Indian Army: ಕಾಶ್ಮೀರ ಜನರಿಗೆ ವಿಡಿಯೋ ಮೂಲಕ ಸಂದೇಶ ನೀಡಿದ ಸೈನಿಕರು

1 min read
Kashmir Saaksha Tv

ಕಾಶ್ಮೀರ ಜನರಿಗೆ ವಿಡಿಯೋ ಮೂಲಕ ಸಂದೇಶ ನೀಡಿದ ಸೈನಿಕರು

ಶ್ರೀನಗರ: ಸಮಾಜದ ಪ್ರತಿಯೊಂದು ವರ್ಗವು ಭಯೋತ್ಪಾದನೆಯಿಂದ ನಲುಗಿದೆ. ಇದರ ವಿರುದ್ಧ ಒಟ್ಟಿಗೆ ಹೋರಾಟ ಮಾಡೋಣ ಎಂದು ಕಾಶ್ಮೀರಿಗಳಿಗೆ ಭಾರತೀಯ ಸೇನೆ ವಿಶೇಷ ಸಂದೇಶವೊಂದನ್ನು ನೀಡಿದೆ.

ಈ ಸಂದೇಶವನ್ನು ವೀಡಿಯೋ ಮುಖಾಂತ ನೀಡಿದ್ದು, ವೀಡಿಯೋದಲ್ಲಿ, ಎಲ್ಲರೂ ಒಟ್ಟಿಗೆ ಭಯೋತ್ಪಾದನೆ ವಿರುದ್ಧ ಹೋರಾಟ ಮಾಡೋಣ ಎಂದು ನಾಗರಿಕರಿಗೆ ಕರೆ ನೀಡಿದೆ.

ಈ ವಿಡಿಯೋವನ್ನು  ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ‘ಕಾಶ್ಮೀರ್ ಫೈಟ್ಸ್ ಬ್ಯಾಕ್’ ಎಂಬ ಶೀರ್ಷಿಕೆಯಡಿಯಲ್ಲಿ ಟ್ವೀಟ್ ಮಾಡಿದೆ. ಈ ಟ್ವೀಟ್‍ನಲ್ಲಿ, ಜನರು ಭಯೋತ್ಪಾದನೆಯಿಂದ ಅನುಭವಿಸುತ್ತಿರುವ ನೋವು ಕೊನೆಗೊಳಿಸಲು ಭದ್ರತಾ ಪಡೆಗಳನ್ನು ಇನ್ನಷ್ಟು ಬಲಪಡಿಸಬೇಕು. ನಮ್ಮ ಸೇನೆ ಜೊತೆಗೆ ನಾಗರಿಕರು ಕೈಜೋಡಿಸಬೇಕು ಎಂದು ಕೇಳಿಕೊಂಡರು.

The Kashmir Saaksha Tv

ಇನ್ನೂ ವೀಡಿಯೋದಲ್ಲಿ, ಕಾಶ್ಮೀರಿ ಪಂಡಿತರ ನಿರ್ಗಮನ, ರಕ್ಷಣಾ ಕಾರ್ಯಾಚರಣೆಗಳು ಮತ್ತು ಕಲ್ಲು ತೂರಾಟದ ದೃಶ್ಯಗಳನ್ನು ತೋರಿಸಲಾಗಿದೆ.

ಅಲ್ಲದೇ ಶುಜಾತ್ ಬುಖಾರಿ, ಅರ್ಜುಮಂಡ್ ಮಜೀದ್, ಮಖನ್ ಲಾಲ್ ಬಿಂದ್ರೂ, ಸರಪಂಚ್ ಅಜಯ್ ಪಂಡಿತ್, ಸುಪಿಂದರ್ ಕೌರ್, ವಾಸಿಂ ಬಾರಿ, ಲೆಫ್ಟಿನೆಂಟ್ ಉಮರ್ ಫಯಾಜ್, ಅಯೂಬ್ ಪಂಡಿತ್ ಮತ್ತು ಪರ್ವೇಜ್ ಅಹ್ಮದ್ ದಾರ್ ಸೇರಿದಂತೆ ಭಯೋತ್ಪಾದಕರಿಂದ ಹತ್ಯೆಗೀಡಾದ ಕಾಶ್ಮೀರಿಗಳಿಗೆ ವೀಡಿಯೋ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಗಿದೆ.

ಕೊನೆಯಲ್ಲಿ, ಈ ಹೋರಾಟದಲ್ಲಿ ಕಾಶ್ಮೀರ ಏಕಾಂಗಿಯಾಗಿಲ್ಲ. ನಿಮ್ಮೊಂದಿಗೆ ನಾವಿದ್ದೇವೆ. ಒಟ್ಟಾಗಿ ನಾವು ಈ ಹೋರಾಟವನ್ನು ಗೆಲ್ಲುತ್ತೇವೆ. ಯಾರು ಬೇಕಾದರೂ ನಮ್ಮ ಜೊತೆ ಕೈಜೋಡಿಸಿ ಎಂದು ಬರೆದು ಭಾರತೀಯ ಸೇನೆ ಕರೆ ನೀಡಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd