Social Media : ಅತಿ ಹೆಚ್ಚು ಸಾಮಾಜಿಕ ಜಾಲತಾಣ ಬಳಕೆಯಿಂದ ಭಾರತೀಯರು ಅದ್ರಲ್ಲೂ ಯುವಕರಿಗೆ ಆಗುವ ತೊಂದರೆಗಳು
ಸದ್ಯದ ಸಮಯದಲ್ಲಿ ಸಾಮಾಜಿಕ ಮಾಧ್ಯಮ ಎಲ್ಲರಿಗೂ ಬಹುಮುಖ್ಯವಾದ ಸೋರ್ಸ್ ಆಗಿ ಅಥವ ನಮ್ಮ ಅವಿಭಾಜ್ಯ ಅಂಗದಂತೆಯೇ ಆಗಿದೆ… ಹೆಚ್ಚಿನ ಜನರ ಜೀವನದಲ್ಲಿ ದೈನಂದಿನ ಅಭ್ಯಾಸವಾಗಿದೆ ಈ ಸೋಷಿಯಲ್ ಮೀಡಿಯಾ. ವಿವಿಧ ವಯೋಮಾನದ ವ್ಯಕ್ತಿಗಳು ಫೇಸ್ ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಮತ್ತು ಟ್ವಿಟರ್ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಸಂವಹನ ಮತ್ತು ನೆಟ್ವರ್ಕಿಂಗ್ಗಾಗಿ ಬಳಸುತ್ತಿದ್ದಾರೆ. ಒಂದು ವರದಿ ಪ್ರಕಾರ ಭಾರತೀಯರು ದಿನದ ಸುಮಾರು 2.4 ಗಂಟೆಗಳ ಕಾಲ ಸಾಮಾಜಿಕ ಮಾಧ್ಯಮದಲ್ಲಿ ಕಾಲ ಕಳೆಯುತ್ತಾರೆ.
ಅದ್ರಲ್ಲೂ 18-24 ವರ್ಷ ವಯಸ್ಸಿನ ಯುವಕರು ಈ ಅಪ್ಲಿಕೇಶನ್ಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ – ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ 97.2 ಮಿಲಿಯನ್ ಮತ್ತು 69 ಮಿಲಿಯನ್ ಬಳಕೆದಾರರು ಭಾರತದಲ್ಲಿದ್ದು , ನಮ್ಮ ದೇಶದಲ್ಲಿ ಸ್ಪಷ್ವಾಗಿ ಸಾಮಾಜಿಕ ಜಾಲತಾಣದ ಅವಲಂಬನೆಯ ತೋರಿಸುತ್ತದೆ..
ಆದ್ರೆ ನಿರಂತರ ಸೋಷಿಯಲ್ ಮೀಡಿಯಾ ಬಳಕೆಯು ಅಪಾಯಕಾರಿ… ಅದ್ರಲ್ಲೂ ಟೀನೇಜರ್ಸ್ ಮತ್ತು ಯುವಕರಿಗೆ ತುಂಬಾ ಅಪಾಯಕಾರಿ ಎಂದು ಇತ್ತೀಚೆಗಿನ ವರದಿಯೊಂದರಿಂದ ತಿಳಿದುಬಂದಿದೆ..
ಸೋಷಿಯಲ್ ಮೀಡಿಯಾ ದೈಹಿಕ ಹಾಗೂ ಮಾನಸಿಕ ಅನಾರೋಗ್ಯಕ್ಕೂ ಕಾರಣವಾಗಬಹುದು.. ನಡವಳಿಕೆಯ ಮಾದರಿಗಳಲ್ಲಿ ಬದಲಾವಣೆಗಳಿಗೆ ಕಾರಣವಾಗಬಹುದು. ಕೀಳರಿಮೆಯ ಭಾವನೆ ಮತ್ತು ಸೈಬರ್ ಬುಲ್ಲಿಂಗ್ ಗೆ ಕಾರಣವಾಗಬಹುದು. ಇದು ಗಂಭೀರ ಮಾನಸಿಕ ಆರೋಗ್ಯ ಸವಾಲುಗಳು ಮತ್ತು ಅನಾರೋಗ್ಯಕ್ಕೆ ಕಾರಣವಾಗುತ್ತದೆ.
UNICEF ಪ್ರಕಾರ, 15 ರಿಂದ 24 ವರ್ಷ ವಯಸ್ಸಿನ 7 ಭಾರತೀಯರಲ್ಲಿ ಒಬ್ಬರು ಖಿನ್ನತೆಗೆ ಒಳಗಾಗುತ್ತಾರೆ. ಖಿನ್ನತೆಯು ಸ್ವಾಭಿಮಾನದ ಕೊರತೆ, ಕಳಪೆ ಏಕಾಗ್ರತೆ ಮತ್ತು ಇತರ ಅಸಮರ್ಪಕ ರೋಗಲಕ್ಷಣಗಳಿಗೆ ಸಂಬಂಧಿಸಿದೆ ಮತ್ತು ಸಂವಹನದಲ್ಲಿ ತೊಂದರೆಗಳು, ಕೆಲಸ ಮಾಡಲು ಅಥವಾ ಉತ್ಪಾದಕವಾಗಿ ಅಧ್ಯಯನ ಮಾಡಲು ವಿಫಲತೆ, ಮಾದಕವಸ್ತು ಬಳಕೆ ಮತ್ತು ದುರುಪಯೋಗದ ವರ್ಧಿತ ಅಪಾಯ, ಹಾಗೆಯೇ ಆತ್ಮಹತ್ಯಾ ಆಲೋಚನೆಗಳಿಗೆ ಕಾರಣವಾಗಬಹುದು. ಖಿನ್ನತೆಯ ಈ ಪ್ರಚಲಿತ ದರಗಳಿಗೆ ಪ್ರಮುಖ ಅಪಾಯಕಾರಿ ಅಂಶವೆಂದರೆ ಸಾಮಾಜಿಕ ಮಾಧ್ಯಮವಾಗಿದೆ.