರಮಿಸಿದ್ದೇವೆ. ಇನ್ನಷ್ಟು ದಾನ ಮಾಡಿ ಕೋವಿಡ್ ವಿರುದ್ಧ ಹೋರಾಡಲು ನೆರವಾಗಿ ಎಂದಿದ್ದಾರೆ.