ಬಿಜೆಪಿಯ ಅಭ್ಯರ್ಥಿ ಸೋಲಿಗೆ ಬಿಜೆಪಿಯ ಕೆಲ ನಾಯಕರೇ ಕಾರಣ : ವಿಶ್ವನಾಥ್ BJP saaksha tv
ಮೈಸೂರು : ತಾನೇ ಮಹಾನ್ ಬುದ್ಧಿವಂತ ನಾನೇ ಪಂಡಿತ ಎಂದು ಬಿಂಬಿಸಿಕೊಳ್ಳುವ ರಮೇಶ್ ಕುಮಾರ್ ಎಂತಹ ಮನ್ನುಷ್ಯ ರಾಜ್ಯದ ಜನರ ಮುಂದೆ ಸಾಬೀತಾಗಿದೆ ಎಂದು ಎಂಎಲ್ ಸಿ ಹೆಚ್ ವಿಶ್ವನಾಥ್ ಹೇಳಿದ್ದಾರೆ.
ಸದನದಲ್ಲಿ ರಮೇಶ್ ಕುಮಾರ್ ರೇಪ್ ಕುರಿತ ಮಾತಿನ ವಿಚಾರ ವಾಗಿ ಮೈಸೂರಿನಲ್ಲಿ ಮಾತನಾಡಿದ ಅವರು, ರಮೇಶ್ ಕುಮಾರ್ ಸ್ಪೀಕರ್ ಆಗಿದ್ದವರು. ಯಾವ ವಿಚಾರ ಹೇಗೆ ಮಾತಾಡಬೇಕೆಂದು ಅರಿಯಬೇಕಿತ್ತು. ತಾನೇ ಮಹಾನ್ ಬುದ್ಧಿವಂತ ನಾನೇ ಪಂಡಿತ ಎಂದು ಬಿಂಬಿಸಿಕೊಳ್ಳುವ ರಮೇಶ್ ಕುಮಾರ್ ಎಂತಹ ಮನ್ನುಷ್ಯ ರಾಜ್ಯದ ಜನರ ಮುಂದೆ ಸಾಬೀತಾಗಿದೆ. ಅವರ ಎಲ್ಲಾ ಕಥೆಗಳು ಎಲ್ಲರಿಗು ಗೊತ್ತು. ನಾನು ಆ ಕಥೆ ಹೇಳಿದರೆ, ನನ್ನನ್ನ ಹುಚ್ಚ ಅಂತ ಹೇಳುತ್ತಾರೆ. ಅವರ ಸಭ್ಯಸ್ಥಿಗೆ ನಿನ್ನೆ ಸದನದಲ್ಲಿ ಗೊತ್ತಾಗಿದೆ ಎಂದು ಕಿಡಿಕಾರಿದರು.
ಇದೇ ವೇಳೆ ಮೈಸೂರು ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಸೋತ ವಿಚಾರವಾಗಿ ಮಾತನಾಡಿದ ವಿಶ್ವನಾಥ್, ಕೆಲ ಬಿಜೆಪಿ ನಾಯಕರೇ ಅಮಾಯಕ ರಘುರನ್ನ ಬಲಿ ಕೊಟ್ಟರು. ಬಿಜೆಪಿಯ ಅಭ್ಯರ್ಥಿ ಸೋಲಿಗೆ ಬಿಜೆಪಿಯ ಕೆಲ ನಾಯಕರೇ ಕಾರಣ. ಮೈಸೂರು ಭಾಗದಲ್ಲಿ ಬಿಜೆಪಿಯ ಕೆಲ ನಾಯಕರು ಜೆಡಿಎಸ್ ಏಜೆಂಟರ್‌ಗಳಾಗಿದ್ದಾರೆ. ಜೆಡಿಎಸ್ ಏಜೆಂಟ್‌ಗಳಾಗಿ ಬಿಜೆಪಿಗೆ ಒಳ ಏಟು ಹೊಡೆಯುತ್ತಿದ್ದಾರೆ. ಅಂತಹ ನಾಯಕರ ಹೆಸರುಗಳು ಆದಷ್ಟು ಬೇಗ ತೇಲಿ ಬರುತ್ತದೆ. ಇವರ ಒಳ ಏಟಿಗೆ ಬಿಜೆಪಿ ಅಭ್ಯರ್ಥಿ ಬಲಿಯಾದರು. ಕೊಟ್ಟ ದುಡ್ಡ ಸಮರ್ಪಕವಾಗಿ ತಲುಪಲಿಲ್ಲ. ಕೆಲವರು ಜೆಡಿಎಸ್ ಪರವಾಗೆ ಕೆಲಸ ಮಾಡಿದರು ಎಂದು ಆರೋಪ ಮಾಡಿದರು.