ಸೋಶಿಯಲ್ ಮೀಡಿಯಾಗೆ ಬಿಗ್ ಶಾಕ್ : ಕೇಂದ್ರದಿಂದ ಮಾರ್ಗಸೂಚಿ ರಿಲೀಸ್

1 min read
social-media

ಸೋಶಿಯಲ್ ಮೀಡಿಯಾಗೆ ಬಿಗ್ ಶಾಕ್ : ಕೇಂದ್ರದಿಂದ ಮಾರ್ಗಸೂಚಿ ರಿಲೀಸ್

ನವದೆಹಲಿ: ಟ್ವಿಟರ್, ವಾಟ್ಸಾಪ್ ಮತ್ತು ಫೇಸ್‍ಬುಕ್‍ನಂತಹ ಅಂತರ್ಜಾಲ ಮಾಧ್ಯಮಗಳಲ್ಲಿ ಬರುವ ಕಂಟೆಂಟನ್ನುಂ ನಿಯಂತ್ರಿಸುವ ವ್ಯೂಹದ ಭಾಗವಾಗಿ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಜಾರಿತಂದಿದೆ.
ಸಂಬಂಧಿತ ಕಾನೂನನ್ನು ತಿದ್ದುಪಡಿ ಮಾಡುವ ಮೂಲಕ ಒಟಿಟಿ ಪ್ಲಾಟ್‍ಫಾರ್ಮ್‍ಗಳನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಇಂದು ಮಾರ್ಗಸೂಚಿಯನ್ನ ಬಿಡುಗಡೆ ಮಾಡಿದೆ.

ಆಕ್ಷೇಪಾರ್ಹ ಮಾಫಿರ್ಂಗ್ ಪೋಸ್ಟ್ ಗಳನ್ನು ತೆಗೆದುಹಾಕಲು ಸರ್ಕಾರ ನೀಡಿರುವ ಆದೇಶಗಳನ್ನು ಕೂಡಲೇ ಪಾಲಿಸಬೇಕು. ಇಲ್ಲವಾದಲ್ಲಿ ಸದರಿ ಸಂಸ್ಥೆಗಳಿಗೆ ಕೇಂದ್ರ ನೋಟಿಸ್ ನೀಡಲಿದೆ.

ಟಿಟಿ ಮತ್ತು ಸೋಷಿಯಲ್ ಮೀಡಿಯಾವನ್ನು ನಿಗ್ರಹಿಸಲು ಕೇಂದ್ರವು ಮೂರು ಹಂತದ ನಿಯಂತ್ರಣ ವ್ಯವಸ್ಥೆಯನ್ನು ಜಾರಿಗೆ ತರಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಘೋಷಿಸಿದ್ದಾರೆ.

ಫೆಬ್ರವರಿ 25 ರಂದು ಬಿಡುಗಡೆಯಾದ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) 2021 ರ ನಿಯಮಗಳ ಪ್ರಕಾರ, ಸರ್ಕಾರ ಅಥವಾ ಕಾನೂನು ಆದೇಶಗಳ ನಂತರ ವಿಷಯವನ್ನು ಆದಷ್ಟು ಬೇಗ ತೆಗೆದುಹಾಕಬೇಕು. 36 ಗಂಟೆಗಳವರೆಗೆ ಕಾಯಬೇಡಿ. ಈ ಕಂಪನಿಗಳು ಅಧಿಕಾರಿಗಳಿಂದ ವಿನಂತಿಸಿದ 72 ಗಂಟೆಗಳ ಒಳಗೆ ಮಾಹಿತಿ ಮತ್ತು ಸಹಾಯವನ್ನು ಒದಗಿಸಬೇಕು. ಹಾಗೆ ವೆಬ್ ಸಿರೀಸ್ ನಲ್ಲಿ ಕ್ರಿಯೆಟಿವಿಟಿ ಹೆಸರಲ್ಲಿ ಇತಿಮಿತಿಗಳನ್ನ ಮೀರಿದ ಅಸಭ್ಯ ದೃಶ್ಯಗಳನ್ನ ತೋರಿಸಲಾಗುತ್ತಿದೆ ಎಂದು ಕೇಂದ್ರ ಗರಂ ಆಗಿದೆ.

