ಸಿಡಿ ಘಟನೆಯೇ ದೊಡ್ಡ ಷಡ್ಯಂತ್ರ : ಸಾಮಾಜಿಕ ಕಾರ್ಯಕರ್ತ ರಾಜಶೇಖರ್ ಮುಲಾಲಿ
ಚಿಕ್ಕಮಗಳೂರು : ಸಿಡಿ ಕೇಸ್ ವಿಚಾರವಾಗಿ ಚಿಕ್ಕಮಗಳೂರಿನಲ್ಲಿ ಸಾಮಾಜಿಕ ಕಾರ್ಯಕರ್ತ ರಾಜಶೇಖರ್ ಮುಲಾಲಿ ಮಾತನಾಡಿದ್ದಾರೆ. ರಾಜಕಾರಣಿಗಳು ಗೋವಾಗೆ ಹೋಗುವುದನ್ನ ಕಡಿಮೆ ಮಾಡಬೇಕು, ಸಿಡಿ ಘಟನೆಯೇ ದೊಡ್ಡ ಷಡ್ಯಂತ್ರ, ಕರ್ನಾಟಕ ಜನ ಇದನ್ನೆಲ್ಲಾ ನೋಡೋದು ದೊಡ್ಡ ದುರಂತ, ಸಿಡಿ ಮೇಲ್ನೋಟಕ್ಕೆ ಟ್ಯಾಂಪರಡ್ ಅಂತ ಅನ್ಸತ್ತೆ, ವಿಧಿವಿಜ್ಞಾನ ಪ್ರಯೋಗಾಲಯದಿಂದ ಬಂದ ಮೇಲೆ ಗೊತ್ತಾಗುತ್ತೆ. ರಾಜಕಾರಣಿಗಳಿಗೆ ಇದು ಹವ್ಯಾಸವಾಗಿಬಿಟ್ಟಿದೆ. ಕಾಫಿ-ಟಿ, ಊಟ-ತಿಂಡಿ ಜೊತೆ ಅದನ್ನೂ ಇಟ್ಟುಕೊಂಡಿದ್ದಾರೆ. ಅವರ ಹೆಂಡತಿ-ಮಕ್ಕಳು ಹೇಗೆ ಮುಖ ಇಟ್ಕೊಂಡು ಮಾರ್ಕೇಟ್ನಲ್ಲಿ ಓಡಾಡ್ತಾರೆ. ನಮ್ಮಲ್ಲಿ ರಾಜಕಾರಣಿಗಳು ತಾಂತ್ರಿಕವಾಗಿ ಮುಗ್ಧರಿದ್ದಾರೆ. ರಾಜಕಾರಣಿಗಳು ಮುಗ್ಧತೆಯಿಂದ ದುರ್ಬಳಕೆಯಾಗಬಾರದು, ಎಚ್ಚರದಿಂದ ಇರಬೇಕು. ರಾಜಕಾರಣಿಗಳು ನಾನು ಸಾಮಾಜಿಕ ಜೀವನದಲ್ಲಿ ಇದ್ದೇನೆಂದು ಯೋಚಿಸಬೇಕು ಎಂದಿದ್ದಾರೆ.