ಇತ್ತೀಚಿನ ನಿರ್ದೇಶನದಂತೆ ಕಂಪನಿಗಳು ಭಾರತದಲ್ಲಿ ಕಚೇರಿಗಳನ್ನು ಸ್ಥಾಪಿಸಬೇಕು ಎಂದು ಕೇಂದ್ರ ಐಟಿ ಸಚಿವಾಲಯ ನಿರ್ದೇಶಿಸಿದೆ. ಕಾನೂನು ಪಾಲನೆಯ ಜೊತೆಗೆ, ಉಲ್ಲಂಘನೆಯ ಬಗ್ಗೆ ಕ್ರಮ ಕೈಗೊಳ್ಳಲು ಸಂಬಂಧಿತ ಅಧಿಕಾರಿಗಳನ್ನು ನೇಮಿಸಬೇಕು. ದೂರುಗಳ ನಿರ್ಣಯ ಅಧಿಕಾರಿಗಳು ತನಿಖಾ ಸಂಸ್ಥೆಗಳಿಗೆ 24/7 ಲಭ್ಯವಿರಬೇಕು ಎಂದು ಕೇಂದ್ರ ಸೂಚಿಸಿದೆ.

social-media

ಪ್ರಮುಖ ಅಂಶಗಳು:

ಸಾಮಾಜಿಕ ಮಾಧ್ಯಮ ಪ್ಲಾಟ್‍ಫಾರ್ಮ್ ಡೇಟಾ, ವಿಷಯ ಮತ್ತು ಗ್ರಾಹಕರ ದೂರುಗಳನ್ನು ಸಮಯೋಚಿತವಾಗಿ ಪರಿಹರಿಸಬೇಕು.
ವ್ಯಕ್ತಿಗಳ ಖಾಸಗಿ ವಿಚಾರ ಹಾಗೂ ನಗ್ನತೆ ಮತ್ತು ಲೈಂಗಿಕತೆ ವಿಚಾರವಾಗಿ ಮಾಹಿತಿ ಹರಿಬಿಟ್ಟರೆ 24 ಗಂಟೆಯೊಳಗೆ ತೆಗೆದು ಹಾಕಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಇರುತ್ತದೆ.

ಸಿಕ್ಕಸಿಕ್ಕಂತೆ, ಮನಸೋ ಇಚ್ಛೆ ವೀಡಿಯೊಗಳನ್ನು ಒಟಿಟಿ ಪ್ಲಾಟ್‍ಫಾರ್ಮ್‍ಗಳಲ್ಲಿ ಪೋಸ್ಟ್ ಮಾಡಬಾರದು.

ನೋಡಲ್ ಏಜೆನ್ಸಿಯು ದಿನದ 24 ಗಂಟೆಗಳ ಮೇಲ್ವಿಚಾರಣೆ ಮತ್ತು ಕಾರ್ಯನಿರ್ವಹಿಸುತ್ತದೆ. ದೂರುಗಳನ್ನು ಜಾರಿಗೊಳಿಸುವ ಜವಾಬ್ದಾರಿಯನ್ನು ನೋಡಲ್ ಏಜೆನ್ಸಿ ಹೊಂದಿದೆ.
ಈ ನಿಯಮಗಳನ್ನು ಪ್ರಕಟಿಸಿದ ದಿನಾಂಕದಿಂದ 3 ತಿಂಗಳೊಳಗೆ (ಸಿಸಿಒ) ನೇಮಿಸಬೇಕು. ಸಿಸಿಒ ಕಾನೂನು ಮತ್ತು ನಿಬಂಧನೆಗಳ ಜವಾಬ್ದಾರಿಯನ್ನು ಹೊಂದಿರಬೇಕು.

ಒಟಿಟಿಯಲ್ಲಿ ಐದು ಅಂಶಗಳು ಬ್ಲಾಕ್

ಅಸಭ್ಯ, ಅಶ್ಲೀಲ ಹಿಂಸಾತ್ಮಕ ವಿಷಯದ ಮೇಲೆ ನಿಷೇಧ
ವಯಸ್ಸು ಆಧಾರವಾಗಿ ಐದು ವಿಭಾಗಗಳಾಗಿ ಓಟಿಟಿ ವಿಂಗಡನೆ
ಸಾಮಾಜಿಕ ಉದ್ವಿಗ್ನತೆಯನ್ನು ಹೆಚ್ಚಿಸುವ ವಿಷಯದ ನಿಷೇಧ
ಸಾಮಾಜಿಕ ಸಾಮರಸ್ಯವನ್ನು ಹಾಳುಮಾಡುವುದನ್ನು ನಿಷೇಧಿಸಲಾಗಿದೆ
ಮಹಿಳೆಯರು, ಮಕ್ಕಳು ಮತ್ತು ದಲಿತರನ್ನು ಅವಮಾನಿಸುವ ವಿಷಯದ ನಿಷೇಧ
ರಾಷ್ಟ್ರೀಯ ಸಮಗ್ರತೆ ಮತ್ತು ಏಕತೆಯನ್ನು ಹಾಳುಮಾಡುವ ವಿಷಯದ ಮೇಲೆ ನಿರಂತರ ನಿಷೇಧ
ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಪ್ರಚಾರದ ಮೇಲೆ ನಿಯಂತ್ರಣ
ಸುಳ್ಳು ಅಭಿಯಾನವನ್ನು ಪ್ರಾರಂಭಿಸಿದ ಮೊದಲ ವ್ಯಕ್ತಿಯ ವಿವರಗಳನ್ನು ಬಹಿರಂಗಪಡಿಸಬೇಕು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd